ಕೋಲ್ಕತ್ತ: ಶಿವರಾಜ್ ಸಿಂಗ್ ಹೆಲಿಕಾಪ್ಟರ್ಗೂ ಅವಕಾಶ ನಿರಾಕರಣೆ

ಕೋಲ್ಕತ್ತ: ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರ ಹೆಲಿಕಾಪ್ಟರ್ ಇಳಿಯಲು ಜಿಲ್ಲಾಡಳಿತ ಅವಕಾಶ ನೀಡದ ಕಾರಣ ಮುರ್ಷಿದಾಬಾದ್ ರ್ಯಾಲಿ ರದ್ದುಗೊಳಿಸಲಾಗಿದೆ ಎಂದು ಪಶ್ಚಿಮ ಬಂಗಾಳ ಬಿಜೆಪಿ ಘಟಕ ಬುಧವಾರ ತಿಳಿಸಿದೆ.
ಪಶ್ಚಿಮ ಮಿಡ್ನಾಪುರ ಜಿಲ್ಲೆಯ ಖರಗ್ಪುರ ಹಾಗೂ ಮುರ್ಷಿದಾಬಾದ್ ಜಿಲ್ಲೆ ಬಹರಾಮ್ಪುರದಲ್ಲಿ ಆಯೋಜಿಸಿದ್ದ ರ್ಯಾಲಿಗಳಲ್ಲಿ ಚೌಹಾಣ್ ಅವರು ಭಾಗಿಯಾಗಬೇಕಿತ್ತು. ಬಹರಾಮ್ಪುರದಲ್ಲಿ ಕಾಪ್ಟರ್ ಇಳಿಯಲು ಅವಕಾಶ ನೀಡದ ಕಾರಣ ಅವರು ರಸ್ತೆ ಮೂಲಕ ಪ್ರಯಾಣಿಸಿ, ಖರಗ್ಪುರ ರ್ಯಾಲಿಯಲ್ಲಿ ಭಾಗಿಯಾಗಲಿದ್ದಾರೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಯಂತನು ಬಸು ಹೇಳಿದ್ದಾರೆ.
‘ಬಿಜೆಪಿ ವಿರುದ್ಧ ಪಶ್ಚಿಮ ಬಂಗಾಳ ಸರ್ಕಾರವು ರಾಜಕೀಯ ಮಾಡುತ್ತಿದೆ. ಯೋಗಿ ಆದಿತ್ಯನಾಥ, ಸ್ಮೃತಿ ಇರಾನಿ ಅವರ ಕಾಪ್ಟರ್ಗೂ ಅವಕಾಶ ನೀಡಿರಲಿಲ್ಲ. ಇದು ಹೊಸದೇನೂ ಅಲ್ಲ. ನಮ್ಮ ದಾರಿಯಲ್ಲಿ ನಾವೂ ಹೋರಾಟ ಮಾಡುತ್ತೇವೆ’ ಎಂದು ಅವರು ಹೇಳಿದ್ದಾರೆ.
West Bengal: Former Madhya Pradesh CM Shivraj Singh Chouhan halts at an eatery in Kolaghat after his rally and interacts with public. pic.twitter.com/z5WPJFmZcl
— ANI (@ANI) February 6, 2019
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.