ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲ್ಲರಿಗೂ ಸ್ವಾಗತ ಅನ್ನುವ ಒಂದಾದರೂ ದೇಶ ತೋರಿಸಿ: ಸಿಎಎ ಬಗ್ಗೆ ಜೈಶಂಕರ್ 

Last Updated 7 ಮಾರ್ಚ್ 2020, 11:25 IST
ಅಕ್ಷರ ಗಾತ್ರ

ನವದೆಹಲಿ: ವಿದೇಶಾಂಗ ಸಚಿವಜೈಶಂಕರ್ಎಲ್ಲರಿಗೂ ಸ್ವಾಗತ ಅನ್ನುವ ಒಂದಾದರೂ ದೇಶವನ್ನು ತೋರಿಸಿ ಎಂದು ಹೇಳುವ ಮೂಲಕ ಸಿಎಎ ವಿರೋಧಿಸುವವರಿಗೆ ಟಾಂಗ್‌ ಕೊಟ್ಟಿದ್ದಾರೆ.

ಜಮ್ಮು ಮತ್ತು ಕಾಶ್ಮೀರದಲ್ಲಿನ ಪರಿಸ್ಥಿತಿ ಬಗ್ಗೆ ಮಾನವ ಹಕ್ಕುಗಳ ಆಯೋಗದ ನಿರ್ದೇಶಕರು ಮಾಡಿರುವ ಆರೋಪವನ್ನು ಟೀಕಿಸಿದ ಜೈಶಂಕರ್‌ಈ ಹಿಂದೆ ವಿಶ್ವವಿಸಂಸ್ಥೆ ನಿಯೋಗಕಾಶ್ಮೀರಕ್ಕೆ ಭೇಟಿಮಾಡಿದ್ದ ವರದಿಯ ದಾಖಲೆಗಳನ್ನು ನೋಡುವಂತೆ ಹೇಳಿದ್ದಾರೆ.

ಎಕನಾಮಿಕ್ಸ್‌ ಟೈಮ್ಸ್‌ ಗ್ಲೋಬಲ್‌ ಬ್ಯುಸಿನೇಸ್‌ ಕಾರ್ಯಕ್ರಮದಲ್ಲಿ ಮಾಧ್ಯಮದವರು ಕೇಳಿದ ಸಿಎಎ ಪ್ರಶ್ನೆಗೆ ’ಈ ಕಾಯ್ದೆ ಮೂಲಕ ವಲಸಿಗರ ಸಂಖ್ಯೆಯನ್ನು ಕಡಿಮೆ ಮಾಡಲು ಯತ್ನಿಸುತ್ತಿದ್ದೇವೆ, ಇದಕ್ಕೆ ಪ್ರಶಂಸೆ ವ್ಯಕ್ತಪಡಿಸಬೇಕು. ಈ ಮೂಲಕ ನಾವು ಯಾವುದೇ ದೊಡ್ಡ ಸಮಸ್ಯೆಯನ್ನು ಸೃಷ್ಟಿಸುತ್ತಿಲ್ಲ‘ ಎಂದುಜೈಶಂಕರ್ ಸ್ಪಷ್ಟಪಡಿಸಿದರು.

ಪ್ರಪಂಚದಲ್ಲಿರುವ ಎಲ್ಲರಿಗೂ ಸ್ವಾಗತ ಎಂದು ಹೇಳುವ ಒಂದು ದೇಶವನ್ನು ನನಗೆ ತೋರಿಸಿ ಎಂದರು.ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವದಿಂದ (ಆರ್‌ಸಿಇಪಿ) ಹೊರ ಹೋಗುವುದು ವ್ಯವಹಾರಿಕ ದೃಷ್ಟಿಯಿಂದ ಒಳ್ಳೆಯದು ಎಂದು ಅವರು ಅಭಿಪ್ರಾಯಪಟ್ಟರು

ಮಾನವ ಹಕ್ಕುಗಳ ನಿರ್ದೇಶಕರು ಈ ಹಿಂದೆಯೂ ತಪ್ಪು ಹೇಳಿದ್ದರು ಅವರು ದಾಖಲೆಗಳನ್ನು ಒಮ್ಮೆ ನೋಡಲಿ ಎಂದು ಜೈಶಂಕರ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT