ಶುಕ್ರವಾರ, ಜೂನ್ 5, 2020
27 °C

ಕೊರೊನಾ ಸೋಂಕು ನೆಗೆಟಿವ್: ಗಾಯಕಿ ಕನ್ನಿಕಾ ಕಪೂರ್ ಆಸ್ಪತ್ರೆಯಿಂದ ಬಿಡುಗಡೆ

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

ಲಕನೌ: ಕೊರೊನಾ ಸೋಂಕು ಪಾಸಿಟಿವ್ ಎಂದು ಪತ್ತೆಯಾದ ಗಾಯಕಿ ಕನ್ನಿಕಾ ಕಪೂರ್ ಅವರಿಗೆ ಸುದೀರ್ಘ ಚಿಕಿತ್ಸೆ ಮತ್ತು ತಪಾಸಣೆ ನಂತರ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ.

ಮಾರ್ಚ್‌‌ನಲ್ಲಿ ಲಂಡನ್‌ನಿಂದ ವಾಪಸಾಗಿದ್ದ ಕನ್ನಿಕಾಕಪೂರ್ ಅವರನ್ನು ಇಲ್ಲಿನ ರಾಜೀವ್ ಗಾಂಧಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆರನೇ ಬಾರಿಗೆ ಪರೀಕ್ಷೆ ನಡೆಸಿದ ವೈದ್ಯರು ಕೊರೊನಾ ಸೋಂಕು ನೆಗೆಟಿವ್ ಎಂದು ಬಂದ ಕಾರಣ ಬಿಡುಗಡೆ ಮಾಡಿದ್ದಾರೆ ಎಂದು ಎಎನ್ಐ ವರದಿ ಮಾಡಿದೆ.

ಸಂಗೀತ ಕಾರ್ಯಕ್ರಮ ಪ್ರಯುಕ್ತ ಹಲವೆಡೆ ಸಂಚರಿಸಿದ್ದ ಕನ್ನಿಕಾ ಕಪೂರ್ ಜ್ವರ ಹಾಗೂ ಶೀತದಿಂದಾಗಿ ಅನಾರೋಗ್ಯಕ್ಕೆ ಒಳಗಾಗಿದ್ದರು. ಕೂಡಲೆ ಅವರನ್ನು ತಪಾಸಣೆ ನಡೆಸಿದ ವೈದ್ಯರು ಕೊರೊನಾ ಸೋಂಕು ಪರೀಕ್ಷೆ ನಡೆಸಿದ್ದರು. ನಂತರ ವರದಿಯಲ್ಲಿ ಪಾಸಿಟಿವ್ ಎಂದು ಬಂದ ಕಾರಣ ಕೂಡಲೆ ಅವರನ್ನು ಆಸ್ಪತ್ರೆಗೆ ದಾಖಲಿಸಿ ಪ್ರತ್ಯೇಕ ಕೊಠಡಿಯಲ್ಲಿ ಚಿಕಿತ್ಸೆ ನೀಡಲಾಗಿತ್ತು.

ಈ ಸಂಬಂಧ ಕನ್ನಿಕಾಕಪೂರ್ ಕೊರೊನಾ ಸೋಂಕಿದ್ದರೂ ನಿರ್ಲಕ್ಷ್ಯ ತೋರಿದ್ದಾರೆ ಎಂದು ಆರೋಪಿಸಿ ಲಕನೌ ಪೊಲೀಸರು ಮೂರು ಪೊಲೀಸ್ ಠಾಣೆಗಳಲ್ಲಿ ಪ್ರತ್ಯೇಕವಾಗಿ ಎಫ್ ಐಆರ್ ದಾಖಲಿಸಿಕೊಂಡಿದ್ದರು. ಈ ಸಂಬಂಧ ಕನ್ನಿಕಾ ಅವರನ್ನು ಭೇಟಿಯಾಗಿದ್ದ ಹಲವು ಮಂದಿ ವಿಐಪಿಗಳು ಸ್ವಯಂ ಕ್ರಾರಂಟೈನ್‌ಗೆ ಒಳಪಟ್ಟಿದ್ದರು.

ಇದನ್ನೂ ಓದಿ: ಕೊರೊನಾ ನಿರ್ಲಕ್ಷ್ಯ: ಗಾಯಕಿ ಕನಿಕಾ ಕಪೂರ್‌ ವಿರುದ್ಧ ಎಫ್‌ಐಆರ್

ವಿಐಪಿಗಳಲ್ಲಿ ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ವಸುಂಧರಾರಾಜೇ, ಬಿಜೆಪಿ ಸಂಸದ ದುಶ್ಯಂತ ಸಿಂಗ್ ಸ್ವಯಂ ಕ್ವಾರಂಟೈನ್‌ಗೆ ಒಳಪಡಿಸಿಕೊಂಡ ಪ್ರಮುಖರು.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು