ಭಾನುವಾರ, ಏಪ್ರಿಲ್ 5, 2020
19 °C

ಟ್ರಂಪ್ ಆಗಮನಕ್ಕೆ ಕ್ಷಣಗಣನೆ ಮೊಟೆರಾ ಕ್ರೀಡಾಂಗಣದಲ್ಲಿ ‘ಮನರಂಜನೆ’

ಸಿದ್ದಯ್ಯ ಹಿರೇಮಠ Updated:

ಅಕ್ಷರ ಗಾತ್ರ : | |

ಅಹಮದಾಬಾದ್ (ಗುಜರಾತ್): ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭೇಟಿಗೆ ಕ್ಷಣಗಣನೆ ಆರಂಭವಾಗಿದೆ.

ಪ್ರಧಾನಿ ಮೋದಿ ಹಾಗೂ ಟ್ರಂಪ್ ಆಗಮನಕ್ಕಾಗಿ ಇಲ್ಲಿನ ಮೊಟೆರಾದ ಸರ್ದಾರ್ ಪಟೇಲ್ ಕ್ರೀಡಾಂಗಣದಲ್ಲಿ ಕಾದು ಕುಳಿತಿರುವ ಜನರನ್ನು ರಂಜಿಸಲು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

ಜನರನ್ನು ರಂಜಿಸಲು ದೇಶ ವಿದೇಶಗಳ ಖ್ಯಾತ ಕಲಾವಿದರನ್ನು ಆಹ್ವಾನಿಸಲಾಗಿದೆ. ಬಾಲಿವುಡ್ ಗಾಯಕ ಕೈಲಾಶ್ ಖೇರ್ ಪ್ರಮುಖ ಕಲಾವಿದರಾಗಿದ್ದು, ಸ್ಥಳೀಯ ಕಲಾವಿದೆ ಕಿಂಜಲ್ ದವೆ, ಕೀರ್ತಿ ಮತ್ತಿತರರ ತಂಡ ದೇಶ ಭಕ್ತಿ ಗೀತೆಗಳನ್ನು ಪ್ರಸ್ತುತಪಡಿಸುತ್ತಿದೆ.  ಯುವ ಜನಪದ ಕಲಾವಿದರು ಗಾಯನಕ್ಕೆ ತಕ್ಕಂತೆ ನೃತ್ಯ ಪ್ರದರ್ಶಿಸುತ್ತ ಜನರನ್ನು ರಂಜಿಸುತ್ತಿದ್ದಾರೆ.

ಗುಜರಾತಿ ಭಾಷೆಯಲ್ಲಿ ಕೆಲವು ಗೀತೆಗಳನ್ನು ಹಾಡುವ ಮೂಲಕ  ಪ್ರೇಕ್ಷಕರನ್ನು ರಂಜಿಸುತ್ತಿರುವ ಕಲಾವಿದರು, ಹಿಂದಿಯ ಪ್ರಸಿದ್ಧ ಗೀತೆಗಳನ್ನೂ ಪ್ರಸ್ತುತಪಡಿಸುತ್ತಿದ್ದಾರೆ.

ಟ್ರಂಪ್ ಆಗಮನಕ್ಕೆ ಇನ್ನೂ ಎರಡು ಗಂಟೆ ಕಾಯಬೇಕಿರುವ‌ ಜನರಿಗೆ ಈ ಮನರಂಜನಾ ಕಾರ್ಯಕ್ರಮಗಳು ಕುಳಿತ ಸ್ಥಳದಿಂದ ಏಳದಂತೆ ತಡೆಯುವಲ್ಲಿ ಯಶಸ್ವಿಯಾಗಿವೆ. ಬೆಳಿಗ್ಗೆ 11ರ ವೇಳೆಗೆ ಶೇ 75ರಷ್ಟು ತುಂಬಿರುವ ಕ್ರೀಡಾಂಗಣದತ್ತ ಜನಸಮೂಹ ಧಾವಿಸುತ್ತಿದೆ.

ಒಂದೂವರೆ ಗಂಟೆ ಕಾಲ  ನಡೆಯಲಿರುವ 'ನಮಸ್ತೆ ಟ್ರಂಪ್' ಕಾರ್ಯಕ್ರಮದ ವೇದಿಕೆಯಲ್ಲಿ ಟ್ರಂಪ್ ಹಾಗೂ ಮೋದಿ ಭಾಷಣ ಮಾಡಲಿದ್ದಾರೆ‌.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು