ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಕ್ಷಿಣ ರಾಜ್ಯಗಳಲ್ಲಿ ಲಿಂಗಾನುಪಾತ ಕುಸಿತ

Last Updated 18 ಫೆಬ್ರುವರಿ 2019, 19:44 IST
ಅಕ್ಷರ ಗಾತ್ರ

ನವದೆಹಲಿ: ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದ ನಾಲ್ಕು ರಾಜ್ಯಗಳಲ್ಲಿ ಜನನ ಲಿಂಗಾನುಪಾತ (ಎಸ್‌ಆರ್‌ಬಿ) ಗಮನಾರ್ಹ ಪ್ರಮಾಣದಲ್ಲಿ ಇಳಿಕೆ ಕಂಡಿದೆ.

2007ರಲ್ಲಿ 1004ರಷ್ಟಿದ್ದ ಕರ್ನಾಟಕದ ಲಿಂಗಾನುಪಾತ 2016ರ ವೇಳೆಗೆ 896ಕ್ಕೆ ಕುಸಿದಿರುವುದು ಎಚ್ಚರಿಕೆಯ ಗಂಟೆಯಾಗಿದೆ.

ದಕ್ಷಿಣ ರಾಜ್ಯಗಳ ಪೈಕಿ ಕೇರಳದ ಲಿಂಗಾನುಪಾತ ಮಾತ್ರ 10 ಅಂಕಗಳಷ್ಟು ಸುಧಾರಣೆ ಕಂಡಿರುವುದೊಂದೇ ಸಮಾಧಾನಕರ ಅಂಶವಾಗಿದೆ. 2016ರ ರಾಷ್ಟ್ರೀಯ ಲಿಂಗಾನುಪಾತ ಸುಧಾರಣೆ ರ‍್ಯಾಂಕಿಂಗ್‌ ಪಟ್ಟಿಯಲ್ಲಿ 954 ಅಂಕಗಳೊಂದಿಗೆ ಕೇರಳ ಆರನೇ ಸ್ಥಾನದಲ್ಲಿದೆ.

ಸಾವಿರ ಪುರುಷರಿಗೆ ಮಹಿಳೆಯರ ಸಂಖ್ಯೆಯನ್ನು ಲಿಂಗಾನುಪಾತ ಅಳೆಯಲು ಗಣನೆಗೆ ತೆಗೆದುಕೊಳ್ಳಲಾಗುತ್ತದೆ. 2007ನೇ ವರ್ಷವನ್ನು ಮೂಲ ವರ್ಷವನ್ನಾಗಿರಿಸಿಕೊಂಡು ಈ ವಿಶ್ಲೇಷಣೆ ಮಾಡಲಾಗಿದ್ದು, ದಕ್ಷಿಣ ರಾಜ್ಯಗಳಷ್ಟೇ ಅಲ್ಲ, ಒಟ್ಟಾರೆ ದೇಶದ ಲಿಂಗಾನುಪಾತವೂ 26 ಅಂಕಗಳಷ್ಟು ಇಳಿಕೆ ಕಂಡಿದೆ.

2007ರಿಂದ 2016ರ ಅವಧಿಯಲ್ಲಿ ಆಂಧ್ರ ಪ್ರದೇಶ ಮತ್ತು ರಾಜಸ್ಥಾನದಲ್ಲಿ ಲಿಂಗಾನುಪಾತ 168 ಅಂಕಗಳಷ್ಟು ಇಳಿಕೆಯೊಂದಿಗೆ ದಿಗಿಲು ಹುಟ್ಟಿಸುವಷ್ಟು ಪ್ರಮಾಣದಲ್ಲಿ ಕುಸಿತ ಕಂಡಿದೆ ಎಂದು ವರದಿ ಹೇಳಿದೆ.

2016ರ ನಾಗರಿಕ ನೋಂದಣಿ ವ್ಯವಸ್ಥೆಯಲ್ಲಿ ನಮೂದಿಸಲಾದ ಅಂಕಿ–ಸಂಖ್ಯೆ ಆಧರಿಸಿ ಗ್ಲೋಬಲ್‌ ಹೆಲ್ತ್ ಸ್ಟ್ರಾಟಜೀಸ್‌ ಸಂಸ್ಥೆಯು ದೇಶದಲ್ಲಿಯ ಲಿಂಗಾನುಪಾತ ಮತ್ತು ಶಿಶುಗಳ ಮರಣ ಪ್ರಮಾಣಗಳ ವರದಿ ಬಿಡುಗಡೆ ಮಾಡಿದೆ.

ಇದನ್ನು ಗಮನಿಸಿದಾಗ ಲಿಂಗ ಆಧರಿತ ಗರ್ಭಪಾತ ಪ್ರಕರಣಗಳಿಗೆ ಇನ್ನೂ ಕಡಿವಾಣ ಬಿದ್ದಿಲ್ಲ ಎಂಬ ಅನುಮಾನಗಳು ಹುಟ್ಟಿಕೊಂಡಿವೆ.

ಶಿಶುಗಳ ಮರಣ ಪ್ರಮಾಣ: ಮೂರನೇ ಸ್ಥಾನದಲ್ಲಿ ಕರ್ನಾಟಕ
* 2007ರಿಂದ 2016ರ ಅವಧಿಯಲ್ಲಿ ಕರ್ನಾಟಕ, ತೆಲಂಗಾಣದಲ್ಲಿ ಶಿಶುಗಳ ಮರಣ ಪ್ರಮಾಣ ಹೆಚ್ಚಾಗಿದ್ದು, ರಾಷ್ಟ್ರೀಯ ರ‍್ಯಾಂಕಿಂಗ್‌ ಪಟ್ಟಿಯಲ್ಲಿ ಕರ್ನಾಟಕಮೂರನೇ ಸ್ಥಾನದಲ್ಲಿದೆ.

* 2007ರಲ್ಲಿ ಕರ್ನಾಟಕದಲ್ಲಿ 11,726ರಷ್ಟಿದ್ದ ಶಿಶುಗಳ ಮರಣ ಪ್ರಮಾಣ 2016ರ ವೇಳೆಗೆ 12,052ಕ್ಕೆ ಏರಿಕೆಯಾಗಿದೆ. ಅಂದರೆ 326ರಷ್ಟು ಹೆಚ್ಚಾಗಿದೆ.

* ಆದರೆ, ಆಂಧ್ರ ಪ್ರದೇಶ, ತಮಿಳುನಾಡು ಮತ್ತು ಕೇರಳದಲ್ಲಿ ಶಿಶುಗಳ ಮರಣ ಪ್ರಮಾಣ ಇಳಿಕೆಯಾಗಿದೆ. ಒಟ್ಟಾರೆಯಾಗಿ ಈ ಅವಧಿಯಲ್ಲಿ ರಾಷ್ಟ್ರೀಯ ಮಟ್ಟದಲ್ಲಿಯೂಈ ಪ್ರಮಾಣ ಸಾಕಷ್ಟು ಕಡಿಮೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT