ಸರ್ದಾರ್ ವಲ್ಲಭಭಾಯಿ ಏಕತಾಮೂರ್ತಿ ಸ್ಥಳಕ್ಕೆ ರೈಲು ಸಂಪರ್ಕ

7

ಸರ್ದಾರ್ ವಲ್ಲಭಭಾಯಿ ಏಕತಾಮೂರ್ತಿ ಸ್ಥಳಕ್ಕೆ ರೈಲು ಸಂಪರ್ಕ

Published:
Updated:
Deccan Herald

ನವದೆಹಲಿ: ಗುಜರಾತಿನ ನರ್ಮದಾ ಜಿಲ್ಲೆಯಲ್ಲಿ ಇತ್ತೀಚೆಗೆ ನಿರ್ಮಿಸಿರುವ ಸರ್ದಾರ್ ವಲ್ಲಭಭಾಯಿ ಅವರ ಏಕತಾ ಮೂರ್ತಿ ಸ್ಥಳಕ್ಕೆ ತೆರಳಲು ರೈಲು ಸಂಪರ್ಕ ಕಲ್ಪಿಸಲಾಗುತ್ತಿದೆ. 

ಪಟೇಲ್ ವಿಗ್ರಹದಿಂದ 3.5 ಕಿ.ಮೀ ದೂರದಲ್ಲಿರುವ ಕೆವಡಿಯ ಗ್ರಾಮದಲ್ಲಿ ರೈಲ್ವೆ ನಿಲ್ದಾಣ ನಿರ್ಮಸಲಾಗುತ್ತದೆ. ರಾಷ್ಟ್ರಪತಿ ರಾಮನಾಥ ಕೋವಿಂದ್ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರು ಡಿಸೆಂಬರ್ 15ರಂದು ಇದಕ್ಕೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.

ಈ ಸ್ಥಳಕ್ಕೆ ನಿತ್ಯ 15 ಸಾವಿರ ಪ್ರವಾಸಿಗರು ಭೇಟಿ ನೀಡುತ್ತಿದ್ದು, ಅವರ ಅನುಕೂಲಕ್ಕಾಗಿ ರೈಲು ಸಂಪರ್ಕ ಕಲ್ಪಿಸಲಾಗುತ್ತಿದೆ. ರೈಲ್ವೆ ನಿಲ್ದಾಣವು ಆಧುನಿಕ ಸೌಲಭ್ಯಗಳನ್ನು ಹೊಂದಿರಲಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.  

 

ಬರಹ ಇಷ್ಟವಾಯಿತೆ?

 • 5

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !