ವಿದೇಶ ಪ್ರಯಾಣ: ತರೂರ್‌ಗೆ ಅನುಮತಿ

7

ವಿದೇಶ ಪ್ರಯಾಣ: ತರೂರ್‌ಗೆ ಅನುಮತಿ

Published:
Updated:

ನವದೆಹಲಿ: ಸುನಂದಾ ಪುಷ್ಕರ ನಿಗೂಢ ಸಾವಿನ ಪ್ರಕರಣದಲ್ಲಿ ವಿಚಾರಣೆ ಎದುರಿಸುತ್ತಿರುವ ಕಾಂಗ್ರೆಸ್‌ ಸಂಸದ ಶಶಿ ತರೂರ್‌ ಅವರಿಗೆ ವಿದೇಶಕ್ಕೆ ತೆರಳಲು ದೆಹಲಿ ಕೋರ್ಟ್‌ ಬುಧವಾರ ಅನುಮತಿ ನೀಡಿದೆ.

ಡಿಸೆಂಬರ್‌ವರೆಗೆ, ಅಮೆರಿಕ, ಕೆನಡಾ, ಜರ್ಮನಿ ಸೇರಿದಂತೆ ಐದು ರಾಷ್ಟ್ರಗಳ ಎಂಟು ಸ್ಥಳಗಳಿಗೆ ಪ್ರಯಾಣ ಮಾಡಲು ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್‌ ಮ್ಯಾಜಿಸ್ಟ್ರೇಟ್‌ ಸಮರ್‌ ವಿಶಾಲ್‌ ಅನುಮತಿ ನೀಡಿದರು.

‘₹2 ಲಕ್ಷ ಠೇವಣಿ ಇಡಬೇಕು. ವಿದೇಶದಿಂದ ಮರಳಿದ ನಂತರ ಅದನ್ನು ವಾಪಸ್‌ ನೀಡಲಾಗುವುದು. ತನಿಖಾಧಿಕಾರಿಗೆ ಹಾಗೂ ನ್ಯಾಯಾಲಯಕ್ಕೆ ಪ್ರಯಾಣದ ವಿವರಗಳನ್ನು ನೀಡಬೇಕು. ಸುನಂದಾ ಪುಷ್ಕರ ಸಾವಿನ ಪ್ರಕರಣದ ಸಾಕ್ಷಿಗಳ ಮೇಲೆ ಯಾವುದೇ ಪ್ರಭಾವ ಬೀರಬಾರದು’ ಎಂದು ಷರತ್ತು ವಿಧಿಸಿ ವಿದೇಶಕ್ಕೆ ತೆರಳಲು ಅನುಮತಿ ನೀಡಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !