ಅತ್ಯಾಚಾರ ಕಾನೂನಿನಲ್ಲಿ ಲಿಂಗಭೇದ ಬೇಡ ಎಂದ ಅರ್ಜಿ ಪರಿಗಣಿಸಲಿಲ್ಲ ಸುಪ್ರೀಂಕೋರ್ಟ್

7

ಅತ್ಯಾಚಾರ ಕಾನೂನಿನಲ್ಲಿ ಲಿಂಗಭೇದ ಬೇಡ ಎಂದ ಅರ್ಜಿ ಪರಿಗಣಿಸಲಿಲ್ಲ ಸುಪ್ರೀಂಕೋರ್ಟ್

Published:
Updated:

ನವದೆಹಲಿ: ಭಾರತೀಯ ಅಪರಾಧ ಸಂಹಿತೆಯ (ಐಪಿಸಿ) ಸೆಕ್ಷನ್ 375ರ ಅನ್ವಯ ರೂಪುಗೊಂಡಿರುವ ಅತ್ಯಾಚಾರ ಕಾನೂನು ‘ಲಿಂಗ ತಟಸ್ಥ’ ಅಲ್ಲ. ಅದರ ತಿದ್ದುಪಡಿ ಆಗಬೇಕು ಎಂದು ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆಗೆ ಕೈಗೆತ್ತಿಕೊಳ್ಳಲು ಸುಪ್ರೀಂಕೋರ್ಟ್ ಸೋಮವಾರ ನಿರಾಕರಿಸಿತು.

‘ಈ ವಿಷಯವು ಶಾಸಕಾಂಗದ ವ್ಯಾಪ್ತಿಗೆ ಬರುವುದರಿಂದ ಈ ಹಂತದಲ್ಲಿ ನಾವು ಮಧ್ಯಪ್ರವೇಶಿಸಲು ಸಾಧ್ಯವಿಲ್ಲ. ಇದು ಸೂಕ್ತ ಸಮಯವೂ ಅಲ್ಲ’ ಎಂದು ಸುಪ್ರೀಂಕೋರ್ಟ್ ಸೋಮವಾರ ಅಭಿಪ್ರಾಯಪಟ್ಟಿತು.

ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಮತ್ತು ನ್ಯಾಯಮೂರ್ತಿ ಎಸ್.ಕೆ.ಕೌಲ್ ಅವರಿದ್ದ ನ್ಯಾಯಪೀಠವು, ‘ಪುರುಷನ ಮೇಲೆ ಅತ್ಯಾಚಾರ ಎಸಗಿದ್ದಕ್ಕೆ ಮಹಿಳೆಯನ್ನು ಅಥವಾ ಮತ್ತೊಬ್ಬ ಪುರುಷನ ಮೇಲೆ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ಪುರುಷನನ್ನು ಏಕೆ ದೋಷಿ ಎಂದು ಪರಿಗಣಿಸಬಾರದು?’ ಎಂದು ಪ್ರಶ್ನಿಸಿತು.

2013ರಲ್ಲಿ ತಿದ್ದುಪಡಿಗೊಂಡ ಲೈಂಗಿಕ ದೌರ್ಜನ್ಯ ಕಾಯ್ದೆಯು ಅತ್ಯಾಚಾರದ ವ್ಯಾಪ್ತಿಯನ್ನು ವಿಸ್ತರಿಸಿತು. ಆದರೆ ಪುರುಷರು ಅಥವಾ ಲಿಂಗ ಪರಿವರ್ತಿತರನ್ನು ಸಂತ್ರಸ್ಥರು ಎಂದು ಪರಿಗಣಿಸಲು ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಪುರುಷನಿಂದ ಮಹಿಳೆಯ ಮೇಲೆ ಆಗುವ ಅತ್ಯಾಚಾರವನ್ನು ಮಾತ್ರ ಐಪಿಸಿ ಸೆಕ್ಷನ್ 375 ಅಪರಾಧ ಎಂದು ಪರಿಗಣಿಸುತ್ತದೆ. 

ಬರಹ ಇಷ್ಟವಾಯಿತೆ?

 • 6

  Happy
 • 0

  Amused
 • 1

  Sad
 • 0

  Frustrated
 • 2

  Angry

Comments:

0 comments

Write the first review for this !