ಶನಿವಾರ, ಡಿಸೆಂಬರ್ 14, 2019
25 °C

ಹುಕ್ಕಾ ಸೇದಿ 9ನೇ ತರಗತಿ ವಿದ್ಯಾರ್ಥಿ ಡಿಬಾರ್: ಶಾಲೆಗೆ ಹೋಗಲು ಕೋರ್ಟ್‌ ಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಹುಟ್ಟುಹಬ್ಬದ ಪಾರ್ಟಿಯಲ್ಲಿ ಹುಕ್ಕಾ ಸೇದಿ ಶಾಲೆಯಿಂದ ಅಮಾನತುಗೊಂಡಿದ್ದ 9ನೇ ತರಗತಿ ವಿದ್ಯಾರ್ಥಿಗೆ ಮತ್ತೆ ಶಾಲೆಗೆ ಹಾಜರಾಗುವಂತೆ ದೆಹಲಿ ಹೈಕೊರ್ಟ್ ಮಧ್ಯಂತರ ಆದೇಶ ನೀಡಿದೆ.   

ನ್ಯಾಯಾಧೀಶ ರಾಜೀವ್ ಶಾಕ್ದಾರ್ ಅವರು ಈ ಸಂಬಂಧ ದೆಹಲಿ ಸರ್ಕಾರ ಮತ್ತು ಶಿಕ್ಷಣ ಇಲಾಖೆಗೆ ಸೂಚನೆ ನೀಡಿದ್ದಾರೆ.

ಡಿಬಾರ್‌ ಮಾಡಿರುವ ಪ್ರಾಂಶುಪಾಲರ ನಿರ್ಧಾರವನ್ನು ಪ್ರಶ್ನಿಸಿ ವಿದ್ಯಾರ್ಥಿಯ ಪೋಷಕರು ಕೊರ್ಟ್‌ಗೆ  ಹೋಗಿದ್ದರು. ಶಾಲೆಯ ನಿರ್ಧಾರ ಕಾನೂನು ಬಾಹಿರವಾಗಿದ್ದು, ಶಿಕ್ಷಣ ಹಕ್ಕುಗಳನ್ನು ಮೊಟಕುಗೊಳಿಸಲಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. 

ಘಟನೆಯ ವಿವರ

2019ರ ಆಗಸ್ಟ್‌ನಲ್ಲಿ ಡಿಬಾರ್ ಆಗಿದ್ದ ವಿದ್ಯಾರ್ಥಿ ಗೆಳೆಯರೊಂದಿಗೆ ಸ್ಥಳೀಯ ಪಬ್‌ನಲ್ಲಿ ಹುಟ್ಟುಹಬ್ಬವನ್ನು ಆಚರಿಸಲು ಹೋಗಿದ್ದರು. ಗೆಳೆಯರೊಂದಿಗೆ ಸೇರಿ ಹುಕ್ಕಾ ಸೇದಿದ್ದರು. ಇದನ್ನು ಗೆಳೆಯನೊಬ್ಬ ವಿಡಿಯೊ ಮಾಡಿ ಅದನ್ನು ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಂನಲ್ಲಿ ಅಪ್‌ಲೋಡ್‌ ಮಾಡಿದ್ದನು. ಈ ಘಟನೆಯು ಅಕ್ಟೋಬರ್‌ನಲ್ಲಿ ಪ್ರಾಂಶುಪಾಲರ ಗಮನಕ್ಕೆ ಬಂದಿತ್ತು. ಬಳಿಕ ವಿದ್ಯಾರ್ಥಿಯನ್ನು ಡಿಬಾರ್‌ ಮಾಡಿದ್ದರು. 

ಆರ್ಥಿಕವಾಗಿ ಹಿಂದುಳಿದವರ ಕೋಟಾದಿಂದ ಈ ವಿದ್ಯಾರ್ಥಿ ಶಾಲೆಗೆ ಪ್ರವೇಶ ಪಡೆದಿದ್ದು ಹುಕ್ಕಾ ಸೇದಿದ್ದು ತಪ್ಪು ಎಂದು ಶಾಲಾ ಆಡಳಿತ ಮಂಡಳಿ ತಿಳಿಸಿತ್ತು. ಅಲ್ಲದೇ ಅಕ್ಟೋಬರ್‌ ತಿಂಗಳಲ್ಲಿ ನಡೆದ ಅರ್ಧ ವಾರ್ಷಿಕ ಪರೀಕ್ಷೆ ಬರೆಯಲು ವಿದ್ಯಾರ್ಥಿಗೆ ಅನುಮತಿ ನಿರಾಕರಿಸಲಾಗಿತ್ತು. 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು