ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತೀಯ ವಾಯುಪಡೆ‌ ಅಧಿಕಾರಿಯಾದ ಚಹಾ ಮಾರುವ ವ್ಯಕ್ತಿಯ ಪುತ್ರಿ

Last Updated 23 ಜೂನ್ 2020, 11:57 IST
ಅಕ್ಷರ ಗಾತ್ರ

ಭೋಪಾಲ್‌ : ಚಹಾ ಮಾರುವ ವ್ಯಕ್ತಿಯೊಬ್ಬರ ಪುತ್ರಿ ಭಾರತೀಯ ವಾಯುಪಡೆಯ (ಐಎಎಫ್‌) ಫ್ಲೈಯಿಂಗ್‌ ಅಧಿಕಾರಿಯಾಗಿ ನೇಮಕಗೊಂಡಿದ್ದಾರೆ.

ನೀಮುಚ್‌ ಜಿಲ್ಲೆಯ ಬಸ್‌ ನಿಲ್ದಾಣದಲ್ಲಿ ಚಹಾ ಅಂಗಡಿ ಹೊಂದಿರುವ ಸುರೇಶ್‌ ಗಂಗ್ವಾಲ್‌ ಅವರ ಪುತ್ರಿ, 24 ವರ್ಷದ ಅಂಚಲ್‌ ಐಎಎಫ್‌ಗೆ ಸೇರ್ಪಡೆಯಾದವರು. ದೃಢವಾದ ಗುರಿ ಹೊಂದಿದ್ದರೆ, ಯಾವುದೇ ಅಡತಡೆಗಳು ಕನಸನ್ನು ನನಸಾಗಿಸುವಲ್ಲಿ ತಡೆಯಲು ಸಾಧ್ಯವಿಲ್ಲ ಎಂಬುದನ್ನು ಅವರು ಸಾಬೀತು ಪಡಿಸಿದ್ದಾರೆ.

ಅಂಚಲ್‌ ಅವರ ತಂದೆಗೆ ಪುತ್ರಿಯ ಶಿಕ್ಷಣದ ಶುಲ್ಕ ಪಾವತಿಸಲೂ ಕೆಲವೊಮ್ಮೆ ಹಣವಿರುತ್ತಿರಲಿಲ್ಲ. ಇಂಥ ಬಡತನದಲ್ಲಿಯೇ ಶಿಕ್ಷಣ ಪೂರೈಸಿ, ತಮ್ಮ ಕನಸನ್ನು ನನಸಾಗಿಸಿಕೊಂಡಿದ್ದಾರೆ. ಕೆಲವು ದಿನಗಳ ಹಿಂದೆ ಅವರು ಐಎಎಫ್‌ಗೆ ನಿಯೋಜನೆಗೊಂಡಿದ್ದಾರೆ.

‘ನಮ್ಮ ಕುಟುಂಬಕ್ಕೆ ಇದು ಹೆಮ್ಮೆಯ ಕ್ಷಣವಾಗಿದೆ. ಆದರೆ, ಕೊರೊನಾ ವೈರಸ್‌ನ ನಿರ್ಬಂಧನೆಗಳಿಂದಾಗಿ ಅವಳನ್ನು ನೋಡಲು ದುಂಡಿಗಲ್‌ನಲ್ಲಿರುವ ವಾಯುಪಡೆಯ ಅಕಾಡೆಮಿಗೆ ಹೋಗಲು ಸಾಧ್ಯವಾಗಲಿಲ್ಲ’ ಎಂದು ಸುರೇಶ್‌ ಗಂಗ್ವಾಲ್‌ ಹೇಳಿದರು.

‘2013ರಲ್ಲಿ ಕೇದಾರನಾಥದಲ್ಲಿ ಸಂಭವಿಸಿದ ಮೇಘಸ್ಫೋಟದ ದುರಂತದ ಸಂದರ್ಭದಲ್ಲಿ ಐಎಎಫ್‌ ಸಿಬ್ಬಂದಿಯ ಕಾರ್ಯನಿರ್ವಹಣೆ, ಧೈರ್ಯದಿಂದ ಪ್ರೇರಿತಗೊಂಡಿದ್ದ ಅವಳು, ಐಎಎಫ್‌ಗೆ ಸೇರಬೇಕು ಎಂದು ಕನಸು ಕಂಡಿದ್ದಳು. ಪುಸ್ತಕ ಮಳಿಗೆಗಳಿಂದ ಮಾಹಿತಿ ಸಂಗ್ರಹಿಸಿ, ಆ ದಿಕ್ಕಿನಲ್ಲಿ ಸಿದ್ಧತೆ ನಡೆಸಿ ಯಶಸ್ವಿಯಾಗಿದ್ದಾಳೆ’ ಎಂದು ಅವರು ಹೆಮ್ಮೆ ವ್ಯಕ್ತಪಡಿಸಿದರು.

‘ಶಾಲಾ– ಕಾಲೇಜು ದಿನಗಳಲ್ಲಿ ಚುರುಕಾಗಿದ್ದ ಅವಳು, ಬ್ಯಾಸ್ಕೆಟ್‌ಬಾಲ್‌ ಆಟಗಾರ್ತಿಯಾಗಿದ್ದ ಅವಳು, ಆರನೇ ಪ್ರಯತ್ನದಲ್ಲಿ ಈ ಸಾಧನೆ ಮಾಡಿದ್ದಾಳೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT