ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್‌ನಿಂದ ವಂಚನೆಗೆ ಒಳಗಾದವರು ಶೀಘ್ರ #MeToo ಅನ್ನುತ್ತಾರೆ: ರಾಜನಾಥ್‌

Last Updated 27 ಅಕ್ಟೋಬರ್ 2018, 11:53 IST
ಅಕ್ಷರ ಗಾತ್ರ

ನವದೆಹಲಿ:‘ಬಿಜೆಪಿ ತೊರೆದುಕಾಂಗ್ರೆಸ್ ಸೇರಿದ ಮುಖಂಡರ ವಿರುದ್ಧ ಹರಿಹಾಯ್ದ ಕೇಂದ್ರ ಗೃಹಸಚಿವ‌ ರಾಜನಾಥ್‌ ಸಿಂಗ್‌, ‘ಶೀಘ್ರದಲ್ಲಿ ಅವರೆಲ್ಲ ಅತ್ಯಂತ ಹಳೆ ಪಕ್ಷದಿಂದ ವಂಚನೆಗೆ ಒಳಗಾಗಲಿದ್ದು, #MeToo ಅಭಿಯಾನ ಪ್ರಾರಂಭಿಸುತ್ತಾರೆ’ ಎಂದು ಹೇಳಿದರು.

‘ಒಂದು ವೇಳೆ ಎಲ್ಲಾ ವಿರೋಧ ಪಕ್ಷಗಳು ಒಂದಾದರೆ,ಈಗ ಕಾಂಗ್ರೆಸ್‌ ಸೇರಿರುವವರನ್ನು ಕಾಪಾಡಲು ಯಾರಿಂದಲೂ ಸಾಧ್ಯವಾಗುವುದಿಲ್ಲ.ಕಾಂಗ್ರೆಸ್‌ನಿಂದ ದ್ರೋಹ ಅನುಭವಿಸಿದ ನಂತರ, ಅವರೆಲ್ಲಒಟ್ಟಾಗಿ #MeToo ಅಭಿಯಾನನಡೆಸುವ ಸ್ಥಿತಿ ಬರುತ್ತದೆ’ ಎಂದರು.

ಇತ್ತೀಚೆಗೆ ಬಿಜೆಪಿ ನಾಯಕ ಜಸ್ವಂತ್ ಸಿಂಗ್ ಪುತ್ರ ಮಾನವೇಂದ್ರ ಸಿಂಗ್ ಮತ್ತು ಮಹಾರಾಷ್ಟ್ರ ಬಿಜೆಪಿ ಮಾಜಿ ಶಾಸಕ ಆಶಿಶ್‌ ದೇಶ್‌ಮುಖ್‌ ಕಾಂಗ್ರೆಸ್‌ ಪಕ್ಷ ಸೇರಿದ್ದರು. ಈ ಇಬ್ಬರು ರಫೇಲ್‌ ಹಗರಣದ ಕಾರಣ ನೀಡಿ ಬಿಜೆಪಿ ತೊರೆದಿದ್ದರು.

ಎಲ್ಲಾ ಕ್ಷೇತ್ರಗಳಲ್ಲಿನ ಮಹಿಳೆಯರು ತಾವು ಅನುಭವಿಸಿದ ಲೈಂಗಿಕ ಕಿರುಕುಳದ ಬಗ್ಗೆ #MeToo ಅಭಿಯಾನದ ಮೂಲಕಧೈರ್ಯವಾಗಿ ಹೇಳಿಕೊಳ್ಳುತ್ತಿರುವ ಸಂದರ್ಭದಲ್ಲಿಯೇ ರಾಜನಾಥ್‌ ಸಿಂಗ್‌ ಈ ಹೇಳಿಕೆ ನೀಡಿದ್ದಾರೆ. ಎಂ.ಜೆ. ಅಕ್ಬರ್‌ ಅವರೂ ಲೈಂಗಿಕಕಿರುಕುಳದ ಆರೋಪದಿಂದ ಸಚಿವ ಸ್ಥಾನ ತೊರೆಯಬೇಕಾಯಿತು.

ಆಶ್ಚರ್ಯಕರ ಸಂಗತಿ ಎಂದರೆ, #MeToo ಪ್ರಕರಣಗಳನ್ನುಇತ್ಯರ್ಥಗೊಳಿಸುವುದಕ್ಕೆ ಕಾನೂನು ಮತ್ತು ಸಾಂಸ್ಥಿಕ ಚೌಕಟ್ಟು ಇದೆಯೇ ಎಂಬ ಬಗ್ಗೆ ಪರಿಶೀಲಿಸಲು ಕೇಂದ್ರ ಸರ್ಕಾರ ಗೃಹಸಚಿವರ ನೇತೃತ್ವದಲ್ಲಿ ಸಚಿವರ ಸಮಿತಿಯೊಂದನ್ನು ರಚಿಸಿದೆ. ನಿತಿನ್‌ ಗಡ್ಕರಿ, ನಿರ್ಮಲಾ ಸೀತಾರಾಮನ್ ಮತ್ತು ಮನೇಕಾ ಗಾಂಧಿ ಅವರೂ ಸಮಿತಿಯಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT