‘₹30 ಸಾವಿರದ ಪಿಜ್ಜಾ ತಿನ್ನುವವರಿಗೆ ₹12,000 ವೇತನದ ಉದ್ಯೋಗ ಕಾಣದು’

7
ಸಚಿವ ಗಿರಿರಾಜ್ ಸಿಂಗ್ ಹೇಳಿಕೆ

‘₹30 ಸಾವಿರದ ಪಿಜ್ಜಾ ತಿನ್ನುವವರಿಗೆ ₹12,000 ವೇತನದ ಉದ್ಯೋಗ ಕಾಣದು’

Published:
Updated:
ಗಿರಿರಾಜ್ ಸಿಂಗ್

ನವದೆಹಲಿ: ₹30 ಸಾವಿರದ ಪಿಜ್ಜಾ ತಿನ್ನುವವರಿಗೆ ₹12 ಸಾವಿರ ವೇತನದ ಉದ್ಯೋಗ ಕಾಣಿಸದು ಎಂದು ಕೇಂದ್ರದ ಸಣ್ಣ ಮತ್ತು ಮಧ್ಯಮ ಉದ್ಯಮಗಳ ಇಲಾಖೆಯ ರಾಜ್ಯ ಖಾತೆ ಸಚಿವ ಗಿರಿರಾಜ್ ಸಿಂಗ್ ಕಾಂಗ್ರೆಸ್‌ ಅನ್ನು ಉದ್ದೇಶಿಸಿ ಟೀಕಿಸಿದರು.

ಗುಜರಾತ್‌ನ ಸಬರಮತಿ ನದಿ ತೀರದಲ್ಲಿ ಬುಧವಾರ ‘ಖಾದಿ ಮತ್ತು ಗ್ರಾಮೀಣ ಕೈಗಾರಿಕೆಗಳ ಆಯೋಗ’ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಉದ್ಯೋಗ ಸೃಷ್ಟಿಯಾಗಿರುವುದನ್ನು ಕಾಣದವರಿಗೆ ಕೇಂದ್ರ ಸರ್ಕಾರ 4 ಕೋಟಿ ಉದ್ಯೋಗ ಸೃಷ್ಟಿಸಿರುವುದನ್ನು ತೋರಿಸಬಯಸುತ್ತೇನೆ. ನಾವು ನಾಲ್ಕು ಕೋಟಿ ಉದ್ಯೋಗ ಸೃಷ್ಟಿಸಿದ್ದೇವೆ. ಈ ಪೈಕಿ ಶೇಕಡ 70ರಷ್ಟು ₹12 ಸಾವಿರಕ್ಕಿಂತ (ತಿಂಗಳಿಗೆ) ಕಡಿಮೆ ವೇತನದ್ದು. ನಮ್ಮಲ್ಲ ಕೇವಲ ಶೇಕಡ 5ರಷ್ಟು ಮಾತ್ರ ಕೌಶಲ ಹೊಂದಿರುವವರು ಇದ್ದಾರೆ. ಕೌಶಲ ತರಬೇತಿ ಬಗ್ಗೆ ಮೊದಲು ಮಾತನಾಡಿದವರು ಪ್ರಧಾನಿ ನರೇಂದ್ರ ಮೋದಿ’ ಎಂದು ಸಿಂಗ್ ಹೇಳಿದರು.

ಮುದ್ರಾ ಯೋಜನೆಯಡಿ ಸಾಲ ನೀಡುವುದರ ಜತೆಗೆ, 10 ಕೋಟಿ ಜನರಿಗೆ ಉದ್ಯೋಗ ಕಲ್ಪಿಸಲಾಗಿದೆ ಎಂದು ಅವರು ಹೇಳಿದರು.

‘2010ರಿಂದ 2014ರ ಅವಧಿಯಲ್ಲಿ ಯುಪಿಎ ಸರ್ಕಾರ 11 ಲಕ್ಷ ಜನರನ್ನು ಉದ್ಯಮಿಗಳನ್ನಾಗಿ ಮಾಡಿದರೆ, ನಾವು 16 ಲಕ್ಷ ಜನರನ್ನು ಉದ್ಯಮಿಗಳನ್ನಾಗಿ ಮಾಡಿದ್ದೇವೆ’ ಎಂದು ಅವರು ಹೇಳಿದರು.

ಬರಹ ಇಷ್ಟವಾಯಿತೆ?

 • 17

  Happy
 • 0

  Amused
 • 0

  Sad
 • 2

  Frustrated
 • 8

  Angry

Comments:

0 comments

Write the first review for this !