ಬುಧವಾರ, ಫೆಬ್ರವರಿ 26, 2020
19 °C

ದೇಶ ಆಳುತ್ತಿರುವವರು ಕಟುಕರು; ಅವರು ಪ್ರಾಣಿಗಳನ್ನು ರಕ್ಷಿಸುತ್ತಾರೆ, ಮಾನವರನ್ನಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಆನಂದ್ ರಾವ್ ಅದ್ಸುಲ್

ನವದೆಹಲಿ: ಸಂಸತ್ತಿನಲ್ಲಿ ನಡೆಯುತ್ತಿರುವ ಅವಿಶ್ವಾಸ ಮತ ಪ್ರಕ್ರಿಯೆಯಲ್ಲಿ ಭಾಗವಹಿಸದಿರಲು ಬಿಜೆಪಿ ಮಿತ್ರ ಪಕ್ಷ ಶಿವಸೇನೆ ತೀರ್ಮಾನಿಸಿದೆ.  ಬಿಜೆಪಿ ಅಧ್ಯಕ್ಷ  ಅಮಿತ್ ಶಾ ಅವರು ಗುರುವಾರ ಶಿವಸೇನಾ ಮುಖ್ಯಸ್ಥ  ಉದ್ದವ್ ಠಾಕ್ರೆ ಅವರಿಗೆ ಕರೆ ಮಾಡಿ ಬೆಂಬಲ ನೀಡುವಂತೆ ಮನವಿ ಮಾಡಿದ್ದರು.

ಆದರೆ ಅವಿಶ್ವಾಸ ಮತ ಪ್ರಕ್ರಿಯೆಯಿಂದ ಹೊರಗುಳಿದ ಶಿವಸೇನೆ ಶುಕ್ರವಾರ ತಮ್ಮ ಮುಖವಾಣಿ ಸಾಮ್ನಾದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಕಿಡಿ ಕಾರಿದೆ. ದೇಶವನ್ನಾಳುವವರು ಕಟುಕರು; ಅವರು ಪ್ರಾಣಿಗಳನ್ನು ರಕ್ಷಿಸುತ್ತಾರೆ, ಮನುಷ್ಯರನ್ನಲ್ಲ ಎಂಬ ಸಂಪಾದಕೀಯ ಬರೆದು ಶಿವಸೇನೆ ಬಿಜೆಪಿಗೆ ಟಾಂಗ್ ನೀಡಿದೆ.

ಅವಿಶ್ವಾಸ ಮತದಿಂದ ಹೊರಗುಳಿದಿರುವ ಬಗ್ಗೆ ಎನ್‍ಡಿಟಿವಿ ಜತೆ ಮಾತನಾಡಿದ ಶಿವಸೇನೆಯ ಮುಖಂಡ ಆನಂದ್ ರಾವ್ ಅದ್ಸುಲ್, ನಮ್ಮ ಪಕ್ಷ ಎಂದಿಗೂ ಪಕ್ಷದ ಮುಖ್ಯಸ್ಥರ ಮಾತನ್ನೇ ಪಾಲಿಸುತ್ತದೆ. ಕೇಂದ್ರ ಸರ್ಕಾರ ಭೂವಿವಾದ, ನೋಟು ರದ್ದತಿ ಮೊದಲಾದ ತಪ್ಪುಗಳನ್ನು ಮಾಡಿರುವುದರಿಂದ ಅವರೊಂದಿಗೆ ನಿಲ್ಲದೇ ಇರುವ ತೀರ್ಮಾನ ಕೈಗೊಂಡಿದ್ದೇವೆ ಎಂದಿದ್ದಾರೆ.

 ನಾವು ಸದಾ ಜನರಿಗಾಗಿ ಹೋರಾಡುತ್ತೇವೆ. ನಮಗೆ ಯಾರೂ ಬೆಂಬಲ ನೀಡಲಿಲ್ಲ. ತೆಲುಗು ದೇಶಂ ಪಕ್ಷದ ನಿರ್ಣಯಕ್ಕೂ ನಮಗೂ ಏನೂ ಸಂಬಂಧವಿಲ್ಲ ಎಂದಿದ್ದಾರೆ ಆನಂದ್ ರಾವ್ ಅದ್ಸುಲ್.
 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು