ಸೋಮವಾರ, ಸೆಪ್ಟೆಂಬರ್ 16, 2019
21 °C

ಮೋದಿಯನ್ನು ‘ಪ್ರಧಾನ ವಿಭಜಕ’ ಎಂದು ಉಲ್ಲೇಖಿಸಿದ್ದ ‘ಟೈಮ್’ ಲೇಖನಕ್ಕೆ ಬಿಜೆಪಿ ಟೀಕೆ

Published:
Updated:

ನವದೆಹಲಿ: ‘ಪ್ರಧಾನಿ ಮೋದಿ ಅವರನ್ನು ‘ಪ್ರಧಾನ ವಿಭಜಕ’ ಎಂದು ಬಣ್ಣಿಸಿ ಟೈಮ್‌ ಪತ್ರಿಕೆಗೆ ಲೇಖನ ಬರೆದಿರುವುದರ ಹಿಂದೆ ಮೋದಿಯ ವರ್ಚಸ್ಸಿಗೆ ಧಕ್ಕೆ ಉಂಟುಮಾಡುವ ಉದ್ದೇಶವಿದ್ದು, ಪಾಕಿಸ್ತಾನದ ಕಾರ್ಯಸೂಚಿಗೆ ಆ ಲೇಖನದ ಮೂಲಕ ಶಕ್ತಿ ತುಂಬಿದ್ದಾರೆ’ ಎಂದು ಬಿಜೆಪಿ ಆರೋಪಿಸಿದೆ.

‘ಆ ಲೇಖನವನ್ನು ಬರೆದವರು ಪಾಕಿಸ್ತಾನದವರು. ಅಂಥವರಿಂದ ಇನ್ನೇನನ್ನು ನಿರೀಕ್ಷಿಸಲು ಸಾಧ್ಯ’ ಎಂದು ಬಿಜೆಪಿ ವಕ್ತಾರ ಸಂಬಿತ್‌ ಪಾತ್ರ ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ‘ಮೋದಿ, ಭಾರತದ ಪ್ರಧಾನ ವಿಭಜಕ’

‘2014ರಲ್ಲಿ ಅನೇಕ ವಿದೇಶಿ ಪತ್ರಿಕೆಗಳು ಮೋದಿಯನ್ನು ‘ಒಗ್ಗೂಡಿಸುವ ವ್ಯಕ್ತಿ’ ಎಂದು ಬಣ್ಣಿಸಿ ಲೆಖನಗಳನ್ನು ಪ್ರಕಟಿಸಿದ್ದವು. ಅಂಥ ಲೇಖನಗಳಲ್ಲಿ ‘ಮೋದಿ ಅವರ ಅಭಿವೃದ್ಧಿ ಯೋಜನೆಗಳಿಂದಾಗಿ ಭಾರತವು ಹೊಸ ದಿಕ್ಕಿನಲ್ಲಿ ಸಾಗಲಿದೆ’ ಎಂದು ಶ್ಲಾಘಿಸಲಾಗಿತ್ತು’ ಎಂದು ಸಂಬಿತ್‌ ನುಡಿದರು.

ಕಾಂಗ್ರೆಸ್‌ ಮುಖಂಡ ನವಜೋತ್‌ಸಿಂಗ್‌ ಸಿಧು ವಿರುದ್ಧವೂ ಆಕ್ಷೇಪ ವ್ಯಕ್ತಪಡಿಸಿದ ಸಂಬಿತ್‌, ‘ಸಿಧು ಅವರು ಸ್ಯಾಮ್‌ ಪಿತ್ರೋಡಾ ಅವರು 1984ರ ಸಿಖ್‌ ದಂಗೆಗಳ ಬಗ್ಗೆ ನೀಡಿರುವ ಹೇಳಿಕೆಯ ಬಗ್ಗೆ ಮೌನವಹಿಸಿರುವುದೇಕೆ’ ಎಂದು ಪ್ರಶ್ನಿಸಿದರು.

Post Comments (+)