ಮಂಗಳವಾರ, ಜುಲೈ 27, 2021
28 °C
ವೆಬ್‌ಸೈಟ್‌ಗಳ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ದಾಖಲು

ತಿರುಪತಿ ದೇವಸ್ಥಾನ ಟ್ರಸ್ಟ್‌ ಹೆಸರಿನಲ್ಲಿ 19 ನಕಲಿ ವೆಬ್‌ಸೈಟ್‌ಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೈದರಾಬಾದ್‌: ವೆಂಕಟೇಶ್ವರ ದೇವಸ್ಥಾನದ ತಿರುಮಲ ತಿರುಪತಿ ದೇವಸ್ಥಾನ (ಟಿಟಿಡಿ) ಟ್ರಸ್ಟ್‌ನ ಜಾಗೃತ ದಳ ವಿಭಾಗವು 19 ನಕಲಿ ವೆಬ್‌ಸೈಟ್‌ಗಳ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಿದೆ. 

ಹೆಸರನ್ನು ದುರುಪಯೋಗಪಡಿಸಿಕೊಂಡಿರುವ ವೆಬ್‌ಸೈಟ್‌ಗಳು, ಯಾತ್ರಾರ್ಥಿಗಳಿಂದ ವಿವಿಧ ದರ್ಶನಗಳು, ದೇವರ ಸೇವೆಗಳು ಮತ್ತು ವಸತಿ ಸೌಕರ್ಯಗಳಿಗಾಗಿ ಹಣ ಪಡೆದು ಮೋಸ ಮಾಡುತ್ತಿವೆ.

‘ನಮ್ಮ ವೆಬ್‌ಸೈಟ್‌ನಲ್ಲಿ ದರ್ಶನ ಅಥವಾ ಸೇವಾ ಟಿಕೆಟ್‌ಗಳು ಮತ್ತು ವಸತಿ ಸೌಕರ್ಯ ಖಾಲಿಯಾದ ನಂತರ ಕೆಲವು ಭಕ್ತರು ಅನಧಿಕೃತ ವೆಬ್‌ಸೈಟ್‌ಗಳಿಗೆ ಲಾಗ್‌ಇನ್‌ ಆಗಿ ಮೋಸ ಹೋಗುತ್ತಿದ್ದಾರೆ. ಈ ಕುರಿತು ನಮ್ಮ ಕಾಲ್‌ ಸೆಂಟರ್‌ಗೆ ಹಲವಾರು ದೂರುಗಳು ಬಂದಿವೆ’ ಎಂದು ಟಿಟಿಡಿ ಕಾರ್ಯನಿರ್ವಾಹಕ ಅಧಿಕಾರಿ ಅನಿಲ್‌ ಕುಮಾರ್‌ ಸಿಂಘಾಲ್‌ ತಿಳಿಸಿದ್ದಾರೆ.

‘ಭಕ್ತರು ನೀಡಿದ ದೂರಿನ ಆಧಾರದ ಮೇಲೆ ಜಾಗೃತ ದಳದವರು ನಕಲಿ ವೆಬ್‌ಸೈಟ್‌ಗಳ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಿದ್ದಾರೆ. ಇಂಥ ನಕಲಿ ವೆಬ್‌ಸೈಟ್‌ಗಳನ್ನು ನಂಬಿ ಮೋಸ ಹೋಗಬೇಡಿ ಎಂದು ಭಕ್ತರಲ್ಲಿ ಮನವಿ ಮಾಡುತ್ತೇನೆ. ಟಿಟಿಡಿ ಅಧಿಕೃತ ವೆಬ್‌ಸೈಟ್‌ಗಳಾದ tirupatibalaji.ap.gov.in ಮತ್ತು ttdsevaonline.com ಗಳಲ್ಲಿ ಮಾತ್ರ ದರ್ಶನ ಟಿಕೆಟ್‌, ವಸತಿ ಇತ್ಯಾದಿ ಸೇವೆಗಳಿಗೆ ಲಾಗ್‌ಇನ್‌ ಆಗಬೇಕು. ಟಿಟಿಡಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ www.tirumala.org ಸಂಪರ್ಕಿಸಬಹುದು’ ಎಂದು ಅವರು ಹೇಳಿದ್ದಾರೆ.

‘ಜಮ್ಮುವಿನಲ್ಲಿ ವೆಂಕಟೇಶ್ವರ ಸ್ವಾಮಿ ದೇವಸ್ಥಾನದ ನಿರ್ಮಾಣ ಕಾರ್ಯ ಸದ್ಯದಲ್ಲೇ ಆರಂಭವಾಗಲಿದೆ. ವಾರಾಣಸಿಯಲ್ಲಿ ದೇವಸ್ಥಾನ ನಿರ್ಮಾಣಕ್ಕೆ ಟಿಟಿಡಿ ಮಂಡಳಿ ಅನುಮೋದನೆ ನೀಡಿದೆ. ಮಹಾರಾಷ್ಟ್ರ ಸರ್ಕಾರ ಬಾಂದ್ರಾದಲ್ಲಿ ಭೂಮಿ ಮಂಜೂರು ಮಾಡಿದ್ದು, ₹30 ಕೊಟಿ ವೆಚ್ಚದಲ್ಲಿ ದೇವಸ್ಥಾನ ನಿರ್ಮಾಣ ಆಗಲಿದೆ’ ಎಂದು ಅವರು ತಿಳಿಸಿದ್ದಾರೆ.

‘ಕನ್ಯಾಕುಮಾರಿ, ಕುರುಕ್ಷೇತ್ರ, ಹೈದರಾಬಾದ್‌ನಲ್ಲಿ ದೇವಸ್ಥಾನ ನಿರ್ಮಿಸಲಾಗಿದೆ. ಚೆನ್ನೈ, ವಿಶಾಖಪಟ್ಟಣ, ಭುವನೇಶ್ವರದಲ್ಲಿ ನಿರ್ಮಾಣ ಕಾರ್ಯ ನಡೆದಿದೆ. ಸದ್ಯದಲ್ಲೇ ಕುರುಕ್ಷೇತ್ರದಲ್ಲಿ ವೇದ ಪಾಠಶಾಲಾ ಆರಂಭಿಸಲಾಗುವುದು’ ಎಂದು ಸಿಂಘಾಲ್‌ ಹೇಳಿದ್ದಾರೆ.

ಕ್ರಿಮಿನಲ್‌ ಮೊಕದ್ದಮೆ ದಾಖಲಾದ ನಕಲಿ ವೆಬ್‌ಸೈಟ್‌ಗಳು

1.www.ttdtickets.com, 

2.www.ttddarshan.com, 

3. Tirupatibalajidarshantickets.co.in,  

4.tirupatibalajidarshanbooking.com, 

5.ttdbalajidarshan.com, 

6.myspiritualyatra.com, 

7. tirupatibalajidarshan.co.in, 

8.tirupatibalajidarshan.org, 

9.www.mybalaji.in, 

10. bookingtirupatidarshan.com, 

11. www.templeyatri.com, 

12. tirupatibalajitemple.com, 

13. www.tirupatibalajidarshanbooking.co.in, 

14. tirupatitourism.in, 

15. tirupatitourismseva.com, 

16. padmavathitravels.in, 17.ttddarshan.com, 

18. tirupatibalajidarshanbooking.co.in, 

19.tirupatidarshanbooking.org.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು