ಭಾನುವಾರ, ಜೂಲೈ 5, 2020
27 °C

ಇಂದಿನಿಂದ 200 ರೈಲುಗಳ ಸಂಚಾರ ಆರಂಭ: 1.45 ಲಕ್ಷ ಮಂದಿ ಪ್ರಯಾಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ದೀರ್ಘಕಾಲದ ಲಾಕ್‌ಡೌನ್‌ ನಂತರ, ಜೂನ್‌ 1ರಿಂದ ವೇಳಾಪಟ್ಟಿ ಅನುಸಾರ 200 ರೈಲುಗಳು ಸಂಚರಿಸಲಿವೆ. ಮೊದಲ ದಿನವೇ 1.45 ಲಕ್ಷ ಮಂದಿ ಪ್ರಯಾಣ ಬೆಳೆಸಲಿದ್ದಾರೆ. 

ಈ ಎಲ್ಲ ಪ್ರಯಾಣಿಕರು ರೈಲು ಹೊರಡುವ 90 ನಿಮಿಷಕ್ಕೂ ಮೊದಲೇ ನಿಲ್ದಾಣದಲ್ಲಿ ಇರಬೇಕು. ಅಂತರ ಕಾಯ್ದುಕೊಳ್ಳುವುದು, ಆರೋಗ್ಯ ತಪಾಸಣೆ, ಮಾಸ್ಕ್‌ ಧರಿಸುವುದು ಹಾಗೂ ಆರೋಗ್ಯ ಸೇತು ಆ್ಯಪ್‌ ಅಳವಡಿಕೆಯನ್ನು ಕಡ್ಡಾಯಗೊಳಿಸಲಾಗಿದೆ. ಪ್ರಯಾಣಿಕರು ಮನೆಯಿಂದಲೇ ಆಹಾರ ಮತ್ತು ನೀರು ತರಬೇಕು ಎಂದು ಭಾರತೀಯ ರೈಲ್ವೆ ಇಲಾಖೆ ಸೂಚನೆ ನೀಡಿದೆ.

ಮಹಾರಾಷ್ಟ್ರದ ಹಲವು ಪ್ರದೇಶಗಳನ್ನು ಕೆಂಪುವಲಯವೆಂದು ಗುರುತಿಸಿರುವುದರಿಂದ ಆ ರಾಜ್ಯವನ್ನು ಬಿಟ್ಟು ಉಳಿದೆಡೆ ರೈಲುಗಳ ನಿಲುಗಡೆಗೆ ಅವಕಾಶ ನೀಡಲಾಗಿದೆ.

ಜೂನ್1ರಿಂದ 30ರವರೆಗೆ 26 ಲಕ್ಷ ಮಂದಿ ಪ್ರಯಾಣಿಕರು ಸೀಟು ಕಾಯ್ದಿರಿಸಿದ್ದಾರೆ. ಇದರ ಜತೆಗೆ ಹೆಚ್ಚುವರಿ ವಿಶೇಷ ರಾಜಧಾನಿ ಹಾಗೂ ಶ್ರಮಿಕ್‌ ರೈಲುಗಳು ಸಂಚರಿಸಲಿವೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು