‘ತ್ರಿಪುರಾ ಮುಖ್ಯಮಂತ್ರಿ ಬಿಪ್ಲಬ್‌ ಕುಮಾರ್ ದೇಬ್ ಹುಟ್ಟಿದ್ದು ಭಾರತದಲ್ಲೇ’

7

‘ತ್ರಿಪುರಾ ಮುಖ್ಯಮಂತ್ರಿ ಬಿಪ್ಲಬ್‌ ಕುಮಾರ್ ದೇಬ್ ಹುಟ್ಟಿದ್ದು ಭಾರತದಲ್ಲೇ’

Published:
Updated:

ಅಗರ್ತಲಾ: ತ್ರಿಪುರಾ ಮುಖ್ಯಮಂತ್ರಿ ಬಿಪ್ಲಬ್‌ ಕುಮಾರ್ ದೇಬ್ ಅವರು ಭಾರತದಲ್ಲೇ ಜನಿಸಿದ್ದಾರೆ; ಅವರು ಬಾಂಗ್ಲಾದೇಶದಲ್ಲಿ ಹುಟ್ಟಿಲ್ಲ ಎಂದು ಮುಖ್ಯಮಂತ್ರಿಗಳ ಕಚೇರಿಯ ಅಧಿಕಾರಿಯೊಬ್ಬರು ಸೋಮವಾರ ಸ್ಪಷ್ಟಪಡಿಸಿದ್ದಾರೆ.

ದೇಬ್ ಅವರು 1971ರ ನವೆಂಬರ್‌ 25 ರಂದು ತ್ರಿಪುರಾದ ಗೋಮತಿ ಜಿಲ್ಲೆಯ ಜಾಮ್‌ಜುರಿಯಲ್ಲಿ ಜನಿಸಿದ್ದಾರೆ ಎಂದು ಅವರು ಹೇಳಿದ್ದಾರೆ.

 ‘ಆಗಸ್ಟ್‌ 2 ರಿಂದ ಕೆಲವು ತಪ್ಪು ಮಾಹಿತಿ ಮುಖ್ಯಮಂತ್ರಿಯವರ ಪ್ರೊಫೈಲ್‌ ಪುಟದಲ್ಲಿ ಹರಿದಾಡುತ್ತಿದೆ. ಇದು ಕೆಲವರ ಕುಚೇಷ್ಟೆಯಷ್ಟೇ’ ಎಂದು ಮುಖ್ಯಮಂತ್ರಿ ಮಾಧ್ಯಮ ಸಲಹೆಗಾರ ಸಂಜಯ್‌ ಮಿಶ್ರಾ ತಿಳಿಸಿದ್ದಾರೆ.

‘ವಿಕಿಪೀಡಿಯಾದ ಪುಟದಲ್ಲಿ ಆಗಸ್ಟ್‌ 2 ರಿಂದ 4 ರವರೆಗೆ ಹಲವಾರು ತಿದ್ದುಪ‍ಡಿಗಳು ಕಾಣಿಸಿದ್ದು, ಅದರಲ್ಲಿ ದೇಬ್ ಅವರ ಹುಟ್ಟಿದ ಸ್ಥಳವನ್ನು ಪದೇ ಪದೇ ಬದಲಿಸಲಾಗಿದೆ’ ಎಂದು ಅವರು ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 6

  Happy
 • 1

  Amused
 • 1

  Sad
 • 0

  Frustrated
 • 1

  Angry

Comments:

0 comments

Write the first review for this !