ಕಾಶ್ಮೀರದ ಉಧಂಪುರ್‌ನಲ್ಲಿ ಕಣಿವೆಗೆ ಉರುಳಿ ಬಿದ್ದ ಬಸ್: 6 ಸಾವು, 35 ಮಂದಿಗೆ ಗಾಯ

ಶನಿವಾರ, ಮಾರ್ಚ್ 23, 2019
21 °C

ಕಾಶ್ಮೀರದ ಉಧಂಪುರ್‌ನಲ್ಲಿ ಕಣಿವೆಗೆ ಉರುಳಿ ಬಿದ್ದ ಬಸ್: 6 ಸಾವು, 35 ಮಂದಿಗೆ ಗಾಯ

Published:
Updated:

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಉಧಂಪುರ್‌ನಲ್ಲಿ ಬಸ್ಸೊಂದು ಕಣಿವೆಗೆ ಉರುಳಿ ಬಿದ್ದು 6 ಮಂದಿ ಸಾವಿಗೀಡಾಗಿದ್ದಾರೆ.

ಓರ್ವ ಮಹಿಳೆ ಸೇರಿದಂತೆ 6 ಮಂದಿ ಸಾವಿಗೀಡಾಗಿದ್ದು, 35 ಮಂದಿಗೆ ಗಾಯಗಳಾಗಿವೆ ಎಂದು ಅಲ್ಲಿನ ಅಧಿಕಾರಿಗಳು ಹೇಳಿದ್ದಾರೆ.

 ಬಸ್ ಶ್ರೀನಗರಕ್ಕೆ ಹೋಗುತ್ತಿದ್ದಾಗ ಶುಕ್ರವಾರ ಮಧ್ಯರಾತ್ರಿ 12.30ಕ್ಕೆ ಇಲ್ಲಿನ ಮಜಲ್ತಾ ಎಂಬಲ್ಲಿರುವ ಚನೇರ್ ಪ್ರದೇಶದ ಬಳಿ ಅಪಘಾತ ಸಂಭವಿಸಿತ್ತು.

5 ಮಂದಿ ಸ್ಥಳದಲ್ಲಿಯೇ ಮೃತರಾಗಿದ್ದು, ಗಂಭೀರ ಗಾಯಗೊಂಡ ಓರ್ವ ವ್ಯಕ್ತಿ ಆಸ್ಪತ್ರೆಯಲ್ಲಿ  ಅಸುನೀಗಿದ್ದಾರೆ. 35 ಮಂದಿಗೆ ಗಾಯಗಳಾಗಿವೆ ಎಂದು ಉಧಂಪುರ್ ಎಸ್‍ಎಸ್‍ಪಿ ರಾಜೀವ್ ಪಾಂಡೆ ಹೇಳಿದ್ದಾರೆ. 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !