ಬುಧವಾರ, ಜೂನ್ 23, 2021
25 °C

ಕಳ್ಳತನ ಮಾಡಿ ನಂತರ ವಲಸೆ ಕಾರ್ಮಿಕನನ್ನು ಕೊಲೆ ಮಾಡಿದ ಆಟೊ ಚಾಲಕ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಮುಜಾಫ್ಫರ್‌‌ನಗರ: ಉತ್ತರ ಪ್ರದೇಶದ ಮುಜಾಫ್ಫರ್‌‌ನಗರ ಜಿಲ್ಲೆಯ ವಲಸೆ ಕಾರ್ಮಿಕರೊಬ್ಬರನ್ನು ಇರಿದು ಕೊಲೆ ಮಾಡಿ ಅವರ ವಸ್ತುಗಳನ್ನು ಕಳ್ಳತನ ಮಾಡಿರುವ ಘಟನೆ ಮಧ್ಯ ಪ್ರದೇಶದಲ್ಲಿ ನಡೆದಿದೆ.

‘ಅರ್ಬಾಸ್‌ (22) ಕೊಲೆಯಾದ ಕಾರ್ಮಿಕ. ಈತ ಮತ್ತು ಈತನ ಸ್ನೇಹಿತ ನೌಮನ್‌ ಕೆಲಸಕ್ಕಾಗಿ ಮಧ್ಯ ಪ್ರದೇಶಕ್ಕೆ ಹೋಗಿದ್ದರು. ಲಾಕ್‌ಡೌನ್‌ ಕಾರಣ ಊರಿಗೆ ಹಿಂತಿರುಗಲು ಸಾಧ್ಯವಾಗಲಿಲ್ಲ. ನಂತರ ಕಾಲ್ನಡಿಗೆಯಲ್ಲೇ ಊರಿಗೆ ಮರಳಲು ನಿರ್ಧರಿಸಿದರು. ಅಂತೆಯೇ ಶುಕ್ರವಾರ ಇಬ್ಬರೂ ಸತನಾಗೆ ರೀವಾ ಜಿಲ್ಲೆಯ ಮೂಲಕ ಹೊರಟಿದ್ದರು’ ಎಂದು ಭಾನುವಾರ ಪೊಲೀಸರು ತಿಳಿಸಿದರು.

‘ಕಾಲ್ನಡಿಗೆಯಿಂದ ಸುಸ್ತಾಗಿದ್ದ ಇಬ್ಬರೂ ಆಟೊದಲ್ಲಿ ಹೊರಡಲು ನಿರ್ಧರಿದರು. ಆಟೊ ಚಾಲಕ ಇಬ್ಬರ ಬಳಿ ಇದ್ದ ವಸ್ತುಗಳನ್ನು ಕಿತ್ತುಕೊಂಡು ಅರ್ಬಾಸ್‌ನನ್ನು ಕೊಲೆ ಮಾಡಿದ. ನೌಮಾನ್‌ ಹೇಗೊ ಅಲ್ಲಿಂದ ತಪ್ಪಿಸಿಕೊಂಡಿದ್ದಾನೆ’ ಎಂದು ಅವರು ಮಾಹಿತಿ ನೀಡಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು