ಯುಪಿಎಸ್‌ಸಿ ಫಲಿತಾಂಶ ಪ್ರಕಟ: ರಾಜ್ಯದ 24 ಮಂದಿ ನಾಗರಿಕ ಸೇವೆಗೆ ಆಯ್ಕೆ

ಶನಿವಾರ, ಏಪ್ರಿಲ್ 20, 2019
29 °C

ಯುಪಿಎಸ್‌ಸಿ ಫಲಿತಾಂಶ ಪ್ರಕಟ: ರಾಜ್ಯದ 24 ಮಂದಿ ನಾಗರಿಕ ಸೇವೆಗೆ ಆಯ್ಕೆ

Published:
Updated:

ನವದೆಹಲಿ: ಯುಪಿಎಸ್‌ಸಿ 2018 ರಲ್ಲಿ ನಡೆಸಿದ ನಾಗರಿಕ ಸೇವಾ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು, ಧಾರವಾಡದ ರಾಹುಲ್‌ ಶರಣಪ್ಪ ಸಂಕನೂರು 17 ನೇ ರ್‍ಯಾಂಕ್‌ ಪಡೆದಿದ್ದಾರೆ.

ಕರ್ನಾಟಕದ ಒಟ್ಟು 24 ಅಭ್ಯರ್ಥಿಗಳು ನಾಗರಿಕ ಸೇವೆಗೆ ಅರ್ಹತೆ ಪಡೆದಿದ್ದಾರೆ. ಭಾರತೀಯ ಆಡಳಿತ ಸೇವೆ, ಭಾರತೀಯ ವಿದೇಶಾಂಗ ಸೇವೆ, ಭಾರತೀಯ ಪೊಲೀಸ್‌ ಸೇವೆ, ಮತ್ತು ಇತರ ಕೇಂದ್ರ ಸೇವೆಗಳಿಗೆ ನೇಮಕ ಮಾಡಲಾಗುವುದು.

 ರಾಜ್ಯದ ಅಭ್ಯರ್ಥಿಗಳು: ಎನ್. ಲಕ್ಷ್ಮಿ (45), ಎಸ್. ಆಕಾಶ್‌ (78), ಕೃತಿಕಾ(100), ಎಚ್‌.ಆರ್‌ ಕೌಶಿಕ್‌ (240), ಎಚ್‌.ಬಿ. ವಿವೇಕ್‌ (257),ನಿವೇದಿತಾ(303), ಗಿರೀಶ್‌ ಧರ್ಮರಾಜ್‌ ಕಲಗೊಂಡ(307), ಮಿರ್ಜಾ ಕದರ್‌ ಬೇಗ್‌ (336),ಯು.ಪಿ ತೇಜಸ್  (338), ಬಿ.ಜೆ. ಹರ್ಷವರ್ಧನ್ (352), ಪಕೀರೇಶ್ ಕಲ್ಲಪ್ಪ ಬಾದಾಮಿ (372).

ಡಾ. ನಾಗಾರ್ಜುನ ಗೌಡ (418), ಬಿ.ವಿ ಅಶ್ವಿಜಾ (423), ಆರ್‌.ಮಂಜುನಾಥ್(495), ಎಸ್‌.ಬೃಂದಾ(496), ಹೇಮಂತ್‌(612), ಎಂ.ಕೆ ಶೃತಿ(637), ವೆಂಕಟರಾಮ್‌(694), ಸಂತೋಷ್‌ ಎಚ್‌(753), ಎಸ್‌. ಅಶೋಕ್ ಕುಮಾರ್‌ (711), ಎನ್‌. ರಾಘವೇಂದ್ರ(739) ಮತ್ತು ಶಶಿಕಿರಣ್‌(754) ರ್‍ಯಾಂಕ್‌ ಪಡೆದ ಅಭ್ಯರ್ಥಿಗಳು.

ಈ 24 ಮಂದಿಯಲ್ಲಿ 17 ಮಂದಿ ರ್‍ಯಾಂಕ್‌ ವಿಜೇತರು ಡಾ.ರಾಜ್‌ಕುಮಾರ್‌ ಐಎಎಸ್‌ ಅಕಾಡೆಮಿಯಲ್ಲಿ ತರಬೇತಿ ಪಡೆದಿದ್ದಾರೆ ಎಂದು ಅಕಾಡೆಮಿ ತಿಳಿಸಿದೆ.

795 ಅಭ್ಯರ್ಥಿಗಳು ಐಎಎಸ್‌ ಮತ್ತು ಐಪಿಎಸ್‌ ಶ್ರೇಣಿಗೆ ಆಯ್ಕೆಯಾಗಿದ್ದಾರೆ. ಇವರಲ್ಲಿ 182 ಮಹಿಳೆಯರು ಸೇರಿದ್ದಾರೆ. ನಕ್ಸಲ್‌ ಪೀಡಿತ ದಂತೇವಾಡ ನಮ್ರತಾ ಜೈನ್‌ 12ನೇ ರ‍್ಯಾಂಕ್ ಪಡೆದಿದ್ದಾರೆ. 

ಮೊದಲ ಹತ್ತು ಸ್ಥಾನ ಪಡೆದವರು
1. ಕನಿಷ್ಕ್‌ ಕಟಾರಿಯಾ
2. ಅಕ್ಷತ್‌ ಜೈನ್‌
3. ಜುನೈದ್‌ ಅಹ್ಮದ್‌
4. ಶ್ರೇಯಾನ್ಸ್‌ ಕುಮಟ್‌
5. ಸೃಷ್ಟಿ ಜಯಂತ್‌ ದೇಶ್‌ಮುಖ್‌
6. ಶುಭಂ ಗುಪ್ತಾ
7. ಕರ್ನತಿ ವರುಣ್‌ ರೆಡ್ಡಿ
8. ವೈಶಾಲಿ ಸಿಂಗ್‌
9. ಗುಂಜನ್‌ ದ್ವಿವೇದಿ
10. ತನ್ಮಯ್‌ ವಶಿಷ್ಠ ಶರ್ಮಾ

Tags: 

ಬರಹ ಇಷ್ಟವಾಯಿತೆ?

 • 78

  Happy
 • 4

  Amused
 • 2

  Sad
 • 3

  Frustrated
 • 6

  Angry

Comments:

0 comments

Write the first review for this !