ಯುಪಿಎಸ್‌ಸಿ: ಅರ್ಜಿ ಹಿಂಪಡೆಯಲು ಅವಕಾಶ

7

ಯುಪಿಎಸ್‌ಸಿ: ಅರ್ಜಿ ಹಿಂಪಡೆಯಲು ಅವಕಾಶ

Published:
Updated:

ನವದೆಹಲಿ: ಪರೀಕ್ಷೆಗೆ ಹಾಜರಾಗಲು ಸಾಧ್ಯವಾಗದಿದ್ದಾಗ ಅರ್ಜಿಯನ್ನು ಹಿಂಪಡೆಯುವ ಸೌಲಭ್ಯವನ್ನು ಕೇಂದ್ರ ಲೋಕಸೇವಾ ಆಯೋಗವು (ಯುಪಿಎಸ್‌ಸಿ) ಅಭ್ಯರ್ಥಿಗಳಿಗೆ ನೀಡಿದೆ. 

2019ರ ಎಂಜಿನಿಯರಿಂಗ್‌ ಸೇವಾ ಪರೀಕ್ಷೆಯ ಮೂಲಕ ಮೊದಲ ಬಾರಿಗೆ ಈ ಸೌಲಭ್ಯವನ್ನು ಆಯೋಗವು ಜಾರಿಗೆ ತರಲಿದೆ.  ಯುಪಿಎಸ್‌ಸಿ ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳ ಪೈಕಿ ಶೇ 50ರಷ್ಟು ಮಂದಿ ಮಾತ್ರ ಪೂರ್ವಭಾವಿ ಪರೀಕ್ಷೆಗೆ ಹಾಜರಾಗುತ್ತಿದ್ದರು. ಎಲ್ಲ ಅಭ್ಯರ್ಥಿಗಳಿಗೂ ಪ್ರಶ್ನೆಪತ್ರಿಕೆ ಮುದ್ರಿಸಬೇಕಾಗಿದ್ದರಿಂದ ಸಮಯ ಮತ್ತು ಸಂಪನ್ಮೂಲ ವ್ಯರ್ಥವಾಗುತ್ತಿತ್ತು. ಹೀಗಾಗಿ, ಈ ಸೌಲಭ್ಯವನ್ನು ಆಯೋಗ ಪರಿಚಯಿಸುತ್ತಿದೆ. 

ಅರ್ಜಿಯನ್ನು ಹಿಂಪಡೆಯಲು ಬಯಸುವ ಅಭ್ಯರ್ಥಿಗಳು, ತಾವು ನೋಂದಣಿ ಮಾಡಿಕೊಂಡ ಮೊಬೈಲ್‌ ಸಂಖ್ಯೆ ಮತ್ತು ಇ–ಮೇಲ್‌ ಮೂಲಕ ಆಯೋಗಕ್ಕೆ ಮಾಹಿತಿ ನೀಡಬೇಕು. ಈ ಪ್ರಕ್ರಿಯೆ ಯಶಸ್ವಿಯಾಗಿ ಪೂರ್ಣಗೊಂಡ ಬಳಿಕ, ಅರ್ಜಿ ರದ್ದುಗೊಳಿಸಿರುವ ಬಗ್ಗೆ ಆಯೋಗವು ಮೊಬೈಲ್‌ಗೆ ಸಂದೇಶ ಕಳುಹಿಸಲಿದೆ ಎಂದು ಯುಪಿಎಸ್‌ಸಿ ಮುಖ್ಯಸ್ಥರು ತಿಳಿಸಿದ್ದಾರೆ.

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !