ಬುಧವಾರ, ಜನವರಿ 22, 2020
18 °C

ಎಫ್‌–16 ಯುದ್ಧ ವಿಮಾನ ದುರ್ಬಳಕೆ: ಪಾಕ್‌ಗೆ ಅಮೆರಿಕ ಛೀಮಾರಿ

ಪಿಟಿಐ Updated:

ಅಕ್ಷರ ಗಾತ್ರ : | |

ವಾಷಿಂಗ್ಟನ್‌: ಎಫ್‌–16 ಯುದ್ಧ ವಿಮಾನಗಳನ್ನು ಪಾಕಿಸ್ತಾನ ದುರುಪಯೋಗಪಡಿಸಿಕೊಂಡಿದೆ ಎಂದು ಅಮೆರಿಕ ಛೀಮಾರಿ ಹಾಕಿದೆ.

ಈ ಸಂಬಂಧ ಪಾಕಿಸ್ತಾನದ ವಾಯುಪಡೆ ಮುಖ್ಯಸ್ಥ ಮಾರ್ಷಲ್ ಮುಜಾಹಿದ್‌ ಅನ್ವರ್ ಖಾನ್ ಅವರಿಗೆ ಆಗಸ್ಟ್ ತಿಂಗಳಲ್ಲೇ ಅಂದಿನ ಶಸ್ತ್ರಾಸ್ತ್ರ ನಿಯಂತ್ರಣ ಮತ್ತು ಅಂತರರಾಷ್ಟ್ರೀಯ ಭದ್ರತಾ ವ್ಯವಹಾರಗಳ ಉಪಕಾರ್ಯದರ್ಶಿ ಅಂಡ್ರೆ ಥಾಂಪ್ಸನ್‌ ಅವರು ಪತ್ರ ಬರೆದು ಕಿಡಿಕಾರಿದ್ದರು ಎಂದು ಪತ್ರಿಕೆಯೊಂದು ವರದಿ ಮಾಡಿದೆ.

ಫೆಬ್ರುವರಿ 26ರ ಬಾಲಾಕೋಟ್ ವೈಮಾನಿಕ ದಾಳಿಯ ನಂತರದ ಘಟನೆಗಳನ್ನು ಪತ್ರದಲ್ಲಿ ನೇರವಾಗಿ ಉಲ್ಲೇಖಿಸಿಲ್ಲ. ಆದರೆ, ಕಾಶ್ಮೀರ ಪ್ರದೇಶದಲ್ಲಿ ಎಫ್-16 ವಿಮಾನ ಹಾರಾಟ ನಡೆಸಲಾಗಿದ್ದು, ಇದು ಅಮೆರಿಕದ ಕಳವಳಕ್ಕೆ ಕಾರಣವಾಗಿದೆ ಎಂದೂ ಪತ್ರದಲ್ಲಿ ಹೇಳಿದ್ದಾರೆ.

‘ಪಾಕಿಸ್ತಾನ ಕೈಗೊಂಡ ಕ್ರಮಗಳು ವಿಭಿನ್ನ ರೀತಿಯಲ್ಲೂ ಪರಿಣಾಮ ಬೀರಬಹುದು. ಅಮೆರಿಕದ ಸೂಕ್ಷ್ಮ ತಂತ್ರಜ್ಞಾನ ಪಡೆಯಲು ಸಹಕಾರಿಯೂ ಆಗಬಹುದು. ಜತೆಗೆ ಭದ್ರತೆ ವಿಷಯಗಳಿಗೂ ಧಕ್ಕೆಯಾಗಬಹುದು’ ಎಂದು ಥಾಂಪ್ಸನ್‌ ಅವರು ತಿಳಿಸಿದ್ದಾರೆ.

ಇಲ್ಲಿನ ಪಾಕಿಸ್ತಾನದ ರಾಯಭಾರ ಕಚೇರಿ ಈ ಬಗ್ಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು