'ಸರ್ಕಾರಿ ನೌಕರರು ಬಿಜೆಪಿ ಕಾರ್ಯಕರ್ತರಿಗೆ ಗೌರವ ಕೊಡದಿದ್ರೆ ಶೂಗಳಿಂದ ಹೊಡೆಯಿರಿ'

ಮಂಗಳವಾರ, ಜೂನ್ 25, 2019
23 °C
ಬಿಜೆಪಿ ಶಾಸಕ ಕುಶ್ವಾಹ ಎಡವಟ್ಟು ಹೇಳಿಕೆ

'ಸರ್ಕಾರಿ ನೌಕರರು ಬಿಜೆಪಿ ಕಾರ್ಯಕರ್ತರಿಗೆ ಗೌರವ ಕೊಡದಿದ್ರೆ ಶೂಗಳಿಂದ ಹೊಡೆಯಿರಿ'

Published:
Updated:

ಲಲಿತಪುರ್: ಬಿಜೆಪಿ ಕಾರ್ಯಕರ್ತರಿಗೆ ಸರ್ಕಾರಿ ನೌಕರರು ಗೌರವ, ಮರ್ಯಾದೆ ಕೊಡದಿದ್ದರೆ, ನಿಮ್ಮ ಕಾಲಲ್ಲಿರುವ ಶೂಗಳಿಂದ ಅವರಿಗೆ ಹೊಡೆಯಿರಿ ಎಂಬ ವಿವಾದಾದ್ಮಕ ಹೇಳಿಕೆಯನ್ನು ಉತ್ತರ ಪ್ರದೇಶದ ಬಿಜೆಪಿ ಶಾಸಕರೊಬ್ಬರು ಹೇಳಿದ್ದಾರೆ.

ಪಕ್ಷದ ಜಿಲ್ಲಾಘಟಕದ ವತಿಯಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಈ ರೀತಿ ಹೇಳಿರುವ ಹೇಳಿಕೆಯೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇಲ್ಲಿನ ಬಿಜೆಪಿಯ ಶಾಸಕ ರಾಮರತನ್ ಕುಶ್ವಾಹ ಈ ಹೇಳಿಕೆ ನೀಡಿದ್ದಾರೆ.

ಸರ್ಕಾರಿ ನೌಕರರು ನಮ್ಮ ಪಕ್ಷದ ಕಾರ್ಯಕರ್ತರಿಗೆ ಮರ್ಯಾದೆ ಕೊಡದಿದ್ದರೆ ಕಾಲಿನಲ್ಲಿ ಇರುವ ಶೂತೆಗೆದುಕೊಂಡು ಹೊಡೆಯಿರಿ, ಯಾಕೆಂದರೆ, ತಾಳ್ಮೆಗೂ ಒಂದು ಮಿತಿಯಿದೆ ಎಂದಿದ್ದಾರೆ.

ಇತ್ತೀಚೆಗೆ ಬಿಜೆಪಿ ಶಾಸಕರೊಬ್ಬರು ಮಹಿಳೆಯೊಬ್ಬರಿಗೆ ಕಾಲಿನಿಂದ ಒದ್ದು ಆಕೆಯನ್ನು ತಳ್ಳಿದ್ದ ವಿಡಿಯೋ ವೈರಲ್ ಆಗಿತ್ತು. ನಂತರ ಶಾಸಕ ಕ್ಷಮೆಯಾಚಿಸಿದ್ದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

  • 1

    Happy
  • 2

    Amused
  • 0

    Sad
  • 0

    Frustrated
  • 19

    Angry

Comments:

0 comments

Write the first review for this !