ಕುಂಟುತ್ತಾ ಸಾಗಿರುವ ಆನೆ, ಸೈಕಲ್ ತಳ್ಳುತ್ತಿರುವ ಅಖಿಲೇಶ್

ಭಾನುವಾರ, ಜೂನ್ 16, 2019
28 °C

ಕುಂಟುತ್ತಾ ಸಾಗಿರುವ ಆನೆ, ಸೈಕಲ್ ತಳ್ಳುತ್ತಿರುವ ಅಖಿಲೇಶ್

Published:
Updated:

ನವದೆಹಲಿ: ಉತ್ತರಪ್ರದೇಶ ಲೋಕಸಭಾ ಕ್ಷೇತ್ರದಲ್ಲಿ 35 ರಲ್ಲಿ ಮುಂದಿದೆ. ಎಸ್‌‌ಪಿ ಮತ್ತು ಬಿಎಸ್‌ಪಿ ಮೈತ್ರಿಕೂಟ 27 ಕ್ಷೇತ್ರಗಳಲ್ಲಿ ಮುಂದಿದ್ದಾರೆ. ಉತ್ತರ ಪ್ರದೇಶದಲ್ಲಿ ಯಾರು ಅಧಿಕ ಸ್ಥಾನಗಳನ್ನು ಪಡೆಯುತ್ತಾರೋ ಅವರು ಪ್ರಧಾನಿ ಗದ್ದುಗೆಗೆ ಏರುತ್ತಾರೆ ಎಂಬ ಮಾತಿದೆ. ಅದರಂತೆ ಕಳೆದ ಬಾರಿ ಬಿಜೆಪಿ ಅಧಿಕ ಸ್ಥಾನಗಳನ್ನು ಪಡೆದು ಮೋದಿ ಪ್ರಧಾನಿ ಹುದ್ದೆಗೆ ಏರಿದ್ದರು. ಈ ಬಾರಿ ಬಿಜೆಪಿ ಮುಂದಿದೆ.

ಮೈತ್ರಿಕೂಟದ ಮಾಯಾವತಿ 15 ಕ್ಷೇತ್ರಗಳಲ್ಲಿ ಮುಂದಿದ್ದರೆ, ಅಖಿಲೇಶ್ ಯಾದವ್ 12 ಕ್ಷೇತ್ರಗಳಲ್ಲಿ ಮುಂದಿದ್ದಾರೆ. 2014ರ ಚುನಾವಣೆಯಲ್ಲಿ ಬಿಜೆಪಿ ಮತ್ತು ಅಪ್ನಾ  ದಳ 73 ಕ್ಷೇತ್ರಗಳಲ್ಲಿ ವಿಜಯ ಸಾಧಿಸಿತ್ತು. ಸಮಾಜವಾದಿ ಪಾರ್ಟಿ ಐದು ಕ್ಷೇತ್ರಗಳಲ್ಲಿ, ಬಿಎಸ್‌‌ಪಿ ತನ್ನ ಖಾತೆಯನ್ನೇ ತೆಗೆದಿರಲಿಲ್ಲ.              

ಎರಡು ದಿನಗಳ ಹಿಂದೆ ಬಂದ ಸಮೀಕ್ಷೆಗಳ ಪ್ರಕಾರ ಎನ್‌‌ಡಿಎ 58 ಕ್ಷೇತ್ರಗಳಲ್ಲಿ ಜಯಸಾಧಿಸಲಿದ್ದು, ಯುಪಿಎ 2 ಕ್ಷೇತ್ರಗಳಲ್ಲಿ ಜಯಸಾಧಿಸಲಿದೆ. ಮಾಯಾವತಿ ಮತ್ತು ಅಖಿಲೇಶ್ ಯಾದವ್ ಪಕ್ಷಗಳು 20 ಕ್ಷೇತ್ರಗಳಲ್ಲಿ ಜಯಸಾಧಿಸಲಿದ್ದಾರೆ ಎಂದು ಹೇಳಿದೆ.

ಆದರೆ, ಎಬಿಪಿ-ಎಸಿ ನೆಲ್ಸನ್ ಸಮೀಕ್ಷೆ ಪ್ರಕಾರ 22 ಕ್ಷೇತ್ರಗಳಲ್ಲಿ ಬಿಜೆಪಿ ಜಯಸಾಧಿಸಲಿದ್ದು, 56 ಕ್ಷೇತ್ರಗಳಲ್ಲಿ ಎಸ್ ಪಿ ಮತ್ತು ಬಿಎಸ್ ಪಿ ಮೈತ್ರಿಕೂಟ 56 ಕ್ಷೇತ್ರಗಳಲ್ಲಿ ಜಯಸಾಧಿಸಲಿದ್ದಾರೆ ಎಂದು ಹೇಳಿದೆ. ರಿಪಬ್ಲಿಕ್ ಟಿವಿ-ಸಿವೋಟರ್ ನಡೆಸಿದ ಸಮೀಕ್ಷೆಯಲ್ಲಿ ಎನ್ ಡಿಎ 38 ಕ್ಷೇತ್ರಗಳಲ್ಲಿ ಜಯಸಾಧಿಸಲಿದ್ದು, ಎಸ್‌‌ಪಿ- ಬಿಎಸ್‌‌ಪಿ ಮೈತ್ರಿಕೂಟ 40 ಕ್ಷೇತ್ರಗಳಲ್ಲಿ ಜಯಸಾಧಿಸಲಿದ್ದಾರೆ ಎಂದು ಹೇಳಿದೆ. ರಿಪಬ್ಲಿಕ್ -ಜನ್ ಕಿ ಬಾತ್ 46-57 ಎನ್ ಡಿಎ, ಯುಪಿಎ 2-4, ಮತ್ತು ಇತರರು 21-32 ಕ್ಷೇತ್ರಗಳನ್ನು ಪಡೆಯಲಿದ್ದಾರೆ ಎಂದು ತಿಳಿಸಿದೆ.

ಇವೆಲ್ಲಾ ಬೆಳವಣಿಗೆಗಳಿಂದ ಮಾಯಾವತಿ-ಅಖಿಲೇಶ್ ಯಾದವ್ ಅವರ ಲೆಕ್ಕಾಚಾರ ಉಲ್ಟಾ ಹೊಡೆಯುತ್ತಾ ಎಂಬುದನ್ನು ಕಾದುನೋಡಬೇಕು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

  • 1

    Happy
  • 0

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !