ಭಾನುವಾರ, ಮಾರ್ಚ್ 7, 2021
21 °C

ಕೊರೊನಾ ತಡೆಗಟ್ಟಲು ಲಸಿಕೆ ಅಭಿವೃದ್ಧಿ: ವಿಜ್ಞಾನಿಗಳಿಂದ ಪ್ರಧಾನಿ ಮೋದಿಗೆ ಅಭಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಕೊರೊನಾ ಸೋಂಕು ತಡೆಗಟ್ಟುವಿಕೆಗೆ ಈಗಾಗಲೇ 30 ಲಸಿಕೆಗಳನ್ನು ಅಭಿವೃದ್ಧಿಪಡಿಸಿದ್ದು ಅವುಗಳಲ್ಲಿ ಕೆಲವು ಈಗಾಗಲೇ ಪ್ರಾಯೋಗಿಕ ಹಂತದಲ್ಲಿವೆ ಎಂದು ಪ್ರಧಾನಿ ನರೇಂದ್ರ ಮೋದಿಗೆ ಭಾರತೀಯ ವಿಜ್ಞಾನಿಗಳು ಅಭಯ ನೀಡಿದ್ದಾರೆ.

ಮಂಗಳವಾರ ಪ್ರಧಾನಿ ನರೇಂದ್ರ ಮೋದಿ ಅವರು ವೈಜ್ಞಾನಿಕ ಕಾರ್ಯಪಡೆಯೊಂದಿಗೆ ಸಭೆ ನಡೆಸಿದ್ದು, ಕೊರೊನಾ ನಿರ್ಮೂಲನೆಗೆ ಲಸಿಕೆ ಅಭಿವೃದ್ಧಿ ಪಡಿಸುವುದು, ಔಷಧ ಅಭಿವೃದ್ಧಿ, ರೋಗ ಪತ್ತೆ ಹಾಗೂ ಪರೀಕ್ಷಾ ವಿಧಾನಗಳ ಕುರಿತು ಸಭೆಯಲ್ಲಿ ವಿವರ ಪಡೆದಿದ್ದಾರೆ ಎನ್ನಲಾಗಿದೆ.

ಪ್ರಧಾನಿ ನರೇಂದ್ರ ಮೋದಿ ಅವರ ಕಚೇರಿ ಬಿಡುಗಡೆ ಮಾಡಿರುವ ಪತ್ರಿಕಾ ಪ್ರಕಟಣೆಯಲ್ಲಿ ಈ ವಿಷಯ ತಿಳಿಸಲಾಗಿದ್ದು, ಭಾರತೀಯ ಔಷಧ ತಯಾರಿಕಾ ಕಂಪನಿಗಳು ಲಸಿಕೆ ಅಭಿವೃದ್ಧಿ ಸಂಶೋಧನೆಯಲ್ಲಿ ತೊಡಗಿವೆ ಎಂದು ತಿಳಿಸಲಾಗಿದೆ.

ದೇಶದಲ್ಲಿ ಔಷಧ ಅಭಿವೃದ್ಧಿಯಲ್ಲಿ ಮೂರು ವಿಧಾನಗಳನ್ನು ಗಣನೆಗೆ ತೆಗೆದುಕೊಳ್ಳಲಾಗಿದೆ. ಪ್ರಥಮ ವಿಧಾನದಲ್ಲಿ ಈಗಾಗಲೇ ನೀಡಲಾಗುತ್ತಿರುವ ಔಷಧಿಗಳ ಮರುಹಂಚಿಕೆ. ಈ ವಿಭಾಗದಲ್ಲಿ ಕನಿಷ್ಟ ನಾಲ್ಕು ಔಷಧಗಳು ಪರೀಕ್ಷೆಗೆ ಒಳಗಾಗುತ್ತಿವೆ. ಎರಡನೆಯದಾಗಿ, ಪ್ರಯೋಗಾಲಯ ಪರಿಶೀಲನೆಗೆ ಪರಿಗಣಿಸಲಾಗಿರುವ ಉತ್ತಮ ಕಾರ್ಯಕ್ಷಮತೆಯುಳ್ಳ ಔಷಧಗಳ ಅಭಿವೃದ್ಧಿಗೆ ಚಾಲನೆ, ಮೂರನೆಯದಾಗಿ ಸಾಮಾನ್ಯ ರೋಗನಿರೋಧಕ ಗುಣಲಕ್ಷಣಗಳ ಸಸ್ಯದ ಸಾರಗಳು ಮತ್ತು ಉತ್ತನ್ನಗಳ ಪರಿಶೀಲನೆ ಎಂದು ಹೇಳಲಾಗಿದೆ.

ಕೊರೊನಾ ಸೋಂಕು ಸಂಬಂಧ ಸೋಂಕು ಪತ್ತೆ, ಪರೀಕ್ಷೆಗೆ ಸಂಬಂಧಿಸಿದಂತೆ ಹಲವು ಶೈಕ್ಷಣಿಕ ಸಂಶೋಧನಾ ಸಂಸ್ಥೆಗಳು,ಸ್ಟಾರ್ಟ್ ಅಪ್‌ಗಳು ನೂತನ ರೀತಿಯಲ್ಲಿ ಪರೀಕ್ಷೆ ನಡೆಸುತ್ತಿವೆ.  ಈ ಪರೀಕ್ಷೆಗಳ ಸಾಮರ್ಥ್ಯವನ್ನು ದೇಶದಾದ್ಯಂತ ಪ್ರಯೋಗಾಲಯಗಳನ್ನು ಜೋಡಿಸುವ ಯೋಜನೆ ಇದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು