ಶುಕ್ರವಾರ, ಸೆಪ್ಟೆಂಬರ್ 20, 2019
29 °C

ಮೋದಿಗೆ ದನಿಗೂಡಿಸದ ನಿತೀಶ್

Published:
Updated:

ದರ್ಭಾಂಗ (ಬಿಹಾರ): ಪ್ರಧಾನಿ ನರೇಂದ್ರ ಮೋದಿ ಅವರು ‘ವಂದೇ ಮಾತರಂ’ ಎಂದು ಘೋಷಣೆ ಕೂಗುತ್ತಿದ್ದರೂ, ಅದೇ ವೇದಿಕೆಯಲ್ಲಿದ್ದ ಬಿಹಾರ ಮುಖ್ಯಮಂತ್ರಿ ಸುಮ್ಮನೆ ಕುಳಿತಿದ್ದ ದೃಶ್ಯಗಳಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಇಲ್ಲಿ ನಡೆದ ಎನ್‌ಡಿಎ ಪ್ರಚಾರ ಕಾರ್ಯಕ್ರಮದಲ್ಲಿ ಮೋದಿ, ರಾಮ್‌ ವಿಲಾಸ್ ಪಾಸ್ವಾನ್, ನಿತೀಶ್ ಕುಮಾರ್ ಸೇರಿದಂತೆ ಮೈತ್ರಿಕೂಟದ ಹಲವು ನಾಯಕರು ಭಾಗವಹಿಸಿದ್ದರು. ಭಾಷಣದ ಮಧ್ಯೆ ಮೋದಿ ಅವರು ‘ವಂದೇ ಮಾತರಂ’ ಎಂದು ಕೂಗಿ, ಗಾಳಿಯಲ್ಲಿ ಮುಷ್ಠಿ ಬೀಸಿದರು. ಮತ್ತೆ ಮತ್ತೆ ಘೋಷಣೆಯನ್ನು ಪುನರಾವರ್ತಿಸಿದರು.

ಆಗ ವೇದಿಕೆಯಲ್ಲಿದ್ದ ಎಲ್ಲಾ ನಾಯಕರೂ ಘೋಷಣೆ ಕೂಗಿದರು. ಆದರೆ ನಿತೀಶ್ ಮಾತ್ರ ಮುಗುಳ್ನಗುತ್ತಾ ಕುಳಿತಿದ್ದರು. ನಂತರದ ಕೆಲವೇ ಕ್ಷಣಗಳಲ್ಲಿ ಉಳಿದ ನಾಯಕರು ಎದ್ದು ನಿಂತರು. ನಿತೀಶ್ ಆಗಲೂ ಕುಳಿತೇ ಇದ್ದರು. ಆದರೆ ಅತ್ತಿತ್ತ ನೋಡಿ, ಯಾರೂ ಕುಳಿತಿಲ್ಲ ಎಂಬುದು ಖಾತರಿಯಾದ ನಂತರ ತಾವೂ ಎದ್ದುನಿಂತರು.

ಇದು ಎನ್‌ಡಿಎ ಒಳಗಿನ ಒಡಕನ್ನು ತೋರಿಸುತ್ತಿದೆ ಎಂದು ಹಲವರು ಲೇವಡಿ ಮಾಡಿದ್ದಾರೆ.

Post Comments (+)