ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮೋದಿಗೆ ಮತ ಹಾಕಿ’ ಎಂದು ಮದುವೆ ಕಾರ್ಡ್‌ ಮೇಲೆ ಮುದ್ರಿಸಿದ್ದಕ್ಕೆ ಆಯೋಗ ನೋಟಿಸ್

Last Updated 17 ಮಾರ್ಚ್ 2019, 5:09 IST
ಅಕ್ಷರ ಗಾತ್ರ

ನವದೆಹಲಿ: ‘ಮದುವೆಗೆ ಬರುವವರು ಗಿಫ್ಟ್ ತರಬೇಡಿ. ಆದರೆ ದೇಶದ ಹಿತದೃಷ್ಟಿಯಿಂದ ಬಿಜೆಪಿಗೆ ಮತ ಹಾಕಿ, ನರೇಂದ್ರ ಮೋದಿ ಮತ್ತೊಮ್ಮೆ ಈ ದೇಶದ ಪ್ರಧಾನಿಯಾಗಲಿ’ ಎಂದು ಮಗನ ವಿವಾಹ ಆಮಂತ್ರಣ ಪತ್ರಿಕೆಯಲ್ಲಿ ನಮೂದಿಸಿದ್ದತಂದೆಗೆ ಚುನಾವಣಾ ಆಯೋಗ ನೋಟಿಸ್ ಜಾರಿ ಮಾಡಿದೆ.

ಉತ್ತರಾಖಂಡ್‌ನ ಜೋಶಿಖೋಲಾ ಗ್ರಾಮದಲ್ಲಿ ಗೋಶಾಲೆ ನಡೆಸುವ ಜಗದೀಶ್ ಚಂದ್ರ ಜೋಶಿ ತಮ್ಮ ಮಗ ಜೀವನ್ ಮದುವೆ ನಿಮಿತ್ತ ರೂಪಿಸಿದ್ದ ಆಮಂತ್ರಣ ಪತ್ರಿಕೆ ಆಯೋಗದ ಕೆಂಗಣ್ಣಿಗೆ ಗುರಿಯಾಗಿದೆ.

‘ತೋಫಾ ಮತ್ ಲಾನಾ ಕಿಂತು ವರ್ ವಧು ಕೋ ಆಶೀರ್ವಾದ್ ದೇನೆ ಕೆ ಪೆಹ್ಲೆ 11 ಏಪ್ರಿಲ್ ಕೊ ರಾಷ್ಟ್ರಹಿತ್‌ ಮೆ ಮೋದಿ ಜಿ ಕೊ ವೋಟ್ ಜರೂರ್‌ ಕರ್‌ ಆನಾ’ (ಮದುವೆಗೆ ಬರುವವರು ವಧುವರರಿಗೆ ಗಿಫ್ಟ್‌ ತರಬೇಡಿ, ಮದುಮಕ್ಕಳಿಗೆಆಶೀರ್ವಾದ ಮಾಡುವ ಮೊದಲು 11ನೇ ಏಪ್ರಿಲ್‌ ದಿನ ಮೋದಿಜಿಗೆ ಮತ ಹಾಕಿ) ಎಂದು ಆಮಂತ್ರಣ ಪತ್ರಿಕೆಯಲ್ಲಿ ಕೋರಿದ್ದಾರೆ.

ಚುನಾವಣಾ ನೀತಿ ಸಂಹಿತಿ ಉಲ್ಲಂಘನೆ ಆರೋಪದ ಮೇಲೆ ಬಾಗೇಶ್ವರದ ಸಹಾಯಕ ಚುನಾವಣಾ ಅಧಿಕಾರಿ (ಎಆರ್‌ಒ) ಜೋಶಿ ಅವರಿಗೆ ನೋಟಿಸ್ ಜಾರಿ ಮಾಡಿದ್ದಾರೆ ಎಂದು ‘ಹಿಂದೂಸ್ತಾನ್ ಟೈಮ್ಸ್’ ವರದಿ ಮಾಡಿದೆ.

ಜಿಲ್ಲಾ ಚುನಾವಣಾ ಅಧಿಕಾರಿ ರಂಜನಾ, ‘ಆಮಂತ್ರಣ ಪತ್ರದಲ್ಲಿ ಬಿಜೆಪಿ ಪರ ಘೋಷಣೆ ಮುದ್ರಿಸಿದ್ದವರಿಗೆ ಎಆರ್‌ಒ ನೋಟಿಸ್ ಜಾರಿ ಮಾಡಿ ವಿವರಣೆ ಕೇಳಿದ್ದಾರೆ. ಆರೋಪಿಗಳಿಗೆ 24 ಗಂಟೆಗಳ ಒಳಗೆ ಖುದ್ದು ಹಾಜರಾಗಿ ವಿವರಣೆ ನೀಡಲು ಸೂಚಿಸಲಾಗಿದೆ’ ಎಂದು ಹೇಳಿದ್ದಾರೆ.

‘ಆಮಂತ್ರಣ ಪತ್ರಿಕೆಯಲ್ಲಿ ಮುದ್ರಿಸಬೇಕಾದ ಬರಹವನ್ನು ನನ್ನ ಮಕ್ಕಳು ಕೊಟ್ಟಿದ್ದರು. ನನ್ನಿಂದ ತಪ್ಪಾಗಿದ್ದರೆ ದಯವಿಟ್ಟು ಕ್ಷಮಿಸಿ ಎಂದು ಆಯೋಗವನ್ನು ಕೋರುತ್ತೇನೆ. ನಾವು ಸಾಮಾನ್ಯ ಜನ. ಯಾವುದೇ ರಾಜಕೀಯ ಪಕ್ಷದ ಕಾರ್ಯಕರ್ತರಲ್ಲ’ ಎಂದು ಜೋಶಿ ತಿಳಿಸಿದ್ದಾರೆ.ಉತ್ತರಾಖಂಡದಲ್ಲಿ ಲೋಕಸಭೆ ಚುನಾವಣೆಗಳು ಏಪ್ರಿಲ್ 11ರಂದು ನಡೆಯಲಿವೆ. ಜೋಶಿ ಅವರ ಮಗನ ಮದುವೆಯ ಮುಹೂರ್ತ ಏಪ್ರಿಲ್ 22ಕ್ಕೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT