ಶನಿವಾರ, ಸೆಪ್ಟೆಂಬರ್ 21, 2019
24 °C

ಬಂಗಾಳದಲ್ಲಿ ಚುನಾವಣಾ ಹಿಂಸಾಚಾರ: ರಾತ್ರೋರಾತ್ರಿ ಬಂಕುರ ಜಿಲ್ಲಾಧಿಕಾರಿ ವರ್ಗಾವಣೆ

Published:
Updated:

ನವದೆಹಲಿ: ಪಶ್ಚಿಮ ಬಂಗಾಳದಲ್ಲಿ ಚುನಾವಣಾ ಹಿಂಸಾಚಾರದ ನಂತರ ಚುನಾವಣಾ ಆಯೋಗವು ಭಾನುವಾರ ಬಂಕುರಾ ಜಿಲ್ಲಾಧಿಕಾರಿ ಉಮಾ ಶಂಕರ್‌ ಅವರನ್ನು ವರ್ಗಾವಣೆ ಮಾಡಿದೆ. ಮುಕ್ತ ಆರ್ಯ ಅವರನ್ನು ನೂತನ ಜಿಲ್ಲಾಧಿಕಾರಿಯಾಗಿ ನೇಮಿಸಲಾಗಿದೆ.

‘ಮುಕ್ತ ಆರ್ಯ ಅವರನ್ನು ಬಂಕುರದ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಚುನಾವಣಾ ಅಧಿಕಾರಿಯಾಗಿ ತಕ್ಷಣದಿಂದ ಜಾರಿಗೆ ಬರುವಂತೆ ನೇಮಿಸಲಾಗಿದೆ ಎಂದು ಕೇಂದ್ರ ಚುನಾವಣಾ ಆಯೋಗವು ಪಶ್ಚಿಮ ಬಂಗಾಳದ ಮುಖ್ಯ ಚುನಾವಣಾಧಿಕಾರಿಗೆ ಕಳಿಸಿರುವ ಪತ್ರದಲ್ಲಿ ತಿಳಿಸಿದೆ.

ಸೋಮವಾರ ಮುಂಜಾನೆ ಮತಯಂತ್ರಗಳ ಲೆಕ್ಕಪರಿಶೀಲನೆ (ಸ್ಕ್ರೂಟಿನಿ) ಕಾರ್ಯ ಆರಂಭವಾಗುವ ಮೊದಲು ಆರ್ಯ ಜವಾಬ್ದಾರಿ ತೆಗೆದುಕೊಂಡಿರಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಬಂಕುರದ ಮತಗಟ್ಟೆ ಸಂಖ್ಯೆ 1 ಸಮೀಪ ಟಿಎಂಸಿ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ನಡೆದ ಹಿಂಸಾಚಾರದಲ್ಲಿ ಬಿಜೆಪಿ ಕಾರ್ಯಕರ್ತರೊಬ್ಬರು ಗಂಭೀರವಾಗಿ ಗಾಯಗೊಂಡಿದ್ದರು. ನಿನ್ನೆ (ಭಾನುವಾರ) ನಡೆದ 6ನೇ ಹಂತದ ಚುನಾವಣೆಯಲ್ಲಿ ಪಶ್ಚಿಮ ಬಂಗಳಾದ ಎಂಟು ಕ್ಷೇತ್ರಗಳಿಗೆ ಮತದಾನ ನಡೆಯಿತು.

Post Comments (+)