ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

'ಇವಿಎಂ ಹ್ಯಾಕಿಂಗ್‌ ಸಾಧ್ಯ' ಎಂದು ಹೇಳಿದ ಸೈಬರ್ ತಜ್ಞ ಸಯ್ಯದ್ ಶುಜಾ ಯಾರು?

Last Updated 22 ಜನವರಿ 2019, 14:34 IST
ಅಕ್ಷರ ಗಾತ್ರ

ನವದೆಹಲಿ: ಭಾರತದ ಚುನಾವಣೆಗಳಲ್ಲಿ ಬಳಸಲಾಗಿರುವ ವಿದ್ಯುನ್ಮಾನ ಮತಯಂತ್ರ(ಇವಿಎಂ)ಗಳನ್ನು ಹ್ಯಾಕ್‌ ಮಾಡಲು ಸಾಧ್ಯ ಎಂದು ಲಂಡನ್ ಮೂಲದ ಸೈಬರ್ ತಜ್ಞ ಸಯ್ಯದ್ ಶುಜಾ ಹೇಳಿರುವುದು ರಾಜಕೀಯ ವಲಯದಲ್ಲಿ ಭಾರಿ ಚರ್ಚೆಗೀಡಾಗಿದೆ.

ಸೋಮವಾರ ಲಂಡನ್‌ನಲ್ಲಿ ನಡೆದಹ್ಯಾಕಥಾನ್‌ನಲ್ಲಿ ವಿಡಿಯೊ ಕಾನ್ಫರೆನ್ಸ್‌ ಮೂಲಕ ಮಾತನಾಡಿರುವ ಸೈಬರ್‌ ತಜ್ಞ ಎಂದು ಹೇಳಿಕೊಳ್ಳುವ ಸಯ್ಯದ್ ಶುಜಾ, ’ಮಹಾರಾಷ್ಟ್ರ, ಉತ್ತರ ಪ್ರದೇಶ ಮತ್ತು ಗುಜರಾತ್ ಚುನಾವಣೆಯಲ್ಲಿ 'ಇವಿಎಂ ದುರ್ಬಳಕೆ' ನಡೆದಿದೆ. ಭಾರತದ ಚುನಾವಣೆಗಳಲ್ಲಿ ಬಳಸಿರುವ ಇವಿಎಂಗಳನ್ನು ನಾನು ಹ್ಯಾಕ್‌ ಮಾಡಬಲ್ಲೆ’ ಎಂದು ಹೇಳಿಕೊಂಡಿದ್ದರು.

ಹ್ಯಾಕರ್‌ ಹೇಳಿಕೆಗೆ ಪ್ರತಿಕ್ರಿಯಿಸಿರುವ ಚುನಾವಣಾ ಆಯೋಗ, ’ಇದೊಂದು ಪ್ರಚೋದಕಾರಿ, ಆಕ್ಷೇಪಾರ್ಹ ಬೆಳವಣಿಗೆಯಾಗಿದ್ದು, ಈ ಬಗ್ಗೆ ಕಾನೂನಾತ್ಮಕ ಕ್ರಮಗಳನ್ನು ಕೈಗೊಳ್ಳುವುದು ಖಚಿತ’ ಎಂದಿದೆ. ಇವಿಎಂಗಳ ದುರ್ಬಳಕೆ ಅಸಾಧ್ಯ ಎಂಬ ಧೋರಣೆಗೆ ಚುನಾವಣಾ ಆಯೋಗ ಬದ್ಧವಾಗಿದೆ ಎಂದು ಪುನರುಚ್ಛರಿಸಿದೆ.

ಯಾರು ಈ ಸಯ್ಯದ್ ಶುಜಾ?
ಹೈದರಾಬಾದ್ ಮೂಲದ ಶುಜಾ ಇಲೆಕ್ಟ್ರಾನಿಕ್ ಕಾರ್ಪೊರೇಶನ್ ಆಫ್ ಇಂಡಿಯಾ ಲಿಮಿಟೆಡ್‍ (ಇಸಿಐಎಲ್‍) ನಲ್ಲಿ ಕೆಲಸ ಮಾಡಿದ್ದರು ಎಂದು ಹೇಳುತ್ತಿದ್ದಾರೆ. ಆದರೆ ಲಂಡನ್‍ನಲ್ಲಿ ನಡೆದ ಹ್ಯಾಕಥಾನ್‍ನಲ್ಲಿ ಮುಖ ಮುಚ್ಚಿ ಲೈವ್ ವಿಡಿಯೊ ಕಾನ್ಫರೆನ್ಸ್ ನಲ್ಲಿ ಶುಜಾ ಭಾಗಿಯಾಗಿದ್ದರು. ಹ್ಯಾಕಿಂಗ್ ಸಾಧ್ಯ ಎಂದು ಹೇಳಿರುವ ಶುಜಾ, ಇವಿಎಂನ್ನು ಹ್ಯಾಕ್ ಮಾಡುವುದು ಹೇಗೆ ಎಂಬುದರ ಬಗ್ಗೆ ಪ್ರಾತ್ಯಕ್ಷಿಕೆ ನೀಡಿಲ್ಲ.

ಇವಿಎಂ ವಿನ್ಯಾಸ ಕಾರ್ಯದಲ್ಲಿ ತಾನು ಭಾಗಿಯಾಗಿದ್ದೆ ಎಂದು ಹೇಳುತ್ತಿದ್ದಾರೆ ಶುಜಾ, ಆದರೆ ಅವರು ನಮ್ಮ ಸಂಸ್ಥೆಯ ಮಾಜಿ ಉದ್ಯೋಗಿ ಅಲ್ಲ. ಅವರ ವಾದವೂ ನಿರಾಧಾರ ಎಂದು ಇಸಿಐಎಲ್ ಹೇಳಿರುವುದಾಗಿ ದಿ ವೀಕ್ ವರದಿಮಾಡಿದೆ.

ಇಸಿಐಎಲ್‍ನಲ್ಲಿ 2,200ರಷ್ಟು ಉದ್ಯೋಗಿಗಳಿದ್ದು ಇದರಲ್ಲಿ ಶೇ. 80ರಷ್ಟು ಮಂದಿ ಇಂಜಿನಿಯರ್‌ಗಳಿದ್ದಾರೆ. ಇವಿಎಂ ಕಾರ್ಯದಲ್ಲಿ ಯುವ ಇಂಜಿನಿಯರ್‌‍ಗಳ ತಂಡವೇ ಇದೆ.ಇಸಿಐಎಲ್ ಮೂಲದ ಪ್ರಕಾರ ಇವಿಎಂ ಕೆಲಸಲ್ಲಿ ತೊಡಗಿದ್ದ ಇಂಜಿನಿಯರ್‌ವೊಬ್ಬರು ಅಮೆರಿಕದಲ್ಲಿ ನೆಲೆಸಿರುವ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಇದೊಂದು ಸುಳ್ಳು ಕಥೆ ಎಂದು ಇಸಿಐಎಲ್‍ನ ಹಿರಿಯ ಉದ್ಯೋಗಿಯೊಬ್ಬರು ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT