ಗುರುವಾರ , ಜುಲೈ 29, 2021
21 °C

ನಿರಾಯುಧ ಯೋಧರನ್ನು ಕಳುಹಿಸಿದ್ದು ಏಕೆ: ರಾಹುಲ್ ಪ್ರಶ್ನೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಭಾರತೀಯ ಯೋಧರನ್ನು ಚೀನಾ ಗಡಿಗೆ ನಿರಾಯುಧರನ್ನಾಗಿ ಏಕೆ ಕಳುಹಿಸಲಾಯಿತು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಸರ್ಕಾರವನ್ನು ಪ್ರಶ್ನಿಸಿದ್ದಾರೆ. 

ಲಡಾಖ್‌ನ ಗಾಲ್ವನ್ ಕಣಿವೆಯಲ್ಲಿ ಭಾರತದ 20 ಯೋಧರು ಹುತಾತ್ಮರಾದ ಬಗ್ಗೆ ಸರಣಿ ಪ್ರಶ್ನೆಗಳನ್ನು ಕೇಳಿರುವ ರಾಹುಲ್, ಪ್ರಧಾನಿ ಅವರಿಂದ ಉತ್ತರ ಬಯಸಿದ್ದಾರೆ. ‘ನಿರಾಯುಧ ಯೋಧರನ್ನು ಕೊಲ್ಲಲು ಚೀನಾಕ್ಕೆ ಅದೆಷ್ಟು ಧೈರ್ಯ? ಹುತಾತ್ಮರಾಗಲು ನಿರಾಯುಧ ಸೈನಿಕರನ್ನೇಕೆ ಗಡಿಗೆ ಕಳುಹಿಸಲಾಯಿತು’ ಎಂದು ಪ್ರಶ್ನಿಸಿದ್ದಾರೆ.  

ರಕ್ಷಣಾ ಸಚಿವರನ್ನೂ ತರಾಟೆಗೆ ತೆಗೆದುಕೊಂಡಿರುವ ಅವರು, ‘ಟ್ವಿಟರ್‌ನಲ್ಲಿ ಚೀನಾ ಹೆಸರನ್ನು ಉಲ್ಲೇಖಿಸದೇ ಭಾರತೀಯ ಸೇನೆಗೆ ಏಕೆ ಅಪಮಾನ ಮಾಡಿದಿರಿ? ಯೋಧರ ಸಾವಿಗೆ ಸಂತಾಪ ಸೂಚಿಸಲು ಎರಡು ದಿನ ತೆಗೆದುಕೊಂಡಿದ್ದು ಏಕೆ? ಅತ್ತ ಯೋಧರು ಹುತಾತ್ಮರಾಗುತ್ತಿರುವಾಗ ನೀವು ಚುನಾವಣಾ ಸಮಾವೇಶಗಳನ್ನು ನಡೆಸುವುದು ಎಷ್ಟು ಸರಿ’ ಎಂದು ರಾಜನಾಥ್ ಸಿಂಗ್ ಅವರನ್ನು ಪ್ರಶ್ನಿಸಿದ್ದಾರೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು