2ನೇ ವಿಶ್ವಯುದ್ಧದ ವಿಮಾನ ಅವಶೇಷ ಪತ್ತೆ

ಮಂಗಳವಾರ, ಏಪ್ರಿಲ್ 23, 2019
31 °C

2ನೇ ವಿಶ್ವಯುದ್ಧದ ವಿಮಾನ ಅವಶೇಷ ಪತ್ತೆ

Published:
Updated:

ನವದೆಹಲಿ: ಎರಡನೇ ವಿಶ್ವ ಯುದ್ಧದಲ್ಲಿ ಬಳಕೆಯಾಗಿದ್ದ ಅಮೆರಿಕದ ಯುದ್ಧ ವಿಮಾನದ ಭಗ್ನಾವಶೇಷಗಳು ಅರುಣಾಚಲ ಪ್ರದೇಶದ ರೋಯಿಂಗ್‌ ಜಿಲ್ಲಾ ವ್ಯಾಪ್ತಿಯಲ್ಲಿ ಪತ್ತೆಯಾಗಿದೆ.

ಇಲ್ಲಿನ ಹಿಮದಲ್ಲಿ ಐದು ಅಡಿಗಿಂತ ಕೆಳಭಾಗದಲ್ಲಿ ಈ ಅವಶೇಷಗಳು ಪತ್ತೆಯಾಗಿವೆ ಎಂದು ಭಾರತೀಯ ಸೇನೆ ಗುರುವಾರ ತಿಳಿಸಿದೆ. ಸೇನೆಯ 12 ಯೋಧರು ಹಾಗೂ ಒಬ್ಬ ಪೊಲೀಸ್‌ ಸಿಬ್ಬಂದಿ ಮಾರ್ಚ್‌ 30ರಂದು ಈ ಭಗ್ನಾವಶೇಷಗಳನ್ನು ಹೊರತೆಗೆದಿದ್ದರು.

ದಿಬಾಂಗ್‌ ಜಿಲ್ಲೆಯ ಸ್ಥಳೀಯ ಚಾರಣಿಗರಿಂದ ದೊರೆತ ಮಾಹಿತಿ ಆಧರಿಸಿ ಸೇನೆಯು ವಿಶೇಷ ತಂಡ ರಚಿಸಿತ್ತು.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !