ಭಾನುವಾರ, 16 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಶು ವೈದ್ಯೆ ಅತ್ಯಾಚಾರ: ಚಕ್ರವರ್ತಿ ಸೂಲಿಬೆಲೆ ವಿರುದ್ಧ ಮುಗಿಬಿದ್ದ ಟ್ವೀಟಿಗರು

Last Updated 30 ನವೆಂಬರ್ 2019, 11:40 IST
ಅಕ್ಷರ ಗಾತ್ರ

ಬೆಂಗಳೂರು: ತೆಲಂಗಾಣದ ಪಶು ವೈದ್ಯೆ ಮೇಲಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ದೇಶದಾದ್ಯಂತ ವ್ಯಾಪಕ ಖಂಡನೆ ವ್ಯಕ್ತವಾಗುತ್ತಿದ್ದು, ಸಾಮಾಜಿಕ ಜಾಲತಾಣಗಳಲ್ಲೂ ಜನರು ಬಂಧಿತ ನಾಲ್ವರು ಆರೋಪಿಗಳಿಗೆ ತಕ್ಕ ಶಾಸ್ತಿಯಾಗಬೇಕೆಂದು ಒಕ್ಕೂರಲಿನಿಂದ ಒತ್ತಾಯಿಸುತ್ತಿದ್ದಾರೆ. ಆದರೆ ಯುವ ಬ್ರಿಗೇಡ್‌ ಸಂಘಟನೆಯ ಚಕ್ರವರ್ತಿ ಸೂಲಿಬೆಲೆ ಓರ್ವ ಆರೋಪಿಯನ್ನು ಮಾತ್ರ ಗಲ್ಲಿಗೇರಿಸಿ ಎಂದಿರುವುದು ಇದೀಗ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.

ಅತ್ಯಾಚಾರ ಪ್ರಕರಣದಲ್ಲಿಯೂ ಧರ್ಮದ ಸೋಗನ್ನು ಎಳೆದು ತಂದಿರುವ ಸೂಲಿಬೆಲೆಯನ್ನು ನೆಟ್ಟಿಗರು ತರಾಟೆಗೆ ತೆಗೆದುಕೊಂಡಿದ್ದಾರೆ.

ಪಶು ವೈದ್ಯೆ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನೆನ್ನೆ ರಾತ್ರಿ ಟ್ವೀಟ್ ಮಾಡಿರುವ ಸೂಲಿಬೆಲೆ, ನನ್ನ ಹೆಸರು ಮುಹಮ್ಮದ್, ನಾನೊಬ್ಬ ಅತ್ಯಾಚಾರಿ ಎನ್ನುವ ಬರಹವುಳ್ಳ ಅರೋಪಿಗಳಲ್ಲೊಬ್ಬನ ಫೋಟೊವನ್ನು ಹಂಚಿಕೊಂಡಿದ್ದಾರೆ. #HangMohammedPasha ಮತ್ತು #HangTillDeath ಎಂಬ ಹ್ಯಾಷ್ ಟ್ಯಾಗ್‌ಗಳನ್ನು ಹಂಚಿಕೊಂಡಿದ್ದಾರೆ. ಪ್ರಕರಣದ ನಾಲ್ವರು ಆರೋಪಿಗಳ ಪೈಕಿ ಅನ್ಯ ಧರ್ಮದ ಆರೋಪಿಗೆ ಮಾತ್ರ ನೇಣಿಗೇರಿಸಿ ಎಂದಿರುವುದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.

ಇವನ ಜೊತೆ ಶಿವ, ಕೇಶವುಲು, ನವೀನ ರೇಪಿಸ್ಟ್‌ಗಳು ಇದ್ದದ್ದು ಜಗತ್ತಿಗೇ ಗೊತ್ತಿದ್ದರೂ ನಿನ್ನ ಹೊಲಸು ಮನಸ್ಸಿಗೆ ಹೇಗೆ ಗೊತ್ತಿರಲು ಸಾಧ್ಯ. ಪಾಶಾನಾ ಪಕ್ಕದಲ್ಲಿ ದೇವತಾ ಮನುಷ್ಯ ಜಡ್ಜ್ ಲೋಯಾ ಹತ್ಯೆ ಮಾಡಿಸಿದ ಶಾ ನನ್ನೂ ತೂಗು ಹಾಕೋಣವೇ? ಎಂದೊಬ್ಬರು ಸೂಲಿಬೆಲೆ ವಿರುದ್ಧ ಕಿಡಿಕಾರಿದ್ದಾರೆ.

ಮತ್ತೊಬ್ಬರು, ಇನ್ನು ಉಳಿದ ಮೂರು ಜನ ನಿನ್ನ ಸಂಬಂಧಿಕರು ಏನಪ್ಪಾ ಡೋಂಗಿ ಗೋಡ್ಸೆ ಗುಲಾಮ. ಅವರಿಗೆ ನಿನ್ನ ಗ್ಯಾಂಗ್ ಅಲ್ಲಿ ಮೋರಿ clean ಮಾಡೋಕೆ ಇಟ್ಕೊಳ್ಳೋ ಪ್ಲ್ಯಾನ್ಎಂದು ದೂರಿದ್ದಾರೆ.

ಛೇ. ಸೂಲಿಬೆಲೆ ನಿನಗೆ ಇದೆಲ್ಲಾ ಬೇಕಿತ್ತಾ ಎಂದು ಮತ್ತೊಬ್ಬ ಟ್ವಿಟರ್ ಬಳಕೆದಾರರು ಪ್ರಶ್ನಿಸಿದ್ದಾರೆ.

ಅನರ್ಹರು ಹೇಗೆ ಅನರ್ಹರೋ ಹಾಗೆ ಅತ್ಯಾಚಾರಿಗಳು ಅತ್ಯಾಚಾರಿಗಳೇ. ಅವ್ರಲ್ಲೇಕೆ ಜಾತಿ ಹುಡ್ಕೋದು ಎಂದೊಬ್ಬರು ಸೂಲಿಬೆಲೆಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಚಕ್ರವರ್ತಿ ಸೂಲಿಬೆಲೆಯ ವಿರುದ್ಧ ಛೀಮಾರಿ ಹಾಕಿರುವ ಮತ್ತಷ್ಟು ಟ್ವೀಟ್‌ಗಳು ಇಲ್ಲಿವೆ ನೋಡಿ...

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT