ಭಾರತೀಯ ಸೇನೆಯನ್ನು 'ಮೋದಿಯವರ ಸೇನೆ' ಎಂದ ಯೋಗಿ ಆದಿತ್ಯನಾಥ

ಶನಿವಾರ, ಏಪ್ರಿಲ್ 20, 2019
29 °C

ಭಾರತೀಯ ಸೇನೆಯನ್ನು 'ಮೋದಿಯವರ ಸೇನೆ' ಎಂದ ಯೋಗಿ ಆದಿತ್ಯನಾಥ

Published:
Updated:

ಗಾಜಿಯಾಬಾದ್:  ಭಾನುವಾರ ಗಾಜಿಯಾಬಾದ್‌ನಲ್ಲಿ ನಡೆದ ಚುನಾವಣಾ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು, ಕಾಂಗ್ರೆಸ್‍ನವರು ಭಯೋತ್ಪಾದಕರಿಗೆ ಬಿರಿಯಾನಿ ನೀಡಿದರು. ಆದರೆ ಮೋದಿ ಜೀ ಕೀ ಸೇನಾ (ಮೋದಿಯವರ ಸೇನೆ) ಅವರಿಗೆ ಗುಂಡು ಮತ್ತು ಬಾಂಬ್ ನೀಡಿದರು. ವ್ಯತ್ಯಾಸ ಇರುವುದು ಇಷ್ಟೇ ಎಂದಿದ್ದಾರೆ.

ಮಸೂದ್ ಅಜರ್ ಎಂಬ ಉಗ್ರನನ್ನು ಕಾಂಗ್ರೆಸ್‍ನವರು ಜೀ ಎಂದು ಸಂಬೋಧಿಸುತ್ತಾರೆ. ಆದರೆ ಮೋದಿ  ನೇತೃತ್ವದ ಬಿಜೆಪಿ ಸರ್ಕಾರ ಉಗ್ರರ ಶಿಬಿರಗಳಿಗೆ ನುಗ್ಗಿ ಅವರ ಬಗ್ಗು ಬಡಿದಿದ್ದಾರೆ.

ಕಾಂಗ್ರೆಸ್‍ಗೆ  ಸಾಧ್ಯವಲ್ಲದೇ ಇರುವುದು ಮೋದಿಯವರ ಸರ್ಕಾರಕ್ಕೆ ಸಾಧ್ಯವಾಗಿದೆ. ಮೋದಿ ಇದ್ದರೆ ಅಸಾಧ್ಯವಾದುದು ಎಲ್ಲವೂ ಸಾಧ್ಯವಾಗುತ್ತದೆ ಎಂದು ಆದಿತ್ಯನಾಥ ಹೇಳಿದ್ದಾರೆ.

ಆದಿತ್ಯನಾಥ ಹೇಳಿಕೆಗೆ ವಿಪಕ್ಷ ಆಕ್ಷೇಪ 
ಆದಿತ್ಯನಾಥ ಅವರು ಮೋದಿಯವರ ಸೇನೆ ಎಂಬ ಪದ ಬಳಕೆ ಮಾಡಿದ್ದಕ್ಕೆ  ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆಕ್ಷೇಪ ವ್ಯಕ್ತ ಪಡಿಸಿದ್ದಾರೆ. ಉತ್ತರ ಪ್ರದೇಶದ ಮುಖ್ಯಮಂತ್ರಿ ಭಾರತೀಯ ಸೇನೆಯನ್ನು ಮೋದಿ ಸೇನೆ ಎಂದು ಹೇಳಿದ್ದು ಕೇಳಿ ದಿಗಿಲುಗೊಂಡೆ. ಆ ರೀತಿ ಹೇಳುವ ಮೂಲಕ ಆದಿತ್ಯನಾಥ ಅವರು ಭಾರತೀಯ ಸೇನೆಯನ್ನು  ಅಪಮಾನ ಮತ್ತು ತೇಜೋವಧೆ ಮಾಡಿದ್ದಾರೆ ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.

ಭಾರತೀಯ ಸೇನೆಯನ್ನು ಮೋದಿ ಸೇನೆ ಎಂದು ಹೇಳಿದ್ದಕ್ಕಾಗಿ ಆದಿತ್ಯನಾಥ ಅವರು ಕ್ಷಮೆ ಕೇಳಬೇಕೆಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಚತುರ್ವೇದಿ ಒತ್ತಾಯಿಸಿದ್ದಾರೆ. ಇದು ಸಶಸ್ತ್ರ ಪಡೆಗಳಿಗೆ ಮಾಡಿದ ಅವಮಾನ. ಅವರು ಭಾರತದ  ಸಶಸ್ತ್ರ ಪಡೆಗಳು. ಪ್ರಚಾರ್ ಮಂತ್ರಿಯ ಖಾಸಗಿ ಸೇನೆ ಅಲ್ಲ. ಆದಿತ್ಯನಾಥ ಕ್ಷಮೆ ಕೇಳಬೇಕು ಎಂದು ಚತುರ್ವೇದಿ ಟ್ವೀಟ್ ಮಾಡಿದ್ದಾರೆ.

ಬರಹ ಇಷ್ಟವಾಯಿತೆ?

 • 6

  Happy
 • 0

  Amused
 • 0

  Sad
 • 0

  Frustrated
 • 19

  Angry

Comments:

0 comments

Write the first review for this !