ಶನಿವಾರ, ಸೆಪ್ಟೆಂಬರ್ 25, 2021
21 °C

ನಂ.1 ಭ್ರಷ್ಟರಾಗಿಯೇ ಜೀವ ಬಿಟ್ಟ ರಾಜೀವ್‌ ಗಾಂಧಿ: ಮೋದಿ ಮೂದಲಿಕೆ  

ಏಜನ್ಸಿಸ್‌ Updated:

ಅಕ್ಷರ ಗಾತ್ರ : | |

ನವದೆಹಲಿ: ಪಕ್ಷದ ವೇದಿಕೆಗಳಲ್ಲಿ, ಭಾಷಣಗಳಲ್ಲಿ ಗಾಂಧಿ ಕುಟುಂಬವನ್ನು ಸದಾ ಟೀಕೆಗೆ ಗುರಿಪಡಿಸುವ ನರೇಂದ್ರ ಮೋದಿ ಅವರು, ಇಂದು ಮಾಜಿ ಪ್ರಧಾನಿ, ದಿವಂಗತ ರಾಜೀವ್‌ ಗಾಂಧಿಯವರನ್ನು ನಂ.1 ಭ್ರಷ್ಟ ಎಂದರು. ‘ನಿಮ್ಮ ತಂದೆ ನಂ.1 ಭ್ರಷ್ಟರಾಗಿಯೇ ಪ್ರಾಣ ಬಿಟ್ಟರು,’ ಎಂದು ಅವರು ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿಯವರನ್ನು ಟೀಕಿಸಿದರು. 

ಉತ್ತರ ಪ್ರದೇಶದಲ್ಲಿ ಶನಿವಾರ ಚುನಾವಣಾ ಸಮಾವೇಶವೊಂದರಲ್ಲಿ ಭಾಗವಹಿಸಿದ್ದ ಅವರು, ‘ನಿಮ್ಮ ತಂದೆಯನ್ನು ಮಿ.ಕ್ಲೀನ್‌ ಎಂದು ಕರೆಯಲಾಗುತ್ತದೆ. ಆದರೆ, ನಿಮ್ಮ ತಂದೆ ಸತ್ತಿದ್ದೇ ನಂ.1 ಭ್ರಷ್ಟಾಚಾರಿಯಾಗಿ,’ ಎಂದು ಅವರು ಹೇಳಿದ್ದಾರೆ. 

ರಫೇಲ್‌ ಒಪ್ಪಂದದಲ್ಲಿ ಹಗರಣವಾಗಿದೆ ಎಂದು ರಾಹುಲ್‌ ಗಾಂಧಿ ಅವರು ನಿರಂತರವಾಗಿ ಮೋದಿ ಅವರ ವಿರುದ್ಧ ಆರೋಪಗಳನ್ನು ಮಾಡುತ್ತಿದ್ದಾರೆ. ಶನಿವಾರವಷ್ಟೇ ಸುದ್ದಿಗೋಷ್ಠಿ ನಡೆಸಿದ್ದ ರಾಹುಲ್‌ ಗಾಂಧಿ ಅವರು ‘ಚೌಕಿದಾರನೇ ಕಳ್ಳ’ ಎಂದೂ, ಈ ಘೋಷಣೆಯನ್ನು ಕಾಂಗ್ರೆಸ್‌ ಬಳಸಿಕೊಳ್ಳುವುದಾಗಿಯೂ ಹೇಳಿದ್ದರು. ಇದೇ ಹಿನ್ನೆಲೆಯಲ್ಲಿ ಇಂದು ರಾಹುಲ್‌ ವಿರುದ್ಧ ವಾಗ್ದಾಳಿ ಮಾಡಿರುವ ಮೋದಿ, ರಾಜೀವ್‌ ಗಾಂಧಿಯವರನ್ನೂ ತಮ್ಮ ಟೀಕೆಗೆ ‌ಎಳೆದುಕೊಂಡಿದ್ದಾರೆ. 

‘ನನ್ನ ಚಾರಿತ್ರ್ಯವಧೆ ಮಾಡಲು ಇವರೆಲ್ಲರೂ (ಪ್ರತಿಪಕ್ಷಗಳು) ಪ್ರಯತ್ನಿಸುತ್ತಿದ್ದಾರೆ. ನನ್ನನ್ನು ಸಣ್ಣವನಾಗಿ ಮಾಡುವ ಮೂಲಕ, ದೇಶದಲ್ಲಿ ಅಸ್ತಿರ ಸರ್ಕಾರವನ್ನು ರಚಿಸಲು ಇವರೆಲ್ಲರೂ ಹವಣಿಸುತ್ತಿದ್ಧಾರೆ ಎಂದೂ ಅವರು ಸಮಾವೇಶದಲ್ಲಿ ಕಾಂಗ್ರೆಸ್‌ ಸೇರಿದಂತೆ ಪ್ರತಿಪಕ್ಷಗಳ ವಿರುದ್ಧ ಗುಡುಗಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು