ಯುವ ಕಾಂಗ್ರೆಸ್‌ನ ಇಬ್ಬರು ಕಾರ್ಯಕರ್ತರ ಕೊಲೆ

ಶನಿವಾರ, ಮೇ 25, 2019
28 °C
ಕಾಸರಗೋಡು: ಇಂದು ಬಂದ್‌ಗೆ ಕರೆ

ಯುವ ಕಾಂಗ್ರೆಸ್‌ನ ಇಬ್ಬರು ಕಾರ್ಯಕರ್ತರ ಕೊಲೆ

Published:
Updated:

ತಿರುವನಂತಪುರ: ಕಾಸರಗೋಡು ಹೊರವಲಯದ ಪೆರಿಯ ಎಂಬಲ್ಲಿ ಇಬ್ಬರು ಯುವ ಕಾಂಗ್ರೆಸ್‌ ಕಾರ್ಯಕರ್ತರನ್ನು ಭಾನುವಾರ ರಾತ್ರಿ ಕೊಲೆ ಮಾಡಲಾಗಿದೆ.ಸಿಪಿಎಂ ಕಾರ್ಯಕರ್ತರೇ ಈ ಕೊಲೆ ಮಾಡಿದ್ದಾರೆ ಎಂದು ಆರೋಪಿಸಿರುವ ಕಾಂಗ್ರೆಸ್‌, ಫೆ. 18ರಂದು (ಸೋಮವಾರ) ಕಾಸರಗೋಡು ಜಿಲ್ಲೆ ಬಂದ್‌ಗೆ ಕರೆ ನೀಡಿದೆ.

ಕೃಪೇಶ್‌ (24) ಹಾಗೂ ಶರತ್‌ಲಾಲ್‌ (29) ಎಂಬುವರೇ ಕೊಲೆಯಾದವರು. ಕಾರೊಂದರಲ್ಲಿ ಬಂದ ಮೂವರು, ಈ ಇಬ್ಬರ ಮೇಲೆ ಹಲ್ಲೆ ಮಾಡಿದ್ದಾರೆ. ಕೃಪೇಶ್‌ ಸ್ಥಳದಲ್ಲೇ ಮೃತಪಟ್ಟರೆ, ಶರತ್‌ಲಾಲ್‌ ಮಂಗಳೂರಿನ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು ಎಂದು ಪೊಲೀಸರು ತಿಳಿಸಿದ್ದಾರೆ.

ರಾಜಕೀಯ ದ್ವೇಷವೇ ಈ ಕೃತ್ಯಕ್ಕೆ ಕಾರಣ ಎಂದು ಹೇಳಲಾಗುತ್ತಿದೆ. 

ಬರಹ ಇಷ್ಟವಾಯಿತೆ?

 • 1

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !