ಸೋಮವಾರ, ಆಗಸ್ಟ್ 26, 2019
27 °C
ಧಾರ್ಮಿಕ ಭಾವನೆಗೆ ಧಕ್ಕೆ ತಾರದಂತೆ ಎಚ್ಚರಿಕೆ

ಜೊಮ್ಯಾಟೊ ಗ್ರಾಹಕನಿಗೆ ಪೊಲೀಸರ ಎಚ್ಚರಿಕೆ

Published:
Updated:

ಜಬಲ್‌ಪುರ್, ಮಧ್ಯಪ್ರದೇಶ: ಹಿಂದೂ ಅಲ್ಲದ ಡೆಲಿವರಿ ಹುಡುಗನಿಂದ ಆಹಾರ ಪೊಟ್ಟಣ ಪಡೆಯುವುದಿಲ್ಲ ಎನ್ನುವ ಮೂಲಕ ನೆಟ್ಟಿಗರ ಆಕ್ರೋಶಕ್ಕೆ ಗುರಿಯಾಗಿದ್ದ  ಜೊಮ್ಯಾಟೊ ಗ್ರಾಹಕ ಅಮಿತ್ ಶುಕ್ಲಾಗೆ ಧರ್ಮದ ಹೆಸರಿನಲ್ಲಿ ದ್ವೇಷ ಹರಡದಂತೆ ಎಚ್ಚರಿಸಿ ಪೊಲೀಸರು ನೋಟಿಸ್ ನೀಡಿದ್ದಾರೆ. 

ಈ ಬಗ್ಗೆ ಅಮಿತ್ ಶುಕ್ಲಾನಿಂದ ಪೊಲೀಸರು ಮುಚ್ಚಳಿಕೆ ಪತ್ರವನ್ನೂ ಬರೆಸಿಕೊಂಡಿದ್ದಾರೆ. 

ಘಟನೆ ಕುರಿತು ಜೊಮ್ಯಾಟೊ ಡೆಲಿವರಿ ಹುಡುಗ ಫಯಾಜ್, ‘ಮನಸಿಗೆ ನೋವಾಯಿತು. ಆದರೆ, ಏನು ಮಾಡು ವುದು?’ ಎಂದು ಪ್ರತಿಕ್ರಿಯಿಸಿದ್ದಾರೆ.

Post Comments (+)