ಆಗಸ್ಟ್‌ನೊಳಗೆ ಪ್ರಯಾಣಿಕರ ರೈಲಿಗೆ ಆಗ್ರಹ

7

ಆಗಸ್ಟ್‌ನೊಳಗೆ ಪ್ರಯಾಣಿಕರ ರೈಲಿಗೆ ಆಗ್ರಹ

Published:
Updated:
ಹೊಸಪೇಟೆ–ಕೊಟ್ಟೂರು ನಡುವೆ ಪ್ರಯಾಣಿಕರ ರೈಲು ಓಡಿಸುವಂತೆ ಆಗ್ರಹಿಸಿ ವಿಜಯನಗರ ರೈಲ್ವೆ ಕ್ರಿಯಾ ಅಭಿವೃದ್ಧಿ ಸಮಿತಿ ಪದಾಧಿಕಾರಿಗಳು ಭಾನುವಾರ ನಿಲ್ದಾಣದ ಮುಖ್ಯಸ್ಥ ಮೊಹಮ್ಮದ್‌ ಉಮರ್‌ ಬಾನಿ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ಹೊಸಪೇಟೆ: ನಗರ ಹಾಗೂ ಕೊಟ್ಟೂರು ನಡುವೆ ಆಗಸ್ಟ್‌ ಅಂತ್ಯದೊಳಗೆ ಪ್ರಯಾಣಿಕರ ರೈಲು ಓಡಿಸಬೇಕೆಂದು ವಿಜಯನಗರ ರೈಲ್ವೆ ಅಭಿವೃದ್ಧಿ ಕ್ರಿಯಾ ಸಮಿತಿ ಆಗ್ರಹಿಸಿದೆ.

ಸಮಿತಿಯ ಸದಸ್ಯರು ಭಾನುವಾರ  ಇಲ್ಲಿನ ರೈಲು ನಿಲ್ದಾಣದ ಮುಖ್ಯಸ್ಥ ಮೊಹಮ್ಮದ್‌ ಉಮರ್‌ ಬಾನಿ ಅವರಿಗೆ ಸಲ್ಲಿಸಿರುವ ಮನವಿ ಪತ್ರಸಲ್ಲಿ ಒತ್ತಾಯಿಸಿದರು.

‘ಬ್ರಾಡ್‌ಗೇಜ್‌ ರೈಲು ಮಾರ್ಗದ ಕಾಮಗಾರಿ ಶೇ 99ರಷ್ಟು ಪೂರ್ಣಗೊಂಡಿದೆ. ರೈಲ್ವೆ ಸುಕ್ಷತಾ ಆಯುಕ್ತರು ಮಾರ್ಗ ಪರಿಶೀಲಿಸಿ ಪ್ರಯಾಣಿಕರ ರೈಲು ಓಡಾಟಕ್ಕೆ ಅನುಮತಿ ನೀಡಬೇಕು. ಇದರಿಂದ ಈ ಭಾಗದ ಲಕ್ಷಾಂತರ ಜನರಿಗೆ ಪ್ರಯೋಜನವಾಗಲಿದೆ’ ಎಂದು ಮನವಿಯಲ್ಲಿ ವಿವರಿಸಿದರು.

‘ಹುಬ್ಬಳ್ಳಿ–ಬೆಂಗಳೂರು, ಬೆಂಗಳೂರು–ಹುಬ್ಬಳ್ಳಿ ನಡುವೆ ನಿತ್ಯ ಸಂಚರಿಸುವ ‘ಹಂಪಿ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಕನಿಷ್ಠ ಒಂದು ತಿಂಗಳು ಮುಂಚೆ ಟಿಕೆಟ್‌ ಕಾಯ್ದರಿಸಬೇಕು. ಪ್ರಯಾಣಿಕರ ಓಡಾಟ ಹೆಚ್ಚಿರುವುದರಿಂದ ಜನಶತಾಬ್ದಿ ಅಥವಾ ಇಂಟರ್‌ಸಿಟಿ ರೈಲನ್ನು ಹೆಚ್ಚುವರಿಯಾಗಿ ಓಡಿಸಬೇಕು’ ಎಂದು ಒತ್ತಾಯಿಸಿದರು.

ಸಮಿತಿ ಅಧ್ಯಕ್ಷ ವೈ. ಯಮುನೇಶ್‌, ವಿಭಾಗೀಯ ರೈಲ್ವೆ ಸಲಹಾ ಸಮಿತಿ ಸದಸ್ಯ ಚಂದ್ರಕಾಂತ ಕಾಮತ್, ಸಮಿತಿ ಸದಸ್ಯರಾದ ಎಚ್‌. ಮಹೇಶ್‌, ರವಿಶಂಕರ ದೇವರಮನೆ, ಇ. ಪ್ರಸಾದ್‌, ವೈ. ಶೇಖರ್‌, ಸಿದ್ದೇಶ್‌ ಉತ್ತಂಗಿ, ಪೀರನ್‌ ಸಾಬ್‌, ಕೆ. ರಾಘವೇಂದ್ರ, ತಿಮ್ಮಾರೆಡ್ಡಿ, ಟಿ.ಆರ್‌. ತಿಪ್ಪೇಸ್ವಾಮಿ, ಡಿ. ರಾಮಕೃಷ್ಣ, ಪಿ. ಪ್ರಭಾಕರ್‌ ಮನವಿಗೆ ಸಹಿ ಹಾಕಿದ್ದಾರೆ.

ಬರಹ ಇಷ್ಟವಾಯಿತೆ?

 • 6

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !