ಮಂಗಳೂರು: ಪಣಂಬೂರಿನ ಕೇಂದ್ರೀಯ ವಿದ್ಯಾಲಯದ ವಿದ್ಯಾರ್ಥಿನಿ ರಶ್ಮಿ ಕಾಸಂಗೇರಿ ಅವರು ಜಾಯಿಂಟ್ ಎಂಟ್ರೆನ್ಸ್ ಪರೀಕ್ಷೆಯಲ್ಲಿ (ಜೆಇಇ ಅಡ್ವಾನ್ಸ್ಡ್) ಪರಿಶಿಷ್ಟ ಪಂಗಡದ ವಿಭಾಗದಲ್ಲಿ 108 ಅಂಕಗಳನ್ನು ಗಳಿಸಿದ್ದು 149ನೇ ರ‍್ಯಾಂಕ್ ಪಡೆದಿದ್ದಾರೆ. ಜೆಇಇ ಮೇನ್‌ನಲ್ಲಿ 48ನೇ ರ‍್ಯಾಂಕ್ ಪಡೆದಿದ್ದರು.

ಎನ್‌ಟಿಎಸ್‌ಇ ಮತ್ತು ಕಿಶೋರ್ ವೈಜ್ಞಾನಿಕ್ ಪ್ರೋತ್ಸಾಹ ಯೋಜನೆಯ ಶಿಷ್ಯವೇತನ ಪಡೆಯುತ್ತಿರುವ ರಶ್ಮಿ ಅವರಿಗೆ ವೈದ್ಯೆಯಾಗುವ ಕನಸಿದೆ. ನೀಟ್ ಪರೀಕ್ಷೆಯಲ್ಲಿ ಎಸ್‌ಟಿ ವಿಭಾಗದಲ್ಲಿ 11ನೇ ರ‍್ಯಾಂಕ್ ಬಂದಿರುವುದರಿಂದ ಬೆಂಗಳೂರು ಮೆಡಿಕಲ್ ಕಾಲೇಜಿನಲ್ಲಿ ವೈದ್ಯಕೀಯ ಸೀಟು ಸಿಗಬಹುದು ಎಂಬ ನಿರೀಕ್ಷೆ ಇದೆ ಎಂದು ಹೇಳಿದ್ದಾರೆ. ಜೆಐಪಿಎಂಇಆರ್ ಪ್ರವೇಶ ಪರೀಕ್ಷೆಯಲ್ಲಿ ಎಸ್‌ಟಿ ವಿಭಾಗದಲ್ಲಿ ಅವರಿಗೆ 27ನೇ ರ‍್ಯಾಂಕ್ ಬಂದಿದೆ.

ರಶ್ಮಿ ಅವರ ಅಣ್ಣ ರಾಕೇಶ್ 2014ರಲ್ಲಿ ಜೆಇಇ ಪರೀಕ್ಷೆಯಲ್ಲಿ 49ನೇ ರ‍್ಯಾಂಕ್ ಪಡೆದಿದ್ದು, ಚೆನ್ನೈ ಐಐಟಿಯಲ್ಲಿ ಓದುತ್ತಿದ್ದಾರೆ. ಅಕ್ಕ ರಂಜನಾ 2017ರಲ್ಲಿ 14ನೇ ರ‍್ಯಾಂಕ್ ಪಡೆದಿದ್ದು ಮುಂಬೈ ಐಐಟಿಯಲ್ಲಿ ಓದುತ್ತಿದ್ದಾರೆ. ಮೂವರೂ ಪಣಂಬೂರು ಕೇಂದ್ರೀಯ ವಿದ್ಯಾಲಯದಲ್ಲಿ ಓದಿದವರು.

ತಂದೆ ಬಸಪ್ಪ ಮೂಲತಃ ರಾಯಚೂರು ಜಿಲ್ಲೆಯವರಾಗಿದ್ದು ಕೆಐಒಸಿಎಲ್‌ನಲ್ಲಿ ಉದ್ಯೋಗಕ್ಕಾಗಿ ಮಂಗಳೂರಿಗೆ ಬಂದಿದ್ದರು. ತಾಯಿ ಜಯಶ್ರೀ ಮಕ್ಕಳ ಓದಿಗೆ ಒತ್ತಾಸೆಯಾದವರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.