ಶನಿವಾರ, ಜೂಲೈ 4, 2020
24 °C
,

30 ಜನರಿಗೆ ಬಯಲಾಟ ಅಕಾಡೆಮಿ ಪ್ರಶಸ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಾಗಲಕೋಟೆ: ಕರ್ನಾಟಕ ಬಯಲಾಟ ಅಕಾಡೆಮಿಯು, 2017 ಮತ್ತು 2018ನೇ ಸಾಲಿನ ಗೌರವ ಪ್ರಶಸ್ತಿ ಹಾಗೂ ವಾರ್ಷಿಕ ಪ್ರಶಸ್ತಿ ಪ್ರಕಟಿಸಿದೆ.

ಅಕಾಡೆಮಿ ಸ್ಥಾಪನೆಯಾದ ಬಳಿಕ ಮೊದಲ ಬಾರಿಗೆ ಪ್ರಶಸ್ತಿ ಘೋಷಿಸಲಾಗಿದ್ದು, ಬಯಲಾಟದಲ್ಲಿ ಸಾಧನೆ ಮಾಡಿದ 30 ಕಲಾವಿದರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಎರಡೂ ಸಾಲಿನಲ್ಲಿ ತಲಾ ಐವರು ಗೌರವ ಪ್ರಶಸ್ತಿಗೆ ಹಾಗೂ ತಲಾ 10 ಕಲಾವಿದರು ವಾರ್ಷಿಕ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಗೌರವ ಪ್ರಶಸ್ತಿಯು ₹ 50 ಸಾವಿರ ನಗದು ಹಾಗೂ ವಾರ್ಷಿಕ ಪ್ರಶಸ್ತಿಯು ₹ 25 ಸಾವಿರ ನಗದು ಒಳಗೊಂಡಿದೆ. ಜನವರಿಯಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಅಕಾಡೆಮಿಯ ಅಧ್ಯಕ್ಷ ಶ್ರೀರಾಮ ಇಟ್ಟಣ್ಣವರ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಪ್ರಶಸ್ತಿ ಪುರಸ್ಕೃತರು

2017ನೇ ಸಾಲಿನ ‘ಗೌರವ ಪ್ರಶಸ್ತಿ’: ಬೆಳಗಾವಿಯ ಸಂತ್ರಾಮ ಸಿದ್ರಾಮ ಬಡಿಗೇರ (ಶ್ರೀಕೃಷ್ಣ ಪಾರಿಜಾತ), ಬಾಗಲಕೋಟೆಯ ಶಿವಪ್ಪ ಕಾಡಪ್ಪನವರ (ಸಣ್ಣಾಟ), ಚಿಕ್ಕಬಳ್ಳಾಪುರದ ಶಂಕರಪ್ಪ (ಸೂತ್ರದಗೊಂಬೆಯಾಟ), ಮಂಡ್ಯದ ಕೋಣನೂರು ನಾಗರಾಜ (ತೊಗಲುಗೊಂಬೆಯಾಟ), ಬಳ್ಳಾರಿ ರಂಗಾರೆಡ್ಡಿ.ವೈ (ದೊಡ್ಡಾಟ).

‘ವಾರ್ಷಿಕ ಪ್ರಶಸ್ತಿ’: ಬೆಳಗಾವಿಯ ಪಾರವ್ವ ತಳಗೇರಿ (ಶ್ರೀಕೃಷ್ಣ ಪಾರಿಜಾತ), ಬಾಗಲಕೋಟೆಯ ಚಂದ್ರವ್ವ ಗುಡ್ಲಮನಿ (ಶ್ರೀಕೃಷ್ಣ ಪಾರಿಜಾತ), ಬೆಳಗಾವಿಯ ಬಸಪ್ಪ ಕಲ್ಲಪ್ಪ ಕುಂಬಾರ (ಶ್ರೀಕೃಷ್ಣ ಪಾರಿಜಾತ), ಬೆಳಗಾವಿಯ ಬಸವರಾಜ ಖೇಮಲಾಪೂರ (ಸಣ್ಣಾಟ), ಬಾಗಲಕೋಟೆಯ ಕಲ್ಲಪ್ಪ ತೇಲಿ (ಸಣ್ಣಾಟ), ಹಾಸನ ಎಸ್.ನಾಗರಾಜ (ತೊಗಲುಗೊಂಬೆಯಾಟ), ಚಿಕ್ಕಮಗಳೂರಿನ ರಮೇಶ ಎಚ್.ಬಿ (ದೊಡ್ಡಾಟ), ದಾವಣಗೆರೆಯ ರೇವಣ್ಣ ಎಚ್.ಆರ್ (ದೊಡ್ಡಾಟ), ಧಾರವಾಡದ ತಿಮ್ಮರೆಡ್ಡಿ ಭೀಮರೆಡ್ಡಿ ಮೇಟಿ (ದೊಡ್ಡಾಟ) ಕಲಬುರ್ಗಿಯ ರಾಮಲಿಂಗ ಪೇಟಿ (ದೊಡ್ಡಾಟ).

2018ನೇ ಸಾಲಿನ ‘ಗೌರವ ಪ್ರಶಸ್ತಿ’: ವಿಜಯಪುರದ ಗುರುಪಾದಯ್ಯ ಧಾರವಾಡಮಠ (ಶ್ರೀಕೃಷ್ಣ ಪಾರಿಜಾತ), ಶಿವಮೊಗ್ಗ ಪರಿಸರ ಶಿವರಾಂ (ಸಣ್ಣಾಟ), ಬೆಳಗಾವಿ ಕೆಂಪವ್ವ ಹರಿಜನ (ಸಣ್ಣಾಟ), ಚಿತ್ರದುರ್ಗ ಬಿ.ಮಾರಣ್ಣ (ದೊಡ್ಡಾಟ), ಗದಗ ಚನ್ನಬಸವಯ್ಯ ಕಾಡಸಿದ್ಧೇಶ್ವರಮಠ (ದೊಡ್ಡಾಟ).

‘ವಾರ್ಷಿಕ ಪ್ರಶಸ್ತಿ’: ವಿಜಯಪುರದ ಶ್ರೀಶೈಲ ಹನಮಂತ ಬಳೂತಿ (ಶ್ರೀಕೃಷ್ಣ ಪಾರಿಜಾತ), ಬಾಗಲಕೋಟೆ ಸಿದ್ದಪ್ಪ ಕುರಿ (ಶ್ರೀಕೃಷ್ಣ ಪಾರಿಜಾತ), ಬೆಳಗಾವಿಯ ದಸ್ತಗೀರ್‌ಸಾಬ್‌ ಮೌಲಾಶೇಖ್ (ಶ್ರೀಕೃಷ್ಣ ಪಾರಿಜಾತ), ವಿಜಯಪುರದ ಶಾಂತಪ್ಪ ಎಂ. ಕೋಟಿ (ಸಣ್ಣಾಟ), ಬೀದರ್‌ನ ಮಹಾದೇವಮ್ಮ (ಸಣ್ಣಾಟ), ರಾಮನಗರದ ಲಕ್ಷ್ಮಮ್ಮ (ತೊಗಲು ಗೊಂಬೆಯಾಟ), ಹಾವೇರಿಯ ಶಂಕರ ಅರ್ಕಸಾಲಿ (ದೊಡ್ಡಾಟ), ಕೊಪ್ಪಳದ ಶಂಕರಪ್ಪ ಕೊಪ್ಪಳ (ದೊಡ್ಡಾಟ), ರಾಯಚೂರು ಸಣ್ಣಬಾಬು (ದೊಡ್ಡಾಟ), ಯಾದಗಿರಿಯ ಬಸವನಗೌಡ ಮಾಸ್ತರ ತಳವಾರಗೇರಿ (ದೊಡ್ಡಾಟ).

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು