ಕೊಪ್ಪಳ ತಾಲ್ಲೂಕು ಮೆತಗಲ್ ಗ್ರಾಮದಲ್ಲಿ ಒಂದೇ ಕುಟುಂಬ 6 ಜನ ಆತ್ಮಹತ್ಯೆ 

7

ಕೊಪ್ಪಳ ತಾಲ್ಲೂಕು ಮೆತಗಲ್ ಗ್ರಾಮದಲ್ಲಿ ಒಂದೇ ಕುಟುಂಬ 6 ಜನ ಆತ್ಮಹತ್ಯೆ 

Published:
Updated:

ಕೊಪ್ಪಳ: ಒಂದೇ ಕುಟುಂಬ 6 ಜನ ಆತ್ಮಹತ್ಯೆ ಮಾಡಿಕೊಂಡ ಧಾರುಣ ಘಟನೆ ತಾಲ್ಲೂಕಿನ ಮೆತಗಲ್ ಗ್ರಾಮದಲ್ಲಿ ನಡೆದಿದೆ.

ಪತ್ನಿ ಮತ್ತು ನಾಲ್ವರು ಮಕ್ಕಳಿಗೆ ವಿಷ ಕುಡಿಸಿದ ಶೇಖರಯ್ಯ ನೇಣಿಗೆ ಶರಣಾಗಿದ್ದಾರೆ.

ಶೇಖರಯ್ಯ ಬೀಡನಾಳ (42), ಪತ್ನಿ ಜಯಮ್ಮ (39) ಮಕ್ಕಳಾದ ಬಸಮ್ಮ(23), ಗೌರಮ್ಮ(20), ಸಾವಿತ್ರಿ(18), ಪಾರ್ವತಿ(16) ಮೃತಪಟ್ಟವರು.


ದಂಪತಿ ಶೇಖರಯ್ಯ ಬೀಡನಾಳ, ಪತ್ನಿ ಜಯಶ್ರೀ, ಕೊನೆ ಮಗಳು ಸಾವಿತ್ರಿ

ಪತ್ನಿ ಮತ್ತು ಮಕ್ಕಳಿಗೆ ವಿಷ ಉಣಿಸಿರುವ, ಶೇಖರಯ್ಯ ತಾನು ನೇಣಿಗೆ ಶರಣಾಗಿದ್ದಾರೆ. ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ.

ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಶವಗಳನ್ನು ಜಿಲ್ಲಾ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೇಣುಕಾ ಸುಕುಮಾರ, ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ ಸ್ಥಳಕ್ಕೆ ಭೇಟಿ ನೀಡಿದ್ದಾರೆ.

ಕೃಷಿ ಸಚಿವ ಶಿವಶಂಕರ ರೆಡ್ಡಿ, ಶಾಸಕ ಪರಣ್ಣ ಮುನವಳ್ಳಿ ಮನೆಗೆ ಭೇಟಿ ನೀಡಿ ಸಂಬಂಧಿಕರಿಗೆ ಸಾಂತ್ವಾನ ಹೇಳಿದರು.

ಗವಿಮಠದ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ಆಸ್ಪತ್ರಗೆ ಭೇಟಿ, ಸಾಂತ್ವಾನ ಹೇಳಿದರು.


ಮೃತರ ಸಂಬಂಧಿಗಳ ರೋದನ

ಇದೊಂದು ಧಾರುಣ ಘಟನೆ: ಸಚಿವ

ಕೃಷಿ ಸಚಿವ ಶಿವಶಂಕರೆಡ್ಡಿ ಭೇಟಿ‌ ನೀಡಿ, ಇದೊಂದು ಧಾರುಣ ಘಟನೆ, ಒಂದೇ ಮನೆಯಲ್ಲಿ ಈ ರೀತಿ ಆಗಬಾರದಿತ್ತು. ಸರಕಾರದಿಂದ ಪರಿಹಾರ ಒದಗಿಸಲಾಗುವುದು. ಮೇಲ್ನೋಟಕ್ಕೆ ಸಾಲದ ಹೊರೆ ತಾಳಲಾರದೆ ಹಾಗೂ ಬದುಕು ಸಾಗಿಸಲು ಸಾಧ್ಯವಿಲ್ಲ ಎಂದರಿತು ಸಾವನ್ನಪ್ಪಿರಬಹುದು. ತನಿಖೆಯಿಂದ ನಿಖರ ಕಾರಣ ತಿಳಿಯುತ್ತದೆ ಎಂದರು.

ಬರಹ ಇಷ್ಟವಾಯಿತೆ?

 • 5

  Happy
 • 1

  Amused
 • 7

  Sad
 • 0

  Frustrated
 • 1

  Angry

Comments:

0 comments

Write the first review for this !