ವಿಮಾನದ ಶೌಚಾಲಯದಲ್ಲಿ 6.65 ಕೆ.ಜಿ ಚಿನ್ನ!

7

ವಿಮಾನದ ಶೌಚಾಲಯದಲ್ಲಿ 6.65 ಕೆ.ಜಿ ಚಿನ್ನ!

Published:
Updated:
Deccan Herald

ಬೆಂಗಳೂರು: ನಗರದ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮಸ್ಕತ್‌ನಿಂದ ಬಂದಿಳಿದ ಜೆಟ್ ಏರ್‌ವೆಸ್ ವಿಮಾನದ ಶೌಚಾಲಯದಲ್ಲಿ 6.65 ಕೆ.ಜಿ ಚಿನ್ನ ಪತ್ತೆಯಾಗಿದ್ದು, ಅದನ್ನು ಕಸ್ಟಮ್ಸ್‌ ಅಧಿಕಾರಿಗಳು ಸು‍ಪರ್ದಿಗೆ ಪಡೆದುಕೊಂಡಿದ್ದಾರೆ.

‘ಯಾರೋ ಪ್ರಯಾಣಿಕರು, ಚಿನ್ನವನ್ನು ಹೊರಗೆ ತೆಗೆದುಕೊಂಡು ಹೋಗಲಾಗದೆ ಶೌಚಾಲಯದಲ್ಲೇ ಅಡಗಿಸಿಟ್ಟು ಇಳಿದು ಹೋಗಿದ್ದಾರೆ. ಅವರು ಯಾರು ಎಂಬುದನ್ನು ತಿಳಿದುಕೊಳ್ಳಲಾಗುತ್ತಿದೆ’ ಎಂದು ಮೂಲಗಳು ತಿಳಿಸಿವೆ.

‘ಶೌಚಾಲಯದ ಪ್ಯಾನಲ್‌ಗಳನ್ನು ತೆಗೆದಿರುವ ಆರೋಪಿ, ಅದರೊಳಗೆ ಚಿನ್ನವನ್ನು ಅಡಗಿಸಿಟ್ಟಿದ್ದಾರೆ. ಅಕ್ರಮ ಚಿನ್ನ ಸಾಗಣೆ ಮಾಡುವ ಬಗ್ಗೆ ಬಂದಿದ್ದ ಮಾಹಿತಿ ಆಧರಿಸಿ ಪ್ರತಿಯೊಂದು ವಿಮಾನದಲ್ಲೂ ಪರಿಶೀಲನೆ ನಡೆಸಲಾಗುತ್ತಿತ್ತು. ಅದೇ ವೇಳೆಯೇ ಚಿನ್ನ ಸಿಕ್ಕಿತು’ ಎಂದು ಮೂಲಗಳು ಹೇಳಿವೆ.

ಒಳ ಉಡುಪಿನಲ್ಲಿ ಚಿನ್ನ: ಚಿನ್ನದ ಪುಡಿಯನ್ನು ಒಳ ಉಡುಪುಗಳಿಗೆ ಅಂಟಿಸಿ ಸಾಗಣೆ ಮಾಡುತ್ತಿದ್ದ ಶಕೀನಾ ಶೇಖ್ (36) ಎಂಬುವರನ್ನು ವಶಕ್ಕೆ ಪಡೆದಿರುವ ಕಸ್ಟಮ್ಸ್‌ ಅಧಿಕಾರಿಗಳು, ₹26.20 ಲಕ್ಷ ಮೌಲ್ಯದ ಚಿನ್ನ ಜಪ್ತಿ ಮಾಡಿದ್ದಾರೆ.

ಮುಂಬೈನ ಶಕೀನಾ, ಏರ್‌ ಅರೇಬಿಯಾ ವಿಮಾನದಲ್ಲಿ ನಗರದ ನಿಲ್ದಾಣಕ್ಕೆ ಬಂದಿಳಿದಿದ್ದರು. ಲೋಹ ಶೋಧಕದ ಮೂಲಕ ಪರಿಶೀಲನೆ ನಡೆಸಿದಾಗ ಸಿಕ್ಕಿಬಿದ್ದಿದ್ದಾರೆ.

Tags: 

ಬರಹ ಇಷ್ಟವಾಯಿತೆ?

 • 2

  Happy
 • 1

  Amused
 • 2

  Sad
 • 0

  Frustrated
 • 0

  Angry

Comments:

0 comments

Write the first review for this !