ಸೋಮವಾರ, ಜುಲೈ 26, 2021
22 °C

ಪ್ರಹ್ಲಾದ್‌ ವಿರುದ್ಧ ಎಸಿಬಿಗೆ ದೂರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬಿಬಿಎಂಪಿ ಅಧಿಕಾರಿ ಬಿ.ಎಸ್. ಪ್ರಹ್ಲಾದ್‌ ವಿರುದ್ಧ ಬೆಂಗಳೂರು ನಾಗರಿಕ ಹಕ್ಕು ಹೋರಾಟ ಸಮಿತಿಯ ಉಪಾಧ್ಯಕ್ಷ ಬಿ. ಗಣೇಶ್‌ ಸಿಂಗ್‌ ಎಂಬುವರು ಭ್ರಷ್ಟಾಚಾರ ನಿಗ್ರಹ ದಳಕ್ಕೆ ದೂರು ನೀಡಿದ್ದಾರೆ. 

‘ಬಿ.ಎಸ್. ಪ್ರಹ್ಲಾದ್‌ ಅವರು ಈಗಾಗಲೇ ಹಲವು ಭ್ರಷ್ಟಾಚಾರ ಪ್ರಕರಣಗಳ ಅಡಿ ವಿಚಾರಣೆ ಎದುರಿಸುತ್ತಿದ್ದಾರೆ. ಆದರೆ, ಅವರಿಗೆ ನಿಯಮ ಬಾಹಿರವಾಗಿ ಮುಖ್ಯ ಎಂಜಿನಿಯರ್‌ ಸ್ಥಾನಕ್ಕೆ ಬಡ್ತಿ ನೀಡಿರುವುದಲ್ಲದೇ, ಪಾಲಿಕೆಯ ರಸ್ತೆಗಳ ಮೂಲಸೌಕರ್ಯ ವಿಭಾಗದ ಹೊಣೆ ನೀಡಿರುವುದು ಸರಿಯಲ್ಲ’ ಎಂದು ಅವರು ದೂರಿನಲ್ಲಿ ಹೇಳಿದ್ದಾರೆ. 

‘ಸ್ಥಳೀಯ ರಾಜಕೀಯ ನಾಯಕರೊಬ್ಬರು ನನ್ನ ವಿರುದ್ಧ ಎಸಿಬಿಗೆ ಸುಳ್ಳು ದೂರು ನೀಡಿದ್ದರು. ಅದರ ಬಗ್ಗೆ ಈಗಾಗಲೆ ತನಿಖೆ ನಡೆಯುತ್ತಿರುವುದರಿಂದ ಬೇರೆ ತನಿಖೆ ಅಗತ್ಯವಿಲ್ಲ ಎಂದು ನಗರಾಭಿವೃದ್ಧಿ ಇಲಾಖೆ ಹೇಳಿತ್ತು. ಹಾಗಾಗಿ ಮತ್ತೆ ಬೇರೊಬ್ಬರ ಹೆಸರಿನಲ್ಲಿ ದೂರು ನೀಡಿದ್ದಾರೆ. ಅವರಿಗೆ ಅಧಿಕಾರಿಗಳಿಗೆ ಕಿರಿಕಿರಿ ನೀಡುವುದು ಚಾಳಿ ಆಗಿ ಬಿಟ್ಟಿದೆ’ ಎಂದು ಪ್ರಹ್ಲಾದ್ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು