ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಭ್ರಷ್ಟರನ್ನು ರಕ್ಷಿಸುತ್ತಿರುವ ಲೋಕಾಯುಕ್ತ!‘

ಭರವಸೆಗಳ ಸಮಿತಿ ವರದಿಯಲ್ಲಿ ಉಲ್ಲೇಖ
Last Updated 3 ಜುಲೈ 2018, 20:07 IST
ಅಕ್ಷರ ಗಾತ್ರ

ಬೆಂಗಳೂರು: ‘ಭ್ರಷ್ಟಾಚಾರ‍ಪ್ರಕರಣಗಳ ತನಿಖೆಯನ್ನು ಅನಗತ್ಯವಾಗಿ ವಿಳಂಬ ಮಾಡುವ ಮೂಲಕಲೋಕಾಯುಕ್ತ ಸಂಸ್ಥೆಯು ಭ್ರಷ್ಟರಿಗೆ ರಕ್ಷಣೆ ನೀಡುತ್ತಿದೆ!’

ಲೋಕಾಯುಕ್ತ ಸಂಸ್ಥೆ ಕಾರ್ಯವೈಖರಿ ಬಗ್ಗೆಅಸಮಾಧಾನ ವ್ಯಕ್ತಪಡಿಸಿರುವ ಬಸವರಾಜ ಹೊರಟ್ಟಿ ನೇತೃತ್ವದ 2016–17ನೇ ಸಾಲಿನ ಸರ್ಕಾರದ ಭರವಸೆಗಳ ಸಮಿತಿಯ 46ನೇ ವರದಿಯಲ್ಲಿ, ‘ವಿವಿಧ ಇಲಾಖೆಗಳ ಭ್ರಷ್ಟಾಚಾರ ಪ್ರಕರಣಗಳನ್ನು ಲೋಕಾಯುಕ್ತ ತನಿಖೆಗೆ ಒಪ್ಪಿಸುತ್ತಿರುವುದೇ ಅಧಿಕಾರಿ, ನೌಕರರಿಗೆ ಒಂದು ರೀತಿ ವರದಾನವಾಗಿದೆ’ ಎಂದೂ ಕಟುವಾಗಿ ಹೇಳಿದೆ.

ಕೆ.ಸಿ. ಕೊಂಡಯ್ಯ, ಬಸವರಾಜಪಾಟೀಲ ಇಟಗಿ, ಕೆ.ಟಿ. ಶ್ರೀಕಂಠೇಗೌಡ, ಭಾನುಪ್ರಕಾಶ್‌, ರಘುನಾಥ ಮಲ್ಕಾಪುರೆ, ಶರಣಪ್ಪ ಮಟ್ಟೂರು, ಟಿ.ಎ. ಶರ
ವಣ ಹಾಗೂ ಭೈರತಿ ಸುರೇಶ್‌ ಅವರು ಸದಸ್ಯರಾಗಿದ್ದ ಭರವಸೆಗಳ ಸಮಿತಿಯು ಫೆಬ್ರುವರಿ ಕೊನೆಯ ವಾರ ಸಲ್ಲಿಸಿದ ವರದಿಯಲ್ಲಿ ಲೋಕಾಯುಕ್ತ ಸಂಸ್ಥೆ ಕಾರ್ಯವೈಖರಿ ಕುರಿತು ತೀಕ್ಷ್ಣವಾಗಿ ಟೀಕಿಸಿದೆ.

15–20 ವರ್ಷಗಳ ಹಿಂದೆ ದಾಖಲಿಸಿದ ಎಷ್ಟೋ ಪ್ರಕರಣಗಳ ತನಿಖೆ ಪೂರ್ಣಗೊಳ್ಳದೆ ಬಾಕಿ ಉಳಿದಿವೆ. ಉದಾಹರಣೆಗೆ, ‘ಉಡುಪಿ ನಗರಸಭೆ
ಯಲ್ಲಿ ಕನಿಷ್ಠ ಟೆಂಡರ್‌ ಹೆಸರಿನಲ್ಲಿ ಮಾರುಕಟ್ಟೆಗಿಂತಲೂ ಐದಾರು ಪಟ್ಟು ಹೆಚ್ಚು ದರ ನೀಡಿ ಸರಕು ಖರೀದಿಸಿದ ಪ್ರಕರಣವನ್ನು ಉಲ್ಲೇಖಿಸಲಾಗಿದೆ.

ಕೆಲವೊಂದು ಪ್ರಕರಣಗಳಲ್ಲಿ, ಪ್ರಾಥಮಿಕ ತನಿಖೆಯಲ್ಲೇ ಆರೋಪ ಸಾಬೀತಾಗಿದ್ದರೂ ಲೋಕಾಯುಕ್ತ ನ್ಯಾಯಾಲಯಕ್ಕೆ ಸರಿಯಾದ ಸಮಯಕ್ಕೆ ಸೂಕ್ತ ಮಾಹಿತಿ ಮತ್ತು ದಾಖಲೆಗಳನ್ನು ಕೊಡದೆ ಸಂಬಂಧಪಟ್ಟ ಇಲಾಖೆಗಳು ವಿಳಂಬ ಮಾಡುತ್ತಿವೆ. ಇನ್ನೂ ಅನೇಕ ಪ್ರಕರಣಗಳಲ್ಲಿ ಆರೋಪಿಗಳು ಪಡೆದಿರುವ ತಡೆಯಾಜ್ಞೆ ತೆರವು ಮಾಡಿಸಲು ಕ್ರಮ ಕೈಗೊಂಡಿರುವುದಿಲ್ಲ. ಹೀಗಾಗಿ,ಭ್ರಷ್ಟಾಚಾರ ಪ್ರಕರಣಗಳು ಬಿದ್ದುಹೋಗುತ್ತಿವೆ ಎಂದು ಸಮಿತಿ ಅತೃಪ್ತಿ ವ್ಯಕ್ತಪಡಿಸಿವೆ.

ರಾಜ್ಯದಲ್ಲಿ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ ಲೋಕಾಯುಕ್ತ ಸಂಸ್ಥೆ ಸ್ಥಾಪಿಸಲಾಗಿದೆ. ಸಂಸ್ಥೆಯೇ ಆರೋಪಿಗಳನ್ನು ರಕ್ಷಣೆ ಮಾಡುತ್ತಿರುವುದರಿಂದ ಅದರ ಸ್ಥಾಪನೆ ಉದ್ದೇಶವೇ ವಿಫಲವಾದಂತಾಗಿದೆ ಎಂದು ಸಮಿತಿ ಕಳವಳ ವ್ಯಕ್ತಪಡಿಸಿದೆ. ಇದಕ್ಕೆ ಪೂರಕವಾಗಿ, ನಂಜನಗೂಡಿನಲ್ಲಿ ಕಟ್ಟಿರುವ ಮಿನಿ ವಿಧಾನಸೌಧದ ಕಳ‍ಪೆ ಕಾಮಗಾರಿ ಪ್ರಕರಣದ ತನಿಖೆ ಹೇಗೆ ನಡೆದಿದೆ. ಈ ಪ್ರಕರಣದಲ್ಲಿ ಹೇಗೆ ‘ಬಿ’ ರಿಪೋರ್ಟ್‌ ಹಾಕಲಾಗಿದೆ ಎಂಬುದನ್ನು ವರದಿಯಲ್ಲಿ ಪ್ರಸ್ತಾಪಿಸಲಾಗಿದೆ.

ಭ್ರಷ್ಟಾಚಾರ ಪ್ರಕರಣಗಳ ತನಿಖೆಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಲು ಅನುಕೂಲವಾಗುವಂತೆ ಲೋಕಾಯುಕ್ತ ಕಾಯ್ದೆಗೆ ಸೂಕ್ತ ತಿದ್ದುಪಡಿ ತರದಿದ್ದರೆ ರಾಜ್ಯದಲ್ಲಿ ಭ್ರಷ್ಟಾಚಾರ ನಿರ್ಮೂಲನೆ ಮಾಡಲು ಯಾರಿಂದಲೂ ಸಾಧ್ಯವಿಲ್ಲ ಎಂದೂ ಸಮಿತಿ ಅಭಿಪ್ರಾಯಪಟ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT