ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾವೇರಿ: ಶಾಲೆಗಳು ಪ್ರಾರಂಭ

ಶೇ 80ರಷ್ಟು ಶಾಲೆಗಳಿಗೆ ಪಠ್ಯಪುಸ್ತಕಗಳ ಪೂರೈಕೆ: ಡಿಡಿಪಿಐ ಅಂದಾನಪ್ಪ ವಡ್ಡಿಗೇರಿ
Last Updated 29 ಮೇ 2018, 12:59 IST
ಅಕ್ಷರ ಗಾತ್ರ

ಹಾವೇರಿ: ಜಿಲ್ಲೆಯ 1,555 ಪ್ರಾಥಮಿಕ, ಹಿರಿಯ ಪ್ರಾಥಮಿಕ ಹಾಗೂ 421 ಪ್ರೌಢಶಾಲೆಗಳು ಸೋಮವಾರ ಆರಂಭಗೊಂಡವು. ಶೈಕ್ಷಣಿಕ ವರ್ಷದ ಮೊದಲ ದಿನವನ್ನು ಶಾಲಾ ಆವರಣ ಸಿಂಗಾರ, ಸಿಹಿ ತಿಂಡಿ ವಿತರಣೆ, ಹೂವು ನೀಡುವುದು, ಜಾಥಾ, ಸಭೆ– ಸಮಾರಂಭಗಳ ಮೂಲಕ ವಿವಿಧ ಶಾಲೆಗಳು ವೈವಿಧ್ಯಮಯವಾಗಿ ಆಚರಿಸಿದವು.

ಪರೀಕ್ಷೆಯ ಬಳಿಕದ ರಜೆಯನ್ನು ಮುಗಿಸಿ, ಮತ್ತೆ ಶಾಲೆಗೆ ವಾಪಸಾದ ಮಕ್ಕಳು, ಮುಂದಿನ ತರಗತಿಗಳಿಗೆ ಹೆಜ್ಜೆ ಹಾಕಿದರು.

‘ಶಾಲಾ ಪ್ರಾರಂಭೋತ್ಸವವು ಆಯಾ ಶಾಲೆಗಳಲ್ಲಿ ಮಂಗಳವಾರ ನಡೆಯಲಿವೆ’ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ (ಡಿಡಿಪಿಐ) ಅಂದಾನಪ್ಪ ಎಂ. ವಡ್ಡಿಗೇರಿ ತಿಳಿಸಿದರು.

ಜಿಲ್ಲೆಯಲ್ಲಿ ಒಟ್ಟು 1,160 ಸರ್ಕಾರಿ ಪ್ರಾಥಮಿಕ ಶಾಲೆ, 140 ಸರ್ಕಾರಿ ಪ್ರೌಢ ಶಾಲೆ, 65 ಅನುದಾನಿತ ಪ್ರಾಥಮಿಕ ಶಾಲೆ, 157 ಅನುದಾನಿತ ಪ್ರೌಢ ಶಾಲೆ, 290 ಅನುದಾನ ರಹಿತ ಪ್ರಾಥಮಿಕ ಶಾಲೆ, 91 ಅನುದಾನ ರಹಿತ ಪ್ರೌಢ ಶಾಲೆ, ಸಮಾಜ ಕಲ್ಯಾಣ ಇಲಾಖೆಯ 37 ಪ್ರಾಥಮಿಕ ಶಾಲೆ, 28 ಪ್ರೌಢ ಶಾಲೆ, ಸ್ಥಳೀಯ ಸಂಸ್ಥೆಗಳ 1 ಪ್ರಾಥಮಿಕ ಶಾಲೆ, 2 ಪ್ರೌಢ ಶಾಲೆಗಳು ಸೋಮವಾರ ಆರಂಭಗೊಂಡಿವೆ.

ಜಿಲ್ಲೆಯಲ್ಲಿ ಒಟ್ಟು 2,67,654 ವಿದ್ಯಾರ್ಥಿಗಳು ಒಂದನೇ ತರಗತಿಯಿಂದ ಎಸ್‌ಎಸ್‌ಎಲ್‌ಸಿ ವರೆಗೆ ಕಲಿಯುತ್ತಿದ್ದಾರೆ. ಸುಮಾರು 2,800ಕ್ಕೂ ಅಧಿಕ ಮಕ್ಕಳು ವಿಶೇಷ ದಾಖಲಾತಿ ಮೂಲಕ ಒಂದನೇ ತರಗತಿಗೆ ದಾಖಲಾಗಿದ್ದಾರೆ.

ಶೇ 80ರಷ್ಟು ಶಾಲೆಗಳಿಗೆ ಈಗಾಗಲೇ ಪಠ್ಯಪುಸ್ತಕಗಳನ್ನು ಪೂರೈಸಲಾಗಿದೆ. ಪ್ರಾಥಮಿಕ ವಿದ್ಯಾರ್ಥಿಗಳಿಗೆ ಎರಡು ಜೊತೆ ಸಮವಸ್ತ್ರ, ಒಂದು ಜೊತೆ ಶೂ, ಎರಡು ಜೊತೆ ಸಾಕ್ಸ್‌ಗಳನ್ನು ಜೂನ್‌ ಮೊದಲ ವಾರದಲ್ಲಿ ಹಾಗೂ 8ನೇ ತರಗತಿ ಮಕ್ಕಳಿಗೆ ಬೈಸಿಕಲ್‌ಗಳನ್ನು ವಿತರಿಸಲಾಗುವುದು ಎಂದು ಡಿಡಿಪಿಐ ವಿವರಿಸಿದರು.

ಶಾಲೆ ಪ್ರಾರಂಭದ ದಿನದಿಂದಲೇ ಬಿಸಿ ಊಟ, ಹಾಲು ವಿತರಿಸಲಾಗುವುದು. ಜಿಲ್ಲಾ ಮಟ್ಟದ ಶಾಲಾ ಪ್ರಾರಂಭೋತ್ಸವ ಮೇ 29ರಂದು ಬೆಳಿಗ್ಗೆ 10.30ಕ್ಕೆ ನಗರದ ಎಂ.ಎಂ.ವೃತ್ತದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಲಿದೆ ಎಂದರು.

ಈ ಕಾರ್ಯಕ್ರಮದಲ್ಲಿ ಶಾಸಕ ನೆಹರು ಓಲೇಕಾರ, ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಕೊಟ್ರೇಶಪ್ಪ ಬಸೇಗಣ್ಣಿ, ಉಪಾಧ್ಯಕ್ಷೆ ದೀಪಾ ಅತ್ತಿಗೇರಿ, ಜಿಲ್ಲಾಧಿಕಾರಿ ಡಾ.ವೆಂಕಟೇಶ್ ಎಂ.ವಿ., ಜಿಲ್ಲಾ ಪಂಚಾಯ್ತಿಸಿಇಒ ಸಿ.ಟಿ. ಶಿಲ್ಪಾ ನಾಗ್‌, ಶಿಕ್ಷಣ ಹಾಗೂ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಅಬ್ದುಲ್‌ಮುನಾಫ್‌ ಯಲಿಗಾರ ಪಾಲ್ಗೊಳ್ಳಲಿದ್ದಾರೆ ಎಂದರು.

**
ಜಿಲ್ಲಾ ಮಟ್ಟದ ಶಾಲಾ ಪ್ರಾರಂಭೋತ್ಸವ ಮೇ 29ರಂದು ಬೆಳಿಗ್ಗೆ 10.30ಕ್ಕೆ ಹಾವೇರಿ ನಗರದ ಎಂ.ಎಂ.ವೃತ್ತದ ಸರ್ಕಾರಿ ಶಾಲೆಯಲ್ಲಿ ನಡೆಯಲಿದೆ
- ಅಂದಾನಪ್ಪ ವಡ್ಡಿಗೇರಿ, ಡಿಡಿಪಿಐ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT