ಕೊಡಗಿನಲ್ಲಿ ಟಿಪ್ಪು ಹೆಸರಿನ ನಾಯಿಗಳಿವೆ: ಅನಂತಕುಮಾರ ಹೆಗಡೆ ಟೀಕೆ

7
ಟಿಪ್ಪು ಜಯಂತಿಗೆ ಗೈರು; ರಾಜಕೀಯ ತಂತ್ರಗಾರಿಕೆ

ಕೊಡಗಿನಲ್ಲಿ ಟಿಪ್ಪು ಹೆಸರಿನ ನಾಯಿಗಳಿವೆ: ಅನಂತಕುಮಾರ ಹೆಗಡೆ ಟೀಕೆ

Published:
Updated:
Deccan Herald

ಶಿರಸಿ: ‘ಕಳೆದ 200 ವರ್ಷಗಳಲ್ಲಿ ಟಿಪ್ಪು ಹೆಸರಿಟ್ಟುಕೊಂಡ 20 ಜನರೂ ರಾಜ್ಯದಲ್ಲಿ ಇರಲಿಕ್ಕಿಲ್ಲ. ಆದರೆ ಅದಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಮಡಿಕೇರಿಯ ಬೀದಿಯೊಂದರಲ್ಲೇ ‘ಟಿಪ್ಪು’ ಹೆಸರಿನ ನಾಯಿಗಳಿವೆ!’– ಹೀಗೆಂದು ಕೇಂದ್ರ ಸಚಿವ ಅನಂತಕುಮಾರ ಹೆಗಡೆ, ತಮ್ಮ ಫೇಸ್‌ಬುಕ್ ಹಾಗೂ ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ.

‘ಟಿಪ್ಪು ಜಯಂತಿ ಸರ್ಕಾರಿ ಕಾರ್ಯಕ್ರಮವಾಗಿದೆ. ಮುಖ್ಯಮಂತ್ರಿ, ಉಪ-ಮುಖ್ಯಮಂತ್ರಿ , ದೇವೇಗೌಡರಾಗಲಿ ಕಾರ್ಯಕ್ರಮದಲ್ಲಿ ಹಾಜರಿರದೇ ತಾಂತ್ರಿಕವಾಗಿ ತಪ್ಪಿಸಿಕೊಳ್ಳುವ ಪ್ರಯತ್ನದಲ್ಲಿ ಯಶಸ್ವಿಯಾಗಿದ್ದಾರೆ. ಸಿದ್ದರಾಮಯ್ಯನ ಬೆನ್ನು ಮೇಲಿರುವ ತಿಪ್ಪೆ ಸುಲ್ತಾನನ್ನು, ತಮ್ಮ ಹೆಗಲ ಮೇಲೆ ಹಾಕಿಕೊಳ್ಳಲು ದೇವೇಗೌಡರಿಗೇನು ಸಣ್ಣ ರಾಜಕೀಯ ಪ್ರಾಯವೇ?’ ಎಂದು ಪ್ರಶ್ನಿಸಿದ್ದಾರೆ.

‘ಹೇಳಿ-ಕೇಳಿ ಟಿಪ್ಪು ಸುಲ್ತಾನ್ ಈ ದೇಶ ಕಂಡ ಅತ್ಯಂತ ದೊಡ್ಡ ಕ್ರೂರಿ ಭಯೋತ್ಪಾದಕ. ಮತ್ತೊಮ್ಮೆ ಮುಸ್ಲಿಮನಾಗಿ ಹುಟ್ಟುವ ದೇವೇಗೌಡರೂ ಟಿಪ್ಪು ಜಯಂತಿ ದಿನದಂದೇ ತಮ್ಮ ಕುಮಾರನನ್ನು ವಿಶ್ರಾಂತಿಗೆಂದು ಯಾವುದೋ ರೆಸಾರ್ಟ್‌ಗೆ ಕಳುಹಿಸಿ, ತಾವು ದುಬೈಗೆ ಈ ಇಳಿ ವಯಸ್ಸಿನಲ್ಲಿ ಶಾಪಿಂಗ್ ಗೆ ಹೋಗಿದ್ದಾರೇನೋ! ಚುನಾವಣೆಗೆ ಇನ್ನು ಕೇವಲ 6 ತಿಂಗಳುಗಳಿವೆ. ಅಷ್ಟರಲ್ಲೇ ಪಾಪ ಮುಸಲ್ಮಾನರನ್ನು ಹೀಗೆ ಅನಾಥವಾಗಿ ಬಿಟ್ಟು ಹೋಗಬಹುದೋ? ಇಲ್ಲ ಸ್ವಾಮಿ, ದೇವೇಗೌಡರ ಮರ್ಮವಿಷ್ಟೇ. ಟಿಪ್ಪುವಿನ ದಾಳಿಗೊಳಗಾದ ಪೂರ್ವಜರ ಶಾಪ ತಮ್ಮ ಕುಟುಂಬದ ಮೇಲೆ ಬೀಳದಿರಲಿ ಎಂದು ಅಧಿಕೃತ ಕಾರ್ಯಕ್ರಮದಿಂದ ಪಲಾಯನಗೈದಿದ್ದಾರೆ. ಶಾಪದ ತಾಪ ತಟ್ಟುವುದಿದ್ದದರೆ ಅದು ತಮ್ಮ ಮಾಜಿ ಶಿಷ್ಯನಿಗೆ ತಟ್ಟಲಿ ಅಥವಾ ಕೋಡಂಗಿ ರಾಜನಿಗೆ ತಟ್ಟಲಿ. ನಮ್ಮ ಕುಮಾರ ನೆಮ್ಮದಿಯಾಗಿ ರಾಜ್ಯವಾಳಲಿ. ಇದು ದೇವೇಗೌಡರ ರಾಜಕೀಯ ತಂತ್ರಗಾರಿಕೆ’ ಎಂದು ಸಾಮಾಜಿಕ ಜಾಲತಾಣದಲ್ಲಿ ಟೀಕಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 4

  Angry

Comments:

0 comments

Write the first review for this !