ಗುರುವಾರ , ಆಗಸ್ಟ್ 18, 2022
23 °C

ಕಾನ್‌ಸ್ಟೆಬಲ್‌, ಭೂಮಾಪನ ಸಿಬ್ಬಂದಿ ಮೇಲೆ ಹಲ್ಲೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹರಪನಹಳ್ಳಿ: ಲಾಕ್‌ಡೌನ್‌ ಇದ್ದು, ವಿನಾಕಾರಣ ಸಂಚಾರ ಮಾಡಬಾರದು ಎಂದು ತಡೆದು ಹೇಳಿದ ಕಾನ್‌ಸ್ಟೆಬಲ್‌ ಮತ್ತು ಭೂಮಾಪನ ಸಿಬ್ಬಂದಿಗೆ ಅವಾಚ್ಯವಾಗಿ ನಿಂದಿಸಿ ಹಲ್ಲೆ ನಡೆಸಿರುವ ಘಟನೆ ಇಲ್ಲಿನ ಚೆಕ್‌ಪೋಸ್ಟ್ ಬಳಿ ನಡೆದಿದೆ.

ಕಾನ್‌ಸ್ಟೆಬಲ್ ಗೋಣೆಪ್ಪ ಕಣ್ಣಿಗೆ  ಗುದ್ದಿ, ಕೈ ಕಚ್ಚಿದ್ದು, ತಡೆಯಲು ಹೋದ ಗೃಹರಕ್ಷಕ ದಳದ ಸಿಬ್ಬಂದಿ ರಾಜಪ್ಪ, ಗಣೇಶ್ ಅವರ ಮೇಲೂ ಹಲ್ಲೆ ನಡೆದಿದೆ. 

ಚೆಕ್‌ಪೋಸ್ಟ್‌ ಮೂಲಕ ಹೋಗುತ್ತಿದ್ದದೇವರ ತಿಮ್ಲಾಪುರ ಗ್ರಾಮದ ಜಟ್ಲೆಪ್ಪರ ವೆಂಕಟೇಶ, ಅಭಿಲಾಷ್ ಹಲ್ಲೆ ಮಾಡಿದ್ದು, ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಗೋಣೆಪ್ಪ ಅವರಿಗೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು