ಬುಧವಾರ, ಅಕ್ಟೋಬರ್ 23, 2019
25 °C

ಬಿಜೆಪಿಗೆ ಬಿಎಸ್‌ವೈ ಸುಪ್ರೀಂ: ಕಟೀಲ್‌

Published:
Updated:

ಚಿಕ್ಕೋಡಿ: ‘ರಾಜ್ಯ ಬಿಜೆಪಿಗೆ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರೇ ಸುಪ್ರೀಂ. ನಿತ್ಯವೂ ಎರಡು ಬಾರಿ ಅವರೊಂದಿಗೆ ನಾನು ಮಾತುಕತೆ ನಡೆಸುತ್ತೇನೆ. ಪದಾಧಿಕಾರಿಗಳ ನೇಮಕ ಸೇರಿ ಪ್ರತಿ ವಿಷಯದಲ್ಲೂ ಅವರ ಮಾರ್ಗದರ್ಶನ ಪಡೆಯುತ್ತೇನೆ. ನನ್ನ ಹಾಗೂ ಅವರ ಮಧ್ಯೆ ಯಾವುದೇ ಭಿನ್ನಮತ ಇಲ್ಲ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್ ಹೇಳಿದರು.

ಚಿಕ್ಕೋಡಿ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಗಾಂಧಿ ಸಂಕಲ್ಪಯಾತ್ರೆಗೆ ತಾಲ್ಲೂಕಿನ ಯೆಕ್ಸಂಬಾ ಗ್ರಾಮದ ಬೀರೇಶ್ವರ ಮಂದಿರದ ಬಳಿ ಬುಧವಾರ ಚಾಲನೆ ನೀಡಿ ಅವರು ಮಾತನಾಡಿದರು.

'ಬಿಜೆಪಿ ಅಧ್ಯಕ್ಷರಾದ ನಂತರತಮ್ಮ ಮತ್ತು ಯಡಿಯೂರಪ್ಪ ಮಧ್ಯೆ ಜಟಾಪಟಿ ನಡೆಯುತ್ತಿದೆ ಎಂದು ಮಾಧ್ಯಮಗಳಲ್ಲಿ ಟೀಕೆ ಟಿಪ್ಪಣಿಗಳು ಬರುತ್ತಿವೆ. ಈ ಬಗ್ಗೆ ಹೇಳಲು ಮಾಧ್ಯಮದವರು ಬ್ರಹ್ಮರಾ? ನಮ್ಮ ಮಧ್ಯೆ ಜಗಳ ಹುಟ್ಟುಹಾಕುವ ಕೆಲಸ ನಡೆಯುತ್ತಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಯಡಿಯೂರಪ್ಪ ಶ್ರೇಷ್ಠ ನಾಯಕ. ತಮ್ಮ ಬೆಳವಣಿಗೆಯಲ್ಲಿ ಅವರ ಮಾರ್ಗದರ್ಶನವಿದೆ. ಅವರು ಹೇಳಿದ ಮಾತುಗಳನ್ನು ನಾನು ಅಕ್ಷರಶಃ ಪಾಲಿಸುತ್ತೇನೆ' ಎಂದರು.

‘ರಾಜ್ಯದಲ್ಲಿ ನೆರೆ- ಬರದಂಥ ಸವಾಲಿನ ಕಾಲಘಟ್ಟದಲ್ಲಿ ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನಕ್ಕೇರಿದ್ದಾರೆ. ಅವರಿಗೆ ಬಲ ನೀಡುವುದು ನನ್ನ ಜವಾಬ್ದಾರಿ. ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರವೇ ಇದ್ದು, ಕಾರ್ಯಕರ್ತರು ಮತ್ತು ಪಕ್ಷದ ಪದಾಧಿಕಾರಿಗಳು ಎಚ್ಚರಿಕೆಯಿಂದ ಇರಬೇಕು. ಪಕ್ಷದ ವೇದಿಕೆ ಹೊರತುಪಡಿಸಿ ಬೇರೆಲ್ಲೂ ಬಹಿರಂಗ ಹೇಳಿಕೆ ನೀಡಬಾರದು’ ಎಂದು ಸೂಚಿಸಿದರು.

‘ಯಡಿಯೂರಪ್ಪ ನೇತೃತ್ವದಲ್ಲಿ ನಾನು ಹಾಗೂ ಬಿಜೆಪಿ ಸಂಸದರು ಸದ್ಯದಲ್ಲೇ ಪ್ರಧಾನಿ ಅವರನ್ನು ಭೇಟಿ ಮಾಡಿ ನೆರೆ ಪರಿಹಾರಕ್ಕೆ ಮನವಿ ಸಲ್ಲಿಸಲಿದ್ದೇವೆ' ಎಂದು ತಿಳಿಸಿದರು.

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರತಿಕ್ರಿಯಿಸಿ (+)