ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುರುಕಾಯ್ತು ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಟ್ವಿಟ್ ವಾರ್

Last Updated 15 ಜನವರಿ 2019, 19:01 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ‘ಆಪರೇಷನ್’ ಬಿಕ್ಕಟ್ಟು ಬಿಗಡಾಯಿಸಿದ ನಂತರ ಪ್ರಮುಖ ನಾಯಕರು ಮತ್ತು ಬಿಜೆಪಿ–ಕಾಂಗ್ರೆಸ್ ರಾಜ್ಯ ಘಟಕಗಳ ನಡುವೆ ಟ್ವಿಟರ್ ವಾರ್ ಸಹ ಆರಂಭವಾಗಿದೆ.

‘ಸಾಫ್ ನಿಯತ್, ಸಹಿ ವಿಕಾಸ್’ (ಸ್ವಚ್ಛ ಉದ್ದೇಶ, ಸಮರ್ಪಕ ಅಭಿವೃದ್ಧಿ) ಎನ್ನುವುದುಬಿಜೆಪಿಯ ಚುನಾವಣಾ ಘೋಷವಾಕ್ಯ. ಈ ಘೋಷವಾಕ್ಯವನ್ನೇ ಉಲ್ಲೇಖಿಸಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ.

‘ಮಿ.ಸಾಫ್ ನಿಯತ್ನರೇಂದ್ರ ಮೋದಿ ಅವರೇ, ಕರ್ನಾಟಕದ ನಿಮ್ಮ ನಾಚಿಕೆಗೆಟ್ಟ ಬಿಜೆಪಿ ನಾಯಕರಿಗೆಒಂದು ಸರ್ಕಾರವನ್ನು ಬೀಳಿಸಲು ಅವಕಾಶ ಕೊಡುವುದು ಪ್ರಜಾಪ್ರಭುತ್ವದಲ್ಲಿ ಸ್ವಚ್ಛ ಉದ್ದೇಶ ಎನಿಸಿಕೊಳ್ಳುತ್ತದೆಯೇ? ಕೇವಲ ಜಾಹೀರಾತು ಘೋಷವಾಕ್ಯಗಳು ನಿಮ್ಮ ನಿಜವಾದ ‘ಉದ್ದೇಶ’ವನ್ನು ಮರೆಮಾಚಲಾರವು. ನಿಜವಾದ ಅಭಿವೃದ್ಧಿ ರೆಸಾರ್ಟ್‌ಗಳಿಂದ ಆಚೆಗೆ ಬರಬೇಕು. ಮೊದಲು ನಿಮ್ಮ ನಿಯತ್ತನ್ನು ಜನರಿಗೆ ತೋರಿಸಿ!!’ ಎಂದು ಸಿದ್ದರಾಮಯ್ಯ ಟ್ವಿಟ್ ಮಾಡಿದ್ದಾರೆ.

ಸಿದ್ದರಾಮಯ್ಯ: 'ಚೌಕಿದಾರ್' ಪ್ರಧಾನಿ @narendramodi ಅವರೇ, ನಿಮ್ಮನ್ನು ದೇಶದ ಚೌಕಿದಾರ್ ಎಂದು ಹೇಳಿಕೊಳ್ತೀರಿ. ಈಗ ನಮ್ಮ ರಾಜ್ಯದ ಶಾಸಕರನ್ನು ಹೋಟೆಲ್ ಕೋಣೆಗಳಲ್ಲಿ ಕೂಡಿ ಹಾಕಿ ಕಾಯುತ್ತಿರುವ ಚೌಕಿದಾರ್ ಆಗಿಬಿಟ್ಟಿರಲ್ಲಾ... ಛೆ...

‘ಜನಪರ, ಅಭಿವೃದ್ಧಿಪರ ಸರ್ಕಾರ ಅಸ್ಥಿರಗೊಳಿಸುವ ಬಿಜೆಪಿಯ ಸತತ ಪ್ರಯತ್ನ ಯಶಸ್ವಿಯಾಗದು’ ಎಂದು ಕರ್ನಾಟಕ ಕಾಂಗ್ರೆಸ್ ಘಟಕ ಟ್ವಿಟ್ ಮಾಡಿದೆ. ‘ಇದು ಕೋಮುವಾದದ/ಭ್ರಷ್ಟಾಚಾರದ ವಿರುದ್ಧ ಸೈದ್ಧಾಂತಿಕ ವಿಚಾರಗಳ ಮೇಲೆ ರಚನೆಯಾದ ಸಂವಿಧಾನಬದ್ದ ಮೈತ್ರಿ ಸರ್ಕಾರ’ ಎಂದು ಕಾಂಗ್ರೆಸ್‌ ಹೇಳಿದೆ.

ಕುಮಾರಸ್ವಾಮಿ ವಿರುದ್ಧ ಹರಿಹಾಯ್ದಿರುವ ಬಿಜೆಪಿ ಕರ್ನಾಟಕ ಘಟಕ, ಕುಮಾರಸ್ವಾಮಿ ಅವರ ದಿನಚರಿಯನ್ನು ಟ್ವಿಟ್ ಮಾಡಿದೆ.

‘ನೀವು ಬೆಳಿಗ್ಗೆ ಸುಳ್ಳು ಭರವಸೆಗಳನ್ನು ನೀಡಿ ಪ್ರಚಾರ ಪಡೆಯುತ್ತಾ ಉಪಹಾರವನ್ನು ಆಸ್ವಾದಿಸುತ್ತೀರಿ. ಮಧ್ಯಾಹ್ನ ಆಪರೇಷನ್ ಕಮಲದ ಜಪ ಮಾಡುತ್ತಾ ಸರ್ಕಾರ ನಡೆಸುವಲ್ಲಿ ನೀವು ಮಾಡಿರುವ ತಪ್ಪುಗಳನ್ನು ಮುಚ್ಚಿಹಾಕಲು ಯತ್ನಿಸುತ್ತೀರಿ. ರಾತ್ರಿ ನಿಮ್ಮನಿಮ್ಮೊಳಗೆ ಅಧಿಕಾರಕ್ಕಾಗಿ ಕಿತ್ತಾಡುತ್ತೀರಿ’ ಎಂದು ತಿರುಗೇಟು ಕೊಟ್ಟಿದೆ.ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಇದನ್ನು ರಿಟ್ವಿಟ್ ಮಾಡಿದ್ದಾರೆ.

ಜನರಿಗೆ ಟ್ವಿಟರ್‌ನಲ್ಲಿ ಸಂಕ್ರಾಂತಿ ಶುಭಾಶಯ ಹೇಳಿರುವ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ.ದೇವೇಗೌಡ, ‘ರೈತ ಪರ ಸರ್ಕಾರವನ್ನು ಕದಡಿಸಲು ಯತ್ನಿಸುತ್ತಿರುವ ದುಷ್ಟ ಶಕ್ತಿಗಳ ಊರುಭಂಗವಾಗಲಿದೆ’ ಎಂದು ಮಾರ್ಮಿಕವಾಗಿ ನುಡಿದಿದ್ದಾರೆ.

ಬಿಜೆಪಿ ಕರ್ನಾಟಕ ಘಟಕ: ‘ನೀವು ಬೆಳಿಗ್ಗೆ ಸುಳ್ಳು ಭರವಸೆಗಳನ್ನು ನೀಡಿ ಪ್ರಚಾರ ಪಡೆಯುತ್ತಾ ಉಪಾಹಾರ ಆಸ್ವಾದಿಸುತ್ತೀರಿ. ಮಧ್ಯಾಹ್ನ ಆಪರೇಷನ್ ಕಮಲದ ಜಪ ಮಾಡುತ್ತಾ ಸರ್ಕಾರ ನಡೆಸುವಲ್ಲಿ ನೀವು ಮಾಡಿರುವ ತಪ್ಪುಗಳನ್ನು ಮುಚ್ಚಿಹಾಕಲು ಯತ್ನಿಸುತ್ತೀರಿ. ರಾತ್ರಿ ನಿಮ್ಮ ನಿಮ್ಮೊಳಗೆ ಅಧಿಕಾರಕ್ಕಾಗಿ ಕಿತ್ತಾಡುತ್ತೀರಿ’ ಎಂದು , ಕುಮಾರಸ್ವಾಮಿ ಅವರಿಗೆ ತಿರುಗೇಟು ಕೊಟ್ಟಿದೆ.

ಶೋಭಾ ಕರಂದ್ಲಾಜೆ: ಕಾಂಗ್ರೆಸ್‌ನ ಆಂತರಿಕ ಕಲಹ ಈಗ ಬಯಲಿಗೆ ಬಂದಿದೆ. ಜೆಡಿಎಸ್‌ ನಾಯಕರು ಒಂದು ವಿಷಯವನ್ನು ಯಾವತ್ತೂ ಮರೆಯಬಾರದು. ಕುಮಾರಸ್ವಾಮಿ ಅವರು 2010ರಲ್ಲಿ 16 ಶಾಸಕರನ್ನು ಗೋವಾಕ್ಕೆ ಕರೆದುಕೊಂಡು ಹೋಗಿ ರೈತಸ್ನೇಹಿ ಬಿ.ಎಸ್‌.ಯಡಿಯೂರಪ್ಪ ಸರ್ಕಾರವನ್ನು ಅತಂತ್ರಗೊಳಿಸಲು ಯತ್ನಿಸಲಿಲ್ಲವೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT