ಬುಧವಾರ, ನವೆಂಬರ್ 13, 2019
22 °C

‘ಕೋಮಲಿ’ ಹಕ್ಕು ಬೋನಿ ಕಪೂರ್ ಕೈಯಲ್ಲಿ

Published:
Updated:

ಅಮಿತಾಭ್‌ ಬಚ್ಚನ್‌ ಅಭಿನಯದ ‘ಪಿಂಕ್‌’ ಸಿನಿಮಾದ ಹಕ್ಕು ಪಡೆದು ತಮಿಳಿನಲ್ಲಿ ಸಿನಿಮಾ ನಿರ್ಮಾಣ ಮಾಡುತ್ತಿರುವ ಬೋನಿ ಕಪೂರ್ ಇದೀಗ ತಮಿಳಿನ ಸೂಪರ್‌ಹಿಟ್ ಸಿನಿಮಾ ‘ಕೋಮಲಿ’ ಸಿನಿಮಾದ ಹಕ್ಕು ಪಡೆದುಕೊಂಡಿದ್ದಾರೆ.

ನಿರ್ಮಾಪಕ ಬೋನಿ ಕಪೂರ್‌ ‘ಕೋಮಲಿ’ ಸಿನಿಮಾವನ್ನು ಬಾಲಿವುಡ್‌ಗೆ ತರುವ ಉದ್ದೇಶ ಹೊಂದಿದ್ದಾರೆ. ತಮ್ಮದೇ ಸಂಸ್ಥೆ ‘ಬೇವಿವ್‌’ ಮೂಲಕ ಈ ಸಿನಿಮಾವನ್ನು ರಿಮೇಕ್‌ ಮಾಡಲು ಅವರು ನಿರ್ಧರಿಸಿದ್ದಾರೆ. ಈ ಸಿನಿಮಾವನ್ನು ಪುತ್ರ ಅರ್ಜುನ್‌ ಕಪೂರ್‌ಗಾಗಿ ಮಾಡುತ್ತಿದ್ದಾರೆ. ತೆಲುಗು ಹಾಗೂ ಕನ್ನಡದಲ್ಲಿಯೂ ಈ ರಿಮೇಕ್‌ ಮಾಡುವುದಾಗಿ ಬೋನಿ ಕಪೂರ್ ಇತ್ತೀಚಿಗೆ ಹೇಳಿಕೊಂಡಿದ್ದಾರೆ.

‘ಕೋಮಲಿ’ ಸಿನಿಮಾದ ಹಕ್ಕು ಸಿಕ್ಕಿರುವುದು ಖುಷಿಯ ವಿಚಾರ. ಪ್ರಪಂಚದ ಎಲ್ಲಾ ಕಡೆ ಈ ಬಿಡುಗಡೆ ಮಾಡುವ ಉದ್ದೇಶ ಇದೆ. ಭಾರತದ ಹಲವು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಹಿಂದಿ ಅವತರಿಣಿಕೆಯಲ್ಲಿ ಅರ್ಜುನ್ ಕಪೂರ್‌ ನಾಯಕನಾಗಿ ಕೆಲಸ ಮಾಡಲಿದ್ದಾರೆ’ ಎಂದು ಇತ್ತೀಚಿನ ಸಂದರ್ಶನದಲ್ಲಿ ಅವರು ಹೇಳಿದ್ದಾರೆ.

ಕೋಮಾದಿಂದ ಹೊರಬಂದ ವ್ಯಕ್ತಿಯೊಬ್ಬ ಇಂದಿನ ಪರಿಸ್ಥಿತಿಗೆ ಹೊಂದಿಕೊಳ್ಳಲು ಕಷ್ಟಪಡುವ ಕತೆಯನ್ನು ಈ ಸಿನಿಮಾ ಹೊಂದಿದೆ. ಬೋನಿ ಕಪೂರ್ ಈಗ ಅಜಯ್‌ ದೇವಗನ್ ಅವರೊಂದಿಗೆ ‘ಮೈದಾನ್‌’ ಸಿನಿಮಾ ಮಾಡುತ್ತಿದ್ದಾರೆ. ಭಾರತದ ಫುಟ್‌ಬಾಲ್‌ ತಂಡವನ್ನು ಕುರಿತಾದ ಸಿನಿಮಾ ಇದಾಗಿದೆ. ಇವರ ಮೊದಲ ತೆಲುಗು ಸಿನಿಮಾ ‘ಬಧಾಯಿ ಹೋ’ ರಿಮೇಕ್‌ ಸಿದ್ಧತೆ ಈಗಾಗಲೇ ಶುರುವಾಗಿದೆ.

ಪ್ರತಿಕ್ರಿಯಿಸಿ (+)