ಬಜೆಟ್ ಮಂಡನೆ: ಅಭಿಪ್ರಾಯ ಭೇದ ಇದೆ ಎಂದು ಒಪ್ಪಿಕೊಂಡ ಪರಮೇಶ್ವರ

7

ಬಜೆಟ್ ಮಂಡನೆ: ಅಭಿಪ್ರಾಯ ಭೇದ ಇದೆ ಎಂದು ಒಪ್ಪಿಕೊಂಡ ಪರಮೇಶ್ವರ

Published:
Updated:

ಬೆಂಗಳೂರು: ದೋಸ್ತಿ ಸರ್ಕಾರದ ನೂತನ ಬಜೆಟ್ ಮಂಡನೆ ವಿಷಯದಲ್ಲಿ ಅಭಿಪ್ರಾಯ ಭೇದ ಇದೆ ಎಂಬುದನ್ನು ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪಮುಖ್ಯಮಂತ್ರಿ ಜಿ. ಪರಮೇಶ್ವರ ಒಪ್ಪಿಕೊಂಡಿದ್ದಾರೆ.

ಸೊಮವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಬಜೆಟ್ ಮಂಡನೆ ಬಗ್ಗೆ ಸಿದ್ದರಾಮಯ್ಯನವರಿಗೆ ಅಸಮಾಧಾನ ಇದೆಯೋ, ಮುಖ್ಯಮಂತ್ರಿ ಅವರಿಗೆ ಇದೆಯೋ ಅಥವಾ ನನಗೆ ಇದೆಯೋ ಎಂಬ ಬಗ್ಗೆ  ಚರ್ಚೆ ಮಾಡುತ್ತೇವೆ. ಸಿದ್ದರಾಮಯ್ಯ ಬೇಡ ಅಂದರು, ನಾನು ಬೇಡ ಎಂದಿದ್ದೇನೆ, ಭಿನ್ನಾಭಿಪ್ರಾಯ ಉಂಟಾಗಿದೆ ಎಂಬುದೆಲ್ಲ ಮಾಧ್ಯಮದವರ ಕಲ್ಪನೆ. ಎಲ್ಲರಿಗೂ ಅವರದ್ದೇ ಆದ ಅಭಿಪ್ರಾಯ ಇರುತ್ತದೆ. ಅದನ್ನು ಭಿನ್ನಾಭಿಪ್ರಾಯ ಎಂದು ಬಿಂಬಿಸಲಾಗುತ್ತಿದೆ ಎಂದರು.

ಸಿದ್ದರಾಮಯ್ಯ ಅವರ ಆರೋಗ್ಯದ  ಬಗ್ಗೆ ವಿಚಾರಿಸಲು ಉಜಿರೆಗೆ ಹೋಗಿದ್ದೆ. ಸಂಪುಟ ವಿಸ್ತರಣೆ, ನಿಗಮ ಮಂಡಳಿ ನೇಮಕದ ಬಗ್ಗೆ ಚರ್ಚೆ ಮಾಡಿದ್ದೇವೆ ಎಂದೂ ಅವರು ಹೇಳಿದರು.

ಕೆಲ ದಿನಗಳ ಬಳಿಕ ಸಿದ್ದರಾಮಯ್ಯ ಬೆಂಗಳೂರಿಗೆ ಬರಲಿದ್ದಾರೆ. ಆಗ ಸಮನ್ವಯ ಸಮಿತಿ ಸಭೆ ಕರೆಯುತ್ತಾರೆ. ಅಲ್ಲಿ ಎಲ್ಲವನ್ನೂ  ಚರ್ಚೆ ಮಾಡುತ್ತೇವೆ ಎಂದರು.

ಸಂಪುಟ ವಿಸ್ತರಣೆ ಯಾವಾಗಲಾದ್ರೂ ಆಗಬಹುದು ಎಂದು ಅವರು ಪ್ರತಿಕ್ರಿಯಿಸಿದರು.

ಬರಹ ಇಷ್ಟವಾಯಿತೆ?

 • 3

  Happy
 • 1

  Amused
 • 0

  Sad
 • 1

  Frustrated
 • 2

  Angry

Comments:

0 comments

Write the first review for this !